BBK11: ದೊಡ್ಮನೆಯ ಕ್ಯಾಪ್ಟನ್ಸಿ ಆಟದಲ್ಲಿ ಮತ್ತೊಮ್ಮೆ ಕ್ಯಾಪ್ಟನ್ಸಿ ಕಿರೀಟ ಹೊತ್ತ ಭವ್ಯಾ ಗೌಡ; ಈ ವಾರ ಆಚೆ ಹೋಗುವ ಸ್ಪರ್ಧಿಗಿದೆ ಗುಡ್‌ನ್ಯೂಸ್
ಕಳಪೆ ಪಟ್ಟ ಹೊತ್ತು ಮತ್ತೆ ಜೈಲು ಸೇರಿದ ಚೈತ್ರಾ
BBK11: ದೊಡ್ಮನೆಯಲ್ಲಿ ಆಟ ರಂಗೆದಿದ್ದೆ. ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ಆಟ ಆಡುತ್ತಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋ ಇದೀಗ 82 ನೇ ದಿನಕ್ಕೆ ಕಾಲಿಟ್ಟಿದೆ. 14 ನೇ ವಾರಕ್ಕೆ ಕಾಲಿಡಲು ಸಜ್ಜಾಗಿರೋ ಸ್ಪರ್ಧಿಗಳಲ್ಲಿ ಈ ಬಾರಿ ಮನೆಯಿಂದ ಆಚೆ ಹೋಗಲು ಪ್ರಬಲ ನಾಲ್ಕು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.
ತ್ರಿವಿಕ್ರಮ್, ರಜತ್, ಮೋಕ್ಷಿತಾ, ಹನುಮಂತ ಈ ನಾಲ್ಕು ಮಂದಿ 13 ನೇ ವಾರಕ್ಕೆ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದು, ಈ ಬಾರಿ ಒಟ್ಟು 10 ಸ್ಪರ್ಧಿಗಳು ಸೇವ್ ಆಗಿದ್ದಾರೆ. ಈ 10 ಸ್ಪರ್ಧಿಗಳಲ್ಲಿ ನಾಲ್ಕು ಮಂದಿ ನಾಮಿನೇಟ್ ಆಗಿದ್ದು ಆರು ಸ್ಪರ್ಧಿಗಳು ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದಾರೆ.
ಕ್ಯಾಪ್ಟನ್ಸಿ ಓಟದಲ್ಲಿ ಭವ್ಯಾ ಮತ್ತು ಐಶ್ವರ್ಯ ಅವರು ಫೈನಲಿಸ್ಟ್ ಆಗಿದ್ದು, ಇಂದು ಇವರಿಗೆ ಕ್ಯಾಪ್ಟನ್ಸಿ ಟಾಸ್ಕ್ ಇರಲಿದೆ. ಇವತ್ತು ರಿಲೀಸ್ ಆಗಿರುವ ಪ್ರೊಮೋ ಪ್ರಕಾರ ಭವ್ಯಾ ಅವರು ದೊಡ್ಮನೆಯಲ್ಲಿ ಎರಡನೇ ಬಾರಿ ಮಹಿಳಾ ಕ್ಯಾಪ್ಟನ್ಸಿ ಯಾಗಿದ್ದಾರೆ.
ಇನ್ನೊಂದು ಕಡೆ ವೀಕ್ಷಕರಿಗೆ ನಾಮಿನೇಟ್ ಆದವರನ್ನು ಸೇವ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿಲ್ಲ. ಇದು ವೀಕ್ಷಕರಿಗೆ ಅನುಮಾನ ಮೂಡಲು ದಾರಿ ಮಾಡಿಕೊಟ್ಟಿದೆ. ನಾಮಿನೇಟ್ ಆದ ಸ್ಪರ್ಧಿಗಳ ಹೆಸರನ್ನು ಬಿಗ್‌ಬಾಸ್ ಘೋಷಣೆ ಮಾಡಿದ್ದಾರೆ. ಆದರೆ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಇನ್ನು ಕಳಪೆ ವಿಚಾರದಲ್ಲಿ ಈ ಬಾರಿಯೂ ಚೈತ್ರಾ ಕುಂದಾಪುರ ಜೈಲಿಗೆ ಹೋಗಿದ್ದಾರೆ. ಮಾತಿನ ಚಕಮಕಿ ದೊಡ್ಮನೆಯಲ್ಲಿ ಈ ಬಾರಿಯೂ ಕಳಪೆ ವಿಚಾರದಲ್ಲಿ ಜೋರಾಗಿದೆ.
ಹಾಗಾಗಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎಂಬುವುದು ಖಚಿತ. ಇದು ಮನೆಯಲ್ಲಿರುವ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹಾಗಾದರೆ ಭಾನುವಾರದ ಸಂಚಿಕೆಯಲ್ಲಿ ಟ್ವಿಸ್ಟ್ ಇರಲಿದೆಯೇ? ಕಾದು ನೋಡಬೇಕು.