Gold Suresh : ಹನುಮಂತು ಮದುವೆಯನ್ನು ಮುಂದೆ ನಾನೇ ಮಾಡಿಸ್ತೀನಿ -ಮಾತು ಕೊಟ್ಟ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್
Gold Suresh: ಉತ್ತಮ ಪಟ್ಟ ಪಡೆದು ಕ್ಯಾಪ್ಟನ್ ಆಗಿ ತನ್ನ ಪೌರುಷವನ್ನು ತೋರಲು ರೆಡಿಯಾಗಿದ್ದಂತಹ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್ ಅವರು ತಮ್ಮ ಉದ್ಯಮದ ವ್ಯವಹಾರದ ಕಾರಣದಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಹೊರಬಂದ ಬೆನ್ನಲ್ಲೇ ಅವರು ತಾನೇಕೆ ಮನೆಯಿಂದ ಇದ್ದಕ್ಕಿದ್ದಂತೆ ಹೊರ ನಡೆದೆ ಎಂಬುದರ ಕುರಿತು ಸ್ಪಷ್ಟೀಕರಣ. ಈ ನಡುವೆಯೇ ಅವರು ಬಿಗ್ ಬಾಸ್ ಕಂಟೆಸ್ಟೆಂಟ್ ಹನುಮಂತ ಅವರ ಮದುವೆಯನ್ನು ಮುಂದೆ ನಾನೇ ಮಾಡಿಸುತ್ತೇನೆ ಎಂದು ಮಾತು ನೀಡಿದ್ದಾರೆ.
ಹೌದು ಗೋಲ್ಡ್ ಸುರೇಶ್(Gold Suresh) ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರನ್ನು ಅನೇಕ ಮಾಧ್ಯಮಗಳು ಸಂದರ್ಶನ ಮಾಡಿವೆ. ಈ ಸಂದರ್ಶನದ ವೇಳೆ ಅವರು ಬಿಗ್ ಬಾಸ್ ಮನೆಯ ಹಲವು ಅನುಭವಗಳನ್ನು ತೆರೆದಿಟ್ಟಿದ್ದಾರೆ. ಅಲ್ಲದೆ ಕೆಲವು ಕಂಟೆಸ್ಟೆಂಟ್ಗಳ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಹನುಮಂತು ಕುರಿತು ತುಂಬಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಹನುಮಂತು(Hanumantu) ಅವರೇ ಬಿಗ್ಬಾಸ್ ಗೆಲ್ಲೋದು. ಆತ ನನ್ನ ಅಳಿಯ. ಆತ ನನ್ನನ್ನು ಮಾವ.. ಮಾವ.. ಅಂತಾನೇ ಹೇಳೋದು. ಮುಂದೆ ಅವನ ಮದುವೆಯನ್ನೂ ನಾನೇ ಮಾಡಿದೋದು. ಆತ ತುಂಬಾ ಒಳ್ಳೆಯ ಹುಡುಗ. ಇವತ್ತಿನವರೆಗೂ ಅವನ ಮೇಲೆ ನಾನು ಕೂಗಾಡಿದ್ದೇ ಇಲ್ಲ. ಒಮ್ಮೊಮ್ಮೆ ಕೋಪ ಬರ್ತಿತ್ತು. ಆದ್ರೂ ಏನೋ ತರ್ಲೆ ಮಾಡಿ ಕೋಪ ಮರೆಸ್ತಿದ್ದ. ಅವನನ್ನು ಕಂಡರೆ ನನಗೆ ಯಾಕೋ ಗೊತ್ತಿಲ್ಲ, ಸಿಕ್ಕಾಪಟ್ಟೆ ಪ್ರೀತಿ ಎಂದಿದ್ದಾರೆ ಗೋಲ್ಡ್ ಸುರೇಶ್.
ಅಲ್ಲದೆ ಲಾಯರ್ ಜಗದೀಶ್ ಮತ್ತು ಧನರಾಜ್ ಮೇಲೂ ನನಗೆ ಅಪಾರ ಪ್ರೀತಿ ಇತ್ತು. ತುಂಬಾ ಅಟ್ಯಾಚ್ಮೆಂಟ್ ಇತ್ತು. ಅದನ್ನು ಬಿಟ್ಟರೆ ಬೇರೆಯವರ ಮೇಲೆ ಅಷ್ಟೊಂದು ಅಟ್ಯಾಚ್ಮೆಂಟ್ ಇರಲಿಲ್ಲ ಎಂದಿರುವ ಗೋಲ್ಡ್ ಸುರೇಶ್, ಹನುಮಂತು ಸದ್ಯ ಒಳಗೇ ಇದ್ದಾನೆ. ಆದರೆ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಮೊದಲು ಜಗದೀಶ್ ಅವರಿಗೆ ಕಾಲ್ ಮಾಡಿದೆ. ಅವರನ್ನು ಬಿಗ್ಬಾಸ್ ಮನೆಯಲ್ಲಿ ತುಂಬಾ ಮಿಸ್ ಮಾಡಿಕೊಳ್ತಿದ್ದೆ. ಅದಕ್ಕಾಗಿ ಅವರಿಗೆ ಕಾಲ್ ಮಾಡಿದೆ. ಅವರು ಯಾವಾಗಲೂ ನನ್ನನ್ನು ಏಯ್ ಗೋಲ್ಡು ಎಂದೇ ರೇಗಿಸೋರು. ಆರಂಭದಲ್ಲಿ ನಮ್ಮಿಬ್ಬರ ನಡುವೆ ಸ್ವಲ್ಪ ಕೋಪ ತಾಪ ಇತ್ತು. ಅದರೆ ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.