Ambedkhar : ಇನ್ಮುಂದೆ 500 ರೂ ನೋಟ್ ಮೇಲೆ ಗಾಂಧಿ ಬದಲು ಅಂಬೇಡ್ಕರ್ ಚಿತ್ರ ಮುದ್ರಣ? BJP ಸರ್ಕಾರದಿಂದಲೇ ನಿರ್ಧಾರ?
Ambedkhar: ಭಾರತೀಯ ರೂಪಾಯಿ ನೋಟುಗಳ ಕುರಿತು ಆಗಾಗ ಕೆಲವೊಂದು ವಿಚಾರಗಳು ಚರ್ಚೆಗೆ ಬರುತ್ತದೆ. ಹೊಸ ನೋಟುಗಳ ಚಲಾವಣೆ ಆಗುತ್ತದೆ, ಕೆಲವು ನೋಟುಗಳ ಬದಲಾವಣೆ ಆಗುತ್ತದೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತವೆ. ಬಳಿಕ ಅದಕ್ಕೆ ಆರ್‌ಬಿಐ ಸ್ಪಷ್ಟೀಕರಣ ಕೊಟ್ಟು ಆ ವಿಚಾರ ಸುಳ್ಳು ಎಂದು ಸಾಬೀತು ಮಾಡುತ್ತದೆ. ಇದೀಗ ಮತ್ತೆ ಎಂತದ್ದೇ ವಿಚಾರ ಒಂದು ಚರ್ಚೆಗೆ ಬಂದಿದ್ದು 500 ರೂಪಾಯಿ ನೋಟುಗಳ ಮೇಲೆ ಗಾಂಧೀಜಿ ಚಿತ್ರ ಬದಲಿಗೆ ಅಂಬೇಡ್ಕರ್ ಅವರ ಚಿತ್ರವನ್ನು ಹಾಕಲಾಗುವುದು ಎಂಬ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.
ಹೌದು, ದೇಶದಲ್ಲಿ ಅಂಬೇಡ್ಕರ್(Ambedkhar ) ಕುರಿತಾದ ಹೇಳಿಕೆಯ ವಿಚಾರವೊಂದು ಭಾರಿ ವಿವಾದಕ್ಕೆ ಕಾರಣವಾದ ಬಳಿಕ ಈ ರೀತಿಯ ಹೊಸ ವಿಚಾರವೊಂದು ಮುನ್ನಲೆಗೆ ಬಂದಿದೆ. ಅದು ಕೂಡ ಬಿಜೆಪಿ ಸರ್ಕಾರವು ಡಾ. ಅಂಬೇಡ್ಕರ್ ಅವರ ಜನ್ಮದಿನದಂದು ಅವರ ಫೋಟೋದೊಂದಿಗೆ ಹೊಸ 500 ರೂಪಾಯಿಗಳನ್ನು ಮುದ್ರಿಸಲು ಯೋಜಿಸುತ್ತಿದೆ ಎಂದು ಹೇಳಿಕೊಳ್ಳಲಾಗುತ್ತಿದೆ.
ಎಕ್ಸ್ ಬಳಕೆದಾರರೊಬ್ಬರು ಈ ವೈರಲ್ ಚಿತ್ರವನ್ನು ಪೋಸ್ಟ್ ಮಾಡಿ, ‘‘ಈ ಬಾರಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಬಿಜೆಪಿ ಸರ್ಕಾರವು 500 ರೂಪಾಯಿ ನೋಟಿನ ಮೇಲೆ ಅಂಬೇಡ್ಕರ್ ಅವರ ಚಿತ್ರವನ್ನು ಮುದ್ರಿಸಲು ಹೊರಟಿದೆ’’ ಎಂದು ಬರೆದಿದ್ದಾರೆ. ಈ ರೀತಿಯ ಪೋಸ್ಟ್ ಕಂಡ ಬಳಿಕ ಅನೇಕರು ಈ ಪೋಸ್ಟ್ ಅನ್ನು ತಮ್ಮ ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಏನಿದು ಹೊಸ ಸುದ್ದಿ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಂಬೇಡ್ಕರ್ ಭಾವಚಿತ್ರವಿರುವ 500 ರೂಪಾಯಿ ನೋಟಿನ ಫೋಟೊ ಫೇಕ್ ಆಗಿದ್ದು, ಇದನ್ನು ಎಐ ಟೂಲ್ ಬಳಸಿ ಎಡಿಟ್ ಮಾಡಲಾಗಿದೆ. ಅಲ್ಲದೇ ಅಂಬೇಡ್ಕರ್ ಫೋಟೊ ಮುದ್ರಿಸುತ್ತೇವೆ ಎಂದು ಕೇಂದ್ರ ಸರ್ಕಾರ ಎಲ್ಲಿಯೂ ಹೇಳಿಲ್ಲ. ಇನ್ನು ಆರ್‌ಬಿಐ ವೆಬ್‌ಸೈಟ್‌ನಲ್ಲೂ ಸಹ 500 ನೋಟಿನಲ್ಲಿ ಗಾಂಧಿ ಫೋಟೊ ಇದ್ದು, ಅಲ್ಲಿಯೂ ಸಹ ಈ ಬಗ್ಗೆ ಯಾವುದೇ ವಿಷಯವಿಲ್ಲ. ಹೀಗಾಗಿ ಇದೊಂದು ಫೇಕ್ ಫೋಟೊ ಆಗಿದೆ.
ಅಲ್ಲದೆ ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಹೊಸ ಸರಣಿಯ ಎಲ್ಲಾ ನೋಟುಗಳು ಮಹಾತ್ಮ ಗಾಂಧಿಯವರ ಚಿತ್ರವನ್ನು ಒಳಗೊಂಡಿರುತ್ತವೆ. ಮಹಾತ್ಮಗಾಂಧಿ ಸರಣಿಯ ಹೊಸ ನೋಟುಗಳು ಅದರಲ್ಲೂ 500 ರೂಪಾಯಿ ನೋಟು ಬದಲಾಗಿಲ್ಲ. ರಿಸರ್ವ್ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಕೂಡ ಇಲ್ಲ.
kuşadası bayan escort Kuşadası’nın doğal güzellikleriyle büyülendik. https://sp35lodz.edu.pl/