Gold Suresh: ಕುಟುಂಬದಲ್ಲಿ ಏನೂ ಸಮಸ್ಯೆ ಇಲ್ಲ, ಯಾರಿಗೂ ಏನು ಆಗಿಲ್ಲ- ಹಾಗಿದ್ರೆ ಗೋಲ್ಡ್ ಸುರೇಶ್ ನನ್ನು ಬಿಗ್ ಬಾಸ್ ಹೊರಗೆ ಕಳಿಸಿದ್ದೇಕೆ?

Gold Suresh: ಉತ್ತಮ ಪಟ್ಟ ಪಡೆದು ಕ್ಯಾಪ್ಟನ್ ಆಗಿ ತನ್ನ ಪೌರುಷವನ್ನು ತೋರಲು ರೆಡಿಯಾಗಿದ್ದಂತಹ ಬಿಗ್ ಬಾಸ್ ಕಂಟೆಸ್ಟೆಂಟ್ ಗೋಲ್ಡ್ ಸುರೇಶ್ ಅವರು ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. “ಸದಸ್ಯರೊಬ್ಬರ ನಿಕಟ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಅವರ ಅವಶ್ಯಕತೆ ಬಿಗ್‌ಬಾಸ್‌ಗಿಂತಲೂ, ಅವರ ಕುಟುಂಬಕ್ಕೆ ಹೆಚ್ಚು ಅಗತ್ಯ. ಈ ಕೂಡಲೇ ಅವರು ಮನೆಯಿಂದ ಹೊರಬರಬೇಕು” ಎಂದು ಬಿಗ್‌ ಬಾಸ್‌ ಹೇಳುತ್ತಿದ್ದಂತೆ, ಆತಂಕದಲ್ಲಿಯೇ ಹೊರ ನಡೆದರು. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದಿದ್ದಾರೆ. ಅಷ್ಟಕ್ಕೂ ಸುರೇಶ್ ದೊಡ್ಮನೆಯಿಂದ ಹೊರಬರಲು ಏನು ಕಾರಣ?

ಬಿಗ್ ಬಾಸ್ ಅನೌನ್ಸ್ ಮಾಡುತ್ತಿದ್ದಂತೆ ಗೋಲ್ಡ್ ಸುರೇಶ್(Gold Suresh)ರವರು ದೊಡ್ಡ ತೊಂದರೆ ಆಗಿರಬಹುದೇ ಎಂದು ಊಹಿಸಿ ಅಳಲು ಶುರು ಮಾಡಿದರು. ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದೆ. ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ನಿಜವಿಲ್ಲ. ಖುದ್ದು ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಮೊಣಕಾಲು ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ನಮ್ಮ ಮನೆ ಹಾಗೂ ಊರಲ್ಲಿ ಯಾರಿಗೂ ಏನ‌ು ಸಮಸ್ಯೆ ಇಲ್ಲ. ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತುರ್ತು ನೆಪವೇ ಸುಳ್ಳಾ?
ಗೋಲ್ಡ್‌ ಸುರೇಶ್‌ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಿದ್ದು ಏಕೆ ಎಂಬುದಕ್ಕೆ ಈ ವರೆಗೆ ಕಂಡಿದ್ದು ಒಂದೇ ಒಂದು ಪ್ರೋಮೋ. ಆದರೆ, ಬಹುತೇಕರು ಭಾನುವಾರದ ಏಪಿಸೋಡ್‌ನಲ್ಲೇ ಇದಕ್ಕೆ ಉತ್ತರ ಸಿಗಬಹುದು ಎಂದು ಎಲ್ಲರೂ ಕಾದು ಕೂತಿದ್ದರು. ಆದರೆ, ಭಾನುವಾರದ ಸಂಚಿಕೆಯಲ್ಲಿ ಸುರೇಶ್‌ ಮನೆಯಿಂದ ನಿರ್ಗಮಿಸಿದ ಸಂಚಿಕೆ ಪ್ರಸಾರವಾಗಿಲ್ಲ. ಈ ನಡುವೆ ಕೆಲವರು ಬಿಗ್‌ ಬಾಸ್‌ನವರೇ ಬೇಕು ಅಂತಲೇ ಗಿಮಿಕ್‌ ಮಾಡ್ತಿದ್ದಾರಾ? ಎಂದೂ ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.

ಸಿಗದ ಸ್ಪಷ್ಟತೆ, ಗೊಂದಲದಲ್ಲಿ ವೀಕ್ಷಕ
ಕಳೆದ ಕೆಲ ವಾರಗಳ ಹಿಂದೆಯೇ ಗೋಲ್ಡ್‌ ಸುರೇಶ್‌ ಅವರ ಕಾಲಿಗೆ ನೋವಾಗಿದೆ. ಆ ನೋವಿನಲ್ಲಿಯೂ ಫಿಸಿಕಲ್‌ ಟಾಸ್ಕ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ. ಉತ್ತಮ ಅನ್ನೋ ಪಟ್ಟವನ್ನೂ ಪಡೆದು, ಈ ವಾರದ ಕ್ಯಾಪ್ಟನ್‌ ಆಗಿದ್ದಾರೆ. ಹೀಗಿರುವಾಗಲೇ, ತುರ್ತು ಕಾರಣದಲ್ಲಿ ಮನೆಯಿಂದ ಹೊರ ನಡೆದಿದ್ದಾರೆ. ಬಿಗ್‌ ಬಾಸ್‌ನ ಈ ನಡೆ ಏನಿರಬಹುದು? ಎಂಬ ಗೊಂದಲದ ಜತೆಗೆ ಕುತೂಹಲವೂ ವೀಕ್ಷಕರಲ್ಲಿದೆ.

Leave A Reply

Your email address will not be published.