Nandini Products: ನಂದಿನಿಯಿಂದ ಪ್ರೋಟೀನ್ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆ
Nandini Products: ಎಲ್ಲರ ಮನೆ ಮನೆಯ ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳ ಪಟ್ಟಿಯಲ್ಲಿ ಹೊಸ ಉತ್ಪನ್ನ ಸೇರ್ಪಡೆಯಾಗಿದೆ. ಇದೀಗ ಪ್ರೋಟೀನ್‌ಯುಕ್ತ ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.
ವಿಧಾನಸೌಧದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿನಿ ಬ್ರ್ಯಾಂಡ್‌ನ ರೆಡಿ ಟು ಕುಕ್ ನಂದಿನಿ ವೇ ಪ್ರೋಟೀನ್ ಆಧಾರಿಕ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಈ ದೋಸೆ, ಇಡ್ಲಿ ಹಿಟ್ಟಿನಲ್ಲಿ ಶೇ.5 ರಷ್ಟು ಪ್ರೋಟೀನ್ ಅಂಶವನ್ನು ಸೇರಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಮಾರಾಟ ಮಾಡಲು ನಿರ್ಧಾರ ಮಾಡಲಾಗಿದೆ. ನಂತರ ಬೇಡಿಕೆಯ ಮೇರೆಗೆ ಇತರ ಜಿಲ್ಲೆಗಳಿಗೆ ವಿಸ್ತರಿಸಲು ಚಿಂತನೆ ನಡೆಸಲಾಗಿದೆ.
ದೋಸೆ ಹಾಗೂ ಇಡ್ಲಿ ಹಿಟ್ಟಿನ 450 ಗ್ರಾಂ ತೂಕವಿದ್ದು ಇದಕ್ಕೆ 40 ರೂಪಾಯಿ ಮತ್ತು 900 ಗ್ರಾಂ ತೂಕದ ಪ್ಯಾಕೆಟ್‌ಗೆ 80 ರೂ. ನಿಗದಿ ಮಾಡಲಾಗಿದೆ.