UI Collection : ನೂರು ಕೋಟಿಯಲ್ಲಿ ನಿರ್ಮಾಣವಾದ ‘ಯುಐ’ ಮೂರು ದಿನಗಳಲ್ಲಿ ಗಳಿಸಿದ್ದೆಷ್ಟು ಗೊತ್ತಾ?
UI Collection : ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದಂತಹ ಉಪೇಂದ್ರ ನಿರ್ದೇಶನ ಮತ್ತು ನಟನೆಯ ‘ಯುಐ’ ಸಿನಿಮಾ ರಿಲೀಸ್ ಆಗಿತ್ತು ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಈ ಬೆನ್ನಲ್ಲೇ 100 ಕೋಟಿ ಬಜೆಟ್ ನಲ್ಲಿ ಮೂಡಿ ಬಂದ ಈ ಸಿನಿಮಾ ರಿಲೀಸ್ ಆದ ಬಳಿಕ ಗಳಿಸಿದ್ದೆಷ್ಟು ಎಂಬ ಕುತೂಹಲ ಕೂಡ ಇದೀಗ ಅಭಿಮಾನಿಗಳಲ್ಲಿ ಕಾಡತೊಡಗಿದೆ. ಹಾಗಿದ್ರೆ ರಿಲೀಸ್ ಆದ ಮೂರು ದಿನಗಳಲ್ಲಿ ಸಿನಿಮಾ ಗಳಿಸಿದೆಷ್ಟು ಎಂದು ನೋಡೋಣ.
ಯಸ್.. ನಿರೀಕ್ಷೆಯಂತೆ ಉಪೇಂದ್ರ ತಮ್ಮ ವಿಭಿನ್ನ ನಿರ್ದೇಶನದ ಶೈಲಿಯನ್ನು ಈ ಚಿತ್ರದಲ್ಲಿಯೂ ಮುಂದುವರಿಸಿದ್ದು ಪ್ರೇಕ್ಷಕರ ಮನೆ ಗೆಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ. ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಈ ಚಿತ್ರ 5ನೇ ದಿನದ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಮೊದಲ ಮೂರು ದಿನಗಳಲ್ಲಿ ಚಿತ್ರ 21.2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ಸ್ ತಿಳಿಸಿದ್ದಾರೆ.
ಅಲ್ಲದೆ ಕನ್ನಡ ಚಲನಚಿತ್ರರಂಗದ ಇತರೆ ಚಿತ್ರತಂಡಗಳ ಹಾಗೆ ಯುಐ ಚಿತ್ರತಂಡ ಸಹ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಅನ್ನೋ ಘೋಷಣೆ ಮಾಡದೇ ಸುಮ್ಮನಿದೆ. ಇದು ಇನ್ನು ಕುತೂಹಲಕೋ ಕಾರಣವಾಗಿದೆ.