Gold Suresh: ಬಿಗ್ ಬಾಸ್ ಮನೆಯಿಂದ ಯಾಕೆ ಹೊರಬಂದೆ? ಕೊನೆಗೂ ಕಾರಣ ತಿಳಿಸಿದ ಗೋಲ್ಡ್ ಸುರೇಶ್

Gold Suresh: ಉತ್ತಮ ಪಟ್ಟ ಪಡೆದು ಕ್ಯಾಪ್ಟನ್ ಆಗಿ ತನ್ನ ಪೌರುಷವನ್ನು ತೋರಲು ರೆಡಿಯಾಗಿದ್ದಂತಹ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್ ಅವರು ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. “ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್‌ಬಾಸ್‌ಗಿಂತಲೂ, ಅವರ ಕುಟುಂಬಕ್ಕೆ ಹೆಚ್ಚು ಅಗತ್ಯ. ಈ ಕೂಡಲೇ ಅವರು ಮನೆಯಿಂದ ಹೊರಬರಬೇಕು” ಎಂದು ಬಿಗ್‌ ಬಾಸ್‌ ಹೇಳುತ್ತಿದ್ದಂತೆ, ಆತಂಕದಲ್ಲಿಯೇ ಹೊರ ನಡೆದರು. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದಿದ್ದಾರೆ. ಅಷ್ಟಕ್ಕೂ ಸುರೇಶ್ ದೊಡ್ಮನೆಯಿಂದ ಹೊರಬರಲು ಏನು ಕಾರಣ? ನಿಕೋರಿತೋ ಗೋಲ್ಡ್ ಸುರೇಶ್ ಅವರ ಸ್ಪಷ್ಟೀಕರಣ ನೀಡಿದ್ದಾರೆ ಎನ್ನಲಾಗಿದೆ.

ಯಸ್, ಬಿಗ್ ಬಾಸ್ ಅನೌನ್ಸ್ ಮಾಡುತ್ತಿದ್ದಂತೆ ಗೋಲ್ಡ್ ಸುರೇಶ್(Gold Suresh)ರವರು ದೊಡ್ಡ ತೊಂದರೆ ಆಗಿರಬಹುದೇ ಎಂದು ಊಹಿಸಿ ಅಳಲು ಶುರು ಮಾಡಿದರು. ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದೆ. ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ನಿಜವಿಲ್ಲ. ಖುದ್ದು ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಮೊಣಕಾಲು ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ನಮ್ಮ ಮನೆ ಹಾಗೂ ಊರಲ್ಲಿ ಯಾರಿಗೂ ಏನ‌ು ಸಮಸ್ಯೆ ಇಲ್ಲ. ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೆ ಗೋಲ್ಡ್ ಸುರೇಶ್ ನೀಡಿದ ಕಾರಣವೇನು ಗೊತ್ತಾ?

ಗೋಲ್ಡ್ ಸುರೇಶ್ ಅವರು ನಡೆಸುತ್ತಿದ್ದ ಬ್ಯುಸಿನೆಸ್​ ನಲ್ಲಿ ದೊಡ್ಡ ಮಟ್ಟದಲ್ಲಿ ಏರುಪೇರಾಗಿದ್ದ ಹಿನ್ನೆಲೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯ್ತು ಎಂದು ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗ್ತಿದೆ. ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸಿದ ಕಾರಣ ಮನೆಯವರು ಹೊರಗೆ ಕರೆಸುವಂತೆ ಕೇಳಿಕೊಂಡಿದ್ರು ಎನ್ನಲಾಗ್ತಿದೆ. ಹೀಗಾಗಿ ನಾನು ಹೊರಗೆ ಬಂದೆ ಎಂದು ಸುರೇಶ್ ಹೇಳಿದ್ದಾರೆ ಎನ್ನಲಾಗಿತ್ತು.

ಈ ಕುರಿತು ಸ್ವತಃ ಗೋಲ್ಡ್ ಸುರೇಶ್ ಅವರೇ ಕಲರ್ಸ್ ಕನ್ನಡದಲ್ಲಿ ಲೈವ್ ಬಂದು ತಾನೇಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದೆ ಎಂಬ ಕಾರಣವನ್ನು ತೆರೆದಿಟ್ಟಿದ್ದಾರೆ. ಅದೇನೆಂದರೆ ಗೋಲ್ಡ್ ಸುರೇಶ್ ಅವರು ದೊಡ್ಡ ಉದ್ಯಮಿ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಬಿಗ್ ಬಾಸ್ ಮನೆಗೆ ಬರುವ ಸಂದರ್ಭದಲ್ಲಿ ತಮ್ಮ ಎಲ್ಲ ವ್ಯವಹಾರದ ಜವಾಬ್ದಾರಿಗಳನ್ನು ಮಡದಿಗೆ ವಹಿಸಿ ಬಂದಿದ್ದರು. ಇದನ್ನು ಅವರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಆದರೆ ಕೊನೆಗಳಿಗೆ ಎಲ್ಲಿ ಅದರ ನಿರ್ವಹಣೆ ಕಷ್ಟ ಸಾಧ್ಯ ಎಂದಾಗ gold ಸುರೇಶ್ ಅವರ ಸಹಕಾರ ತುಂಬಾ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಅವರು ಗೋಲ್ಡ್ ಸುರೇಶ್ ಅವರನ್ನು ಅನಿವಾರ್ಯವಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಕರೆಸಿಕೊಳ್ಳುವ ಸಂದರ್ಭ ಬಂದೊದಗಿತು. ಈ ವಿಚಾರವನ್ನು ಸ್ವತಹ ಗೋಲ್ಡ್ ಸುರೇಶ್ ಅವರೇ ಇನ್ಸ್ಟಾಗ್ರಾಮ್ ನ ಕಲರ್ಸ್ ಕನ್ನಡ ಮುಖಪುಟದಲ್ಲಿ ಲೈವ್ ಬಂದು ಹೇಳಿದ್ದಾರೆ.

https://www.instagram.com/reel/DDwENyVhROj/?igsh=MWZsN3ZoMHl0NnowYw==

 

 

Leave A Reply

Your email address will not be published.