Squid Game Season 2: ‘ಸ್ಕ್ವಿಡ್ ಗೇಮ್ ಸೀಸನ್ 2’ ಪ್ರಾರಂಭ; ಎಲ್ಲಿ ಮತ್ತು ಯಾವ ಸಮಯದಲ್ಲಿ ಈ ಸರಣಿ ವೀಕ್ಷಿಸಲು ಸಾಧ್ಯ? ಇಲ್ಲಿದೆ ವಿವರ
Netflix ನ ಫೇಮಸ್ ಸರಣಿ Squid Game ನ ಎರಡನೇ ಸೀಸನ್ ರಿಲೀಸ್ ಆಗಿದೆ. ಮೊದಲನೆ ಸೀಸನ್ ವೀಕ್ಷಿಸಿದ ಭಾರತೀಯ ಪ್ರೇಕ್ಷಕರಲ್ಲಿ ಈ ಸರ್ವೈವಲ್ ಥ್ರಿಲ್ಲರ್‌ಗಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ. ಇದೀಗ ಈ ಕಾಯುವಿಕೆ ಮುಗಿದ್ದು, ಇಂದು ರಿಲೀಸ್ ಆಗಿದೆ. ಈ ಸರ್ವೈವಲ್ ಥ್ರಿಲ್ಲರ್‌ನಲ್ಲಿ ಅದ್ಭುತವಾದ ತಿರುವುಗಳು ಕಂಡುಬರಲಿವೆ. ಸ್ಕ್ವಿಡ್ ಗೇಮ್ ಇಂದು ಬಿಡುಗಡೆಯಾಗಲಿದ್ದು, ಎರಡನೇ ಸೀಸನ್ ಎಷ್ಟು ಹೊತ್ತಿಗೆ? ಎಲ್ಲಿ ನೋಡಬಹುದು ಇಲ್ಲಿದೆ ಸಂಪೂರ್ಣ ವಿವರ.
ಸ್ಕ್ವಿಡ್ ಗೇಮ್ ಸೀಸನ್ 2: ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು?
ಭಾರೀ ಜನಪ್ರಿಯತೆ ಪಡೆದ ಕೊರಿಯನ್ ಸರಣಿ ಸ್ಕ್ವಿಡ್ ಗೇಮ್‌ನ ಸೀಸನ್ 2 ಡಿಸೆಂಬರ್ 26, 2024 ರಂದು ವಿಶ್ವಾದ್ಯಂತ ನೆಟ್‌ಫ್ಲಿಕ್ಸ್ ಚಂದಾದಾರರಿಗಾಗಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಈ ಸೀಸನ್‌ನಲ್ಲಿ 7 ಸಂಚಿಕೆಗಳಿವೆ ಮತ್ತು ಎಲ್ಲಾ ಏಳು ಎಪಿಸೋಡ್‌ಗಳನ್ನು ಏಕಕಾಲದಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಸ್ಕ್ವಿಡ್ ಗೇಮ್ ಸೀಸನ್ 2 ಪ್ರಪಂಚದಾದ್ಯಂತ ವಿವಿಧ ದೇಶಗಳಲ್ಲಿ ವಿಭಿನ್ನ ಸಮಯಗಳಲ್ಲಿ ಸ್ಟ್ರೀಮ್ ಆಗಲಿದೆ. ಭಾರತೀಯ ಪ್ರೇಕ್ಷಕರಿಗೆ ಸಮಯ ಮಧ್ಯಾಹ್ನ 12.30. ಅಂದರೆ ಡಿಸೆಂಬರ್ 26 ರಂದು ಮಧ್ಯಾಹ್ನದ ನಂತರ ನೀವು ಈ ಅದ್ಭುತ ಕೊರಿಯನ್ ಸರಣಿಯನ್ನು ಆನಂದಿಸಬಹುದು.
ಸ್ಕ್ವಿಡ್ ಗೇಮ್ ಸೀಸನ್ 2 ರಲ್ಲಿ ಈ ಬಾರಿಯ ವಿಶೇಷತೆ ಏನು?
ಈ ಆಟದ ಕಥೆಯು 3 ವರ್ಷಗಳ ನಂತರ ಪ್ರಾರಂಭವಾಗುತ್ತದೆ ಆಟದ ಆಟಗಾರನ ಸಂಖ್ಯೆ 456 ಹಿಂದಿನ ಆಟದಿಂದ ಗೆದ್ದು, ಭಾರೀ ಮೊತ್ತದ ಹಣವನ್ನು ಪಡೆಯುತ್ತಾನೆ. ಅಂದರೆ ಹಳೆ ಧಾರಾವಾಹಿ ಎಲ್ಲಿ ಕೊನೆಗೊಂಡಿತೋ ಅಲ್ಲಿಂದ ಕಥೆ ಶುರುವಾಗುತ್ತದೆ.
ಸ್ಕ್ವಿಡ್ ಗೇಮ್ ಸೀಸನ್ 2 ರ ತಾರಾ ಬಳಗ
ಈ ಸರಣಿಯಲ್ಲಿ, ಲೀ ಜಂಗ್-ಜೇ ಜೋ ಗಿ-ಹನ್ ಆಗಿ ಮರಳುತ್ತಿದ್ದರೆ, ವೈ ಹಾ-ಜೂನ್ ಪತ್ತೇದಾರಿ ಹ್ವಾಂಗ್ ಜುನ್-ಹೋ ಆಗಿ ಹಿಂತಿರುಗುತ್ತಿದ್ದಾರೆ. ಈ ಸರಣಿಯಲ್ಲಿ, ಕಳೆದ ಬಾರಿ ಬಹಳ ಕಷ್ಟದಿಂದ ತನ್ನ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದ ಗಿ-ಹನ್ ಕಥೆಯನ್ನು ತೋರಿಸಲಾಗುತ್ತದೆ.