Kazakhstan Plane Crash: 67 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಪತನ; 38 ಮಂದಿ ಸಾವು, ಕಝಾಕಿಸ್ತಾನ್ ಅಪಘಾತಕ್ಕೆ ನಿಜವಾದ ಕಾರಣ ಪತ್ತೆ

Kazakhstan Plane Crash: ಕಝಾಕಿಸ್ತಾನ್‌ನಿಂದ ರಷ್ಯಾಕ್ಕೆ ತೆರಳುತ್ತಿದ್ದ ಪ್ರಯಾಣಿಕ ವಿಮಾನವು ಬುಧವಾರ (ಡಿಸೆಂಬರ್ 25) ದೇಶದ ಅಕ್ಟೌ ನಗರದ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ. ಈ ಮಾಹಿತಿಯನ್ನು ಕಝಾಕಿಸ್ತಾನ್ ತುರ್ತು ಸಚಿವಾಲಯ ನೀಡಿದೆ. ಈ ಅವಘಡಕ್ಕೆ ಕಾರಣಗಳ ಬಗ್ಗೆ ದೊಡ್ಡ ಮಾಹಿತಿ ಹೊರಬಿದ್ದಿದೆ.

ಬುಧವಾರ ಪಶ್ಚಿಮ ಕಝಾಕಿಸ್ತಾನ್‌ನಲ್ಲಿ ಪತನಗೊಂಡ ಅಜರ್‌ಬೈಜಾನ್ ಏರ್‌ಲೈನ್ಸ್ ಪ್ರಯಾಣಿಕ ವಿಮಾನದೊಳಗೆ ಆಮ್ಲಜನಕ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಕಝಾಕಿಸ್ತಾನ್ ಮಾಧ್ಯಮಗಳು ವರದಿ ಮಾಡಿವೆ. ವಿಮಾನದಲ್ಲಿ 67 ಮಂದಿ ಇದ್ದರು. ವಿಮಾನ ಪತನಗೊಳ್ಳುವ ಮುನ್ನವೇ ಪ್ರಯಾಣಿಕರು ಮೂರ್ಛೆ ಹೋಗಲಾರಂಭಿಸಿದ್ದರು ಎಂದೂ ಅವರು ಹೇಳಿದ್ದಾರೆ.

ರಾಯಿಟರ್ಸ್ ವರದಿಯ ಪ್ರಕಾರ, ಅಜರ್‌ಬೈಜಾನ್ ಏರ್‌ಲೈನ್ಸ್ ಫ್ಲೈಟ್ J2-8243 ತನ್ನ ನಿಗದಿತ ಮಾರ್ಗದಿಂದ ನೂರಾರು ಮೈಲುಗಳಷ್ಟು ಹಾರಿ ಕ್ಯಾಸ್ಪಿಯನ್ ಸಮುದ್ರದ ಎದುರು ಕರಾವಳಿಯಲ್ಲಿ ಅಪಘಾತಕ್ಕೀಡಾಯಿತು. ಈ ಬಗ್ಗೆ ರಷ್ಯಾದ ವಾಯುಯಾನ ನಿಯಂತ್ರಕರು ಪಕ್ಷಿಗಳ ಡಿಕ್ಕಿಯಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದರು. ಈ ಅಪಘಾತದಲ್ಲಿ 32 ಮಂದಿ ಬದುಕುಳಿದಿದ್ದಾರೆ.

ವಿಮಾನದಲ್ಲಿ 67 ಮಂದಿ ಇದ್ದರು ಎಂದು ಅಜರ್‌ಬೈಜಾನ್ ಏರ್‌ಲೈನ್ಸ್ ತಿಳಿಸಿದೆ. 62 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು. ಈ ದುರ್ಘಟನೆಯಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಅಜರ್‌ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ರಷ್ಯಾ ಪ್ರವಾಸವನ್ನು ಮಧ್ಯದಲ್ಲಿಯೇ ರದ್ದು ಮಾಡಿದ್ದು, ಗುರುವಾರ (ಡಿಸೆಂಬರ್ 26) ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ.


 

Leave A Reply

Your email address will not be published.