Manmohan Singh ಇಲ್ಲದಿದ್ದರೆ 1991ರಲ್ಲಿ ಇಡೀ ದೇಶವೇ ಮುಳುಗುತ್ತಿತ್ತು- ಅರ್ಥ ವ್ಯವಸ್ಥೆಯೇ ಅಸ್ತವ್ಯವಸ್ಥೆಯಾಗುತ್ತಿತ್ತು!! ಹಾಗಿದ್ರೆ ಅಂದು ಆಗಿದ್ದೇನು? ಸಿಂಗ್ ಮಾಡಿದ್ದೇನು?
Manmohan Singh: ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೆಹಲಿಯಲ್ಲಿ ನಿಧನರಾಗಿದ್ದಾರೆ. ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ದಶಕಗಳ ಕಾಲ ದೇಶದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ ಅವರು ಭಾರತದ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.
ಡಾ. ಮನಮೋಹನ್ ಸಿಂಗ್( Manmohan Singh) ಅವರು ಪ್ರಧಾನಿ ಹುದ್ದೆಯನ್ನು ಅರಸಿ ಹೋದವರಲ್ಲ, ಪ್ರಧಾನಿ ಹುದ್ದೆಯೇ ಅವರನ್ನು ಹುಡುಕಿ ಬಂದಿತ್ತು. 2004ರಲ್ಲಿ ಯುಪಿಎ ಬಹುಮತ ಪಡೆದು ಅಧಿಕಾರಕ್ಕೆ ಬಂಧಾನ ಸೋನಿಯಾ ಗಾಂಧಿ ಪ್ರಧಾನಿಯಾಗುವ ಅವಕಾಶವಿತ್ತು, ಆದರೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಗೆ ಮನಮೋಹನ್ ಸಿಂಗ್‌ರ ಹೆಸರನ್ನು ಸೂಚಿಸಿದರು.ರಿಸರ್ವ್ ಬ್ಯಾಂಕ್ ಗವರ್ನರ್, ಮಾಜಿ ಹಣಕಾಸು ಸಚಿವರು ಮತ್ತು ದಕ್ಷಿಣ ಆಯೋಗದ ಪ್ರಧಾನ ಕಾರ್ಯದರ್ಶಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಡಾ ಮನಮೋಹನ್ ಸಿಂಗ್ ಪ್ರಧಾನಿಯಾಗಿ ಆಯ್ಕೆಯಾದಾಗ ಎಲ್ಲರೂ ಅಚ್ಚರಿಗೊಂಡಿದ್ದರು. ಬಳಿಕ ಅವರನ್ನು ‘ಆಕಸ್ಮಿಕ ಪ್ರಧಾನಿ’ ‘ಮೌನಿ ಬಾಬಾ’ ಎಂದೆಲ್ಲಾ ಬಿಂಬಿಸಲಾಗಿತ್ತು. ಆದರೆ ಪ್ರಧಾನಿಯಾಗಿ ಆರ್ಥಿಕ ಸಚಿವರಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ ಎಂದೆಂದೂ ಮರೆಯಲಾಗದು. ಅವರಿಲ್ಲದಿದ್ದರೆ 1991-92ರಲ್ಲಿ ಭಾರತ ಆರ್ಥಿಕವಾಗಿ ಕುಗ್ಗುತ್ತಿತ್ತು ಎಂದು ಹೇಳಲಾಗುತ್ತದೆ. ಅವರು ಆಗಿನ ಪ್ರಧಾನಿ ನರಸಿಂಹರಾವ್ ಅವರೊಂದಿಗೆ ಭಾರತದ ಆರ್ಥಿಕ ದಿಕ್ಕನ್ನು ಬದಲಾಯಿಸಿದರು.
ಕೇಂದ್ರ ಹಣಕಾಸು ಸಚಿವರಾಗಿ ಸಿಂಗ್:
ಯಸ್, 1991 ರಿಂದ 1996 ರವರೆಗೆ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾದ ಬಳಿಕ ಮುನ್ನಲೆಗೆ ಬಂದರು. ಭಾರತದ ಆರ್ಥಿಕ ಚಿತ್ರಣ ಬದಲಿಸುವ ಹಲವು ಸುಧಾರಣೆಗಳನ್ನು ತಂದರು. 2004 ರಿಂದ 2014 ರವರೆಗೆ ದಶಕಗಳ ಕಾಲ ಪ್ರಧಾನಿಯಾಗಿದ್ದ ಅವರು, ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದರು. ಭಾರತದಲ್ಲಿ ವಿದೇಶಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿದ್ದು ಅವರು ಹಣಕಾಸು ಸಚಿವರಾಗಿದ್ದ ಕಾಲದಲ್ಲಿ. ಕೈಗಾರಿಕೆಗಳ ಅಭಿವೃದ್ಧಿಗೆ ಇದು ಬುನಾದಿಯಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ವೇಗ ನೀಡಿತು.
1991-92ರ ಬಜೆಟ್ ನೀಡಿತು ಹೊಸ ದಿಕ್ಕು :
ಅಲ್ಲದೆ 24 ಜುಲೈ 1991 ರಂದು ಮಂಡಿಸಿದ ಬಜೆಟ್‌ನಲ್ಲಿ ಆರ್ಥಿಕ ಸುಧಾರಣೆಗಳನ್ನು ವೇಗಗೊಳಿಸಲಾಯಿತು. ಬಜೆಟ್‌ನಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಹೆಚ್ಚಿಸಲಾಯಿತು ಮತ್ತು ಮೂಲದಲ್ಲಿ ತೆರಿಗೆ ಕಡಿತವನ್ನು (ಟಿಡಿಎಸ್) ಪರಿಚಯಿಸಲಾಯಿತು. ಜೊತೆಗೆ, ಮ್ಯೂಚುವಲ್ ಫಂಡ್‌ಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಗೆ ಅವಕಾಶ ನೀಡಲಾಯಿತು.
ಒಟ್ಟಿನಲ್ಲಿ 1991ರ ಬಜೆಟ್ ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯದ ನಾಂದಿಯಾಗಿ ಕಾಣಿಸಿಕೊಂಡಿದೆ. ಇದುವರೆಗೆ, ಈ ಬಜೆಟ್ ಅನ್ನು ದೇಶದ ಆರ್ಥಿಕತೆಯನ್ನು ಸಶಕ್ತಗೊಳಿಸಿದ ಪ್ರಮುಖ ಹೆಜ್ಜೆಯಾಗಿ ಗುರುತಿಸಲಾಗುತ್ತದೆ.
Kuşadası Escort Kuşadası’nın çarşısında alışveriş yapmak oldukça eğlenceliydi. https://portalturystykiaktywnej.pl