Marriage : ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಪತ್ನಿಯರು – ನಮಾಜ್ ಮಾಡ್ತಾರೆ, ಹನುಮಾನ್ ಚಾಲೀಸ್ ಕೂಡ ಪಠಿಸ್ತಾರೆ !!
Marriage : ದೇಶದಲ್ಲಿ ಲವ್ ಜಿಹಾದ್ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾದದನ್ನು ನಾವು ನೋಡಿದ್ದೇವೆ. ಇಷ್ಟೇ ಅಲ್ಲದೆ ಅನ್ಯಕೋಮಿನ ಯುವಕನೊಂದಿಗೆ ಅಥವಾ ಯುವತಿಯೊಂದಿಗೆ ಯಾರಾದರೂ ಓಡಾಡುವುದನ್ನು ಕಂಡರೆ ಬೇರೆ ಬೇರೆ ಸಂಘಟನೆಗಳು ಅದನ್ನು ವಿರೋಧಿಸುವುದನ್ನು ನಾವು ಕಂಡಿದ್ದೇವೆ. ಆದರೂ ಇದರ ನಡುವೆ ಅನ್ಯ ಧರ್ಮೀಯರನ್ನು ಅನ್ಯ ಮತದವರನ್ನು ಮದುವೆಯಾಗಿ ಅನೇಕರು ಸುಖ ಸಂಸಾರವನ್ನು ನಡೆಸುತ್ತಿರುವ ಬಗ್ಗೆ ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಅಂತೆಯೇ ಇಲ್ಲೊಬ್ಬ ಯುವಕ ಮುಸ್ಲಿಂ ಧರ್ಮದವರನ್ನು ಮದುವೆಯಾಗಿದ್ದಾನೆ. ಆದರೆ ಈತ ಮದುವೆಯಾಗಿದ್ದು ಒಬ್ಬರನ್ನು ಮಾತ್ರವಲ್ಲ. ಇಬ್ಬರು ಹೆಂಗಸರನ್ನು. ಎಸ್.. ಇವನಿಗೆ ಇಬ್ಬರು ಹೆಂಡತಿಯರು. ಆದರೆ ಅಚ್ಚರಿಯೇನೆಂದರೆ ಆ ಇಬ್ಬರು ಹೆಂಡತಿಯರು ಕೂಡ ಮುಸ್ಲಿಮರೆಂಬುದು.!
ಹೌದು, ಹಿಂದೂ ಯುವಕನಿಗೆ ಇಬ್ಬರು ಮುಸ್ಲಿಂ ಹೆಂಡತಿಯರಿದ್ದಾರೆ.! ಇದನ್ನು ಕೇಳಿದರೆ ಆಶ್ಚರ್ಯ ಎನಿಸಬಹುದು..! ಆದರೆ ಇದು ಸತ್ಯ ಸತ್ಯ ಸತ್ಯ. ಈ ರೀತಿ ಇಬ್ಬರು ಮುಸ್ಲಿಂ ಮಹಿಳೆಯರನ್ನು ಮದುವೆಯಾದ ಆತ ತರುಣ್ ಗುಪ್ತಾ (Tarun Gupta) ಎನ್ನುವ ವ್ಯಕ್ತಿ. ಈತ ಸ್ವತಹ ತಾನು ಇಬ್ಬರು ಮುಸ್ಲಿಂ (Muslim) ಹುಡುಗಿಯರನ್ನು ಮದುವೆ ಆಗಿರೋದಾಗಿ ಹೇಳಿದ್ದಾನೆ.
ಇಲ್ಲಿದೆ ನೋಡಿ ವಿನೂತನ ದಂಪತಿಯ ಲವ್ ಸ್ಟೋರಿ:
ತರುಣ್ ಗುಪ್ತಾ ಲಕ್ನೋ ನಿವಾಸಿ. ಸನಾ ಹಾಗೂ ಫಿಜಾ ಮನ್ಸೂರಿ ಎಂಬ ಇಬ್ಬರು ಹುಡುಗಿಯರನ್ನು ಈತ ಮದುವೆ ಆಗಿದ್ದಾನೆ. ಇಬ್ಬರು ಪತ್ನಿಯರ ಜೊತೆ ಒಂದೇ ಮನೆಯಲ್ಲಿ ತರುಣ್ ಗುಪ್ತಾ ವಾಸವಾಗಿದ್ದಾನೆ. ಮೊದಲ ಪತ್ನಿ ಸಾನಾ ಹಾಗೂ ಈತನು ಒಂದೇ ಕಂಪ್ಯೂಟರ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ಮೊದಲ ಪತ್ನಿ ಸನಾಗೆ ತರುಣ್ ಪ್ರಪೋಸ್ ಮಾಡಿದ್ದ. ಇಬ್ಬರು ಒಪ್ಪಿ ನಂತ್ರ ಇಬ್ಬರ ಮದುವೆ ನಡೆದಿತ್ತು. 2022ರಲ್ಲಿ ಇವರಿಬ್ಬರು ಕೋರ್ಟ್ ಮ್ಯಾರೇಜ್ ಮಾಡ್ಕೊಂಡಿದ್ದಾರೆ.
ಬಳಿಕ ಒಂದು ವರ್ಷದ ನಂತ್ರ ತರುಣ್, ಇನ್ನೊಬ್ಬ ಮುಸ್ಲಿಂ ಹುಡುಗಿಯನ್ನು ಭೇಟಿಯಾಗಿದ್ದ. ಐಎಎಸ್ಗೆ ತಯಾರಿ ನಡೆಸುತ್ತಿದ್ದ ಫಿಜಾ ಮನ್ಸೂರಿಯ ಪ್ರೀತಿಯಲ್ಲಿ ಬಿದ್ದಿದ್ದ. ಮೂರು ವರ್ಷ ವರ್ಕ್ ಫ್ರಂ ಹೋಮ್ ಮಾಡಿ ಮನೆಯಿಂದ ಹೊರಬಿದ್ದ ತರುಣ್ ಗೆ ಫಿಜಾ ಮನ್ಸೂರಿ ಮೇಲೆ ಮನಸ್ಸಾಗಿತ್ತು. ಆರಂಭದಲ್ಲಿ ಈ ವಿಷ್ಯ ಕೇಳಿ ಸನಾ ಶಾಕ್ ಆಗಿದ್ದಳು. ಇಬ್ಬರ ಮಧ್ಯೆ ಹೊಡೆದಾಡುವಷ್ಟು ಗಲಾಟೆ ನಡೆದಿತ್ತು. ತರುಣ್ ಪರಿಸ್ಥಿತಿ ಅರಿತು ಎರಡನೇ ಮದುವೆಗೆ ಒಪ್ಪಿಕೊಂಡೆ ಎಂದು ಸನಾ ಹೇಳಿದ್ದಾಳೆ. ಫಿಜಾ ಮನ್ಸೂರಿ ಹಾಗೂ ತರುಣ್ 2023ರಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ನಮಗೆ ಸಮಸ್ಯೆಯಾಗಿಲ್ಲ. ನಾವಿಬ್ಬರು ಸಹೋದರಿಯರಂತೆ ಬದುಕುತ್ತಿದ್ದೇವೆ.
ಅಲ್ಲದೆ ಇವರಿಗೆ ಒಂದು ಮಗು ಕೂಡ ಇದೆ. ಇಬ್ಬರು ಪತ್ನಿಯರು ಒಂದೇ ಬಾರಿ ಗರ್ಭ ಧರಿಸಿದ್ರಂತೆ. ಒಬ್ಬರಿಗೆ ಗರ್ಭಪಾತವಾಗಿದ್ದು, ಇನ್ನೊಬ್ಬರಿಗೆ ಮಗು ಜನಿಸಿದೆ. ಆದ್ರೆ ಮಗು ಯಾರದ್ದು ಎಂಬುದನ್ನು ದಂಪತಿ ಮುಚ್ಚಿಟ್ಟಿದ್ದಾರೆ. ಮಗುವನ್ನು ಮೂವರೂ ಪ್ರೀತಿಯಿಂದ ನೋಡಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ವಿಶೇಷವೆಂದರೆ ತರುಣ್ ಪತ್ನಿಯರು ಹಿಂದೂ ಧರ್ಮದ ಸಂಪ್ರದಾಯ ಹಾಗೂ ಮುಸ್ಲಿಂ ಧರ್ಮದ ಸಂಪ್ರದಾಯ ಎರಡನ್ನೂ ಪಾಲಿಸ್ತಾರೆ. ಮನೆಯಲ್ಲಿ ನಮಾಜ್ ಮಾಡೋದಲ್ಲದೆ ಹನುಮಾನ್ ಚಾಲೀಸ ಕೂಡ ಓದುತ್ತಾರೆ.