Kasturi: ‘ಜೈಲಲ್ಲಿ ನನ್ನ ಬೆತ್ತಲೆ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಕೂಡ ಬಿಡಲಿಲ್ಲ’ – ಖ್ಯಾತ ನಟಿ ಅಳಲು !!

Kasturi : ವಿವಾದಾತ್ಮಕ ಹೇಳಿಕೆಗಳಿಂದ ತಮಿಳು ನಟಿ ಕಸ್ತೂರಿ ಪದೇ ಪದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇತ್ತೀಚಿಗೆ ಅವರು ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಜನರ ಬಗ್ಗೆ ಸಮಾವೇಶವೊಂದರಲ್ಲಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಚೆನ್ನೈ ಪೊಲೀಸರ ವಿಶೇಷ ತಂಡ ನವೆಂಬರ್ 16ರಂದು ಹೈದರಾಬಾದ್‌ನಲ್ಲಿ ಆಕೆಯನ್ನು ಬಂಧಿಸಿದ್ದರು. ಬಳಿಕ ಚೆನ್ನೈ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಹಾಜರು ಪಡಿಸಿದ್ದರು. ಬಳಿಕ ನವೆಂಬರ್ 29ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ತಾನು ಜೈಲಿನಲ್ಲಿ ಅನುಭವಿಸಿದ ನರಕಯಾತನೆಯನ್ನು ತಿಳಿಸಿದ್ದಾರೆ. ಜೈಲು ಅಧಿಕಾರಿಗಳ ಅಮಾನುಷ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಸ್ ತಮಿಳು ನಟಿ ಕಸ್ತೂರಿ(Kasturi) ಅವರನ್ನು ಚೆನ್ನೈ ಪೊಲೀಸರು ಇದೆ ನವೆಂಬರ್ 16ರಂದು ಹೈದರಾಬಾದ್‌ನಲ್ಲಿ ಬಂಧನಕ್ಕೊಳಪಡಿಸಿದ್ದರು. ನಂತರ ಚೆನ್ನೈ ಮ್ಯಾಜಿಸ್ಟ್ರೇಟ್ ಕೋರ್ಟ್ ನವೆಂಬರ್ 22ರಂದು ಅವರಿಗೆ ಜಾಮೀನು ನೀಡಿತ್ತು. ಮೂರೂ ದಿನ ಜೈಲಿನಲ್ಲಿ ಇದ್ದ ಅವರು ಅಲ್ಲಿ ಅನುಭವಿಸಿದ ನೋವು ಎಷ್ಟು ಕರುಣಾಜನಕವಾಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.

ಜೈಲು ಸಿಬ್ಬಂದಿ ಪರಿಶೀಲನೆ ನೆಪದಲ್ಲಿ ಸಂಪೂರ್ಣವಾಗಿ ಬಟ್ಟೆ ಬಿಚ್ಚಿಸುತ್ತಾರೆ. ಮೈಯೆಲ್ಲಾ ಮುಟ್ಟಿ ಪರಿಶೀಲನೆ ಮಾಡುತ್ತಾರೆ. ಪ್ರೈವೇಟ್ ಪಾರ್ಟ್ ಅನ್ನೂ ಬಿಡುವುದಿಲ್ಲ. ಅಲ್ಲಿ ಏನಾದರೂ ಇಟ್ಟುಕೊಂಡಿದ್ದೇವಾ ಅಂತಾ ಚಕ್ ಮಾಡುತ್ತಾರೆ. ಒಳ ಉಡುಪುಗಳಲ್ಲಿ ಬಸ್ಕಿ ಹೊಡೆಯುವಂತೆ ಸೂಚಿಸುತ್ತಾರೆ. ಅತ್ಯಂತ ಅಸಹ್ಯವಾಗಿ ನಡೆಸಿಕೊಳ್ಳುತ್ತಾರೆ ಎಂದು ಕಸ್ತೂರಿ ಕೆಲವೊಂದು ಅಚ್ಚರಿ ಸತ್ಯಗಳನ್ನು ಹೊರಗೆಡಹಿದ್ದಾರೆ.

Leave A Reply

Your email address will not be published.