Gold Suresh: ಗೋಲ್ಡ್ ಸುರೇಶ್ ಈಗಲೇ ಬ್ಯಾಕ್ ಪ್ಯಾಕ್ ಮಾಡಿ ಹೊರಬನ್ನಿ ಎಂದ ಬಿಗ್ ಬಾಸ್- ಇದ್ದಕ್ಕಿದ್ದಂತೆ ದೊಡ್ಮನೆಯಿಂದ ಗೋಲ್ಡ್ ಸುರೇಶ್ ಔಟ್ !! ಕಾರಣ ಹೀಗಿದೆ
Gold Suresh: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿ ಮಿಂಚ ಬೇಕಿದ್ದ ಗೋಲ್ಡ್ ಸುರೇಶ್ ಅವರು ಈಗ ಇದ್ದಕ್ಕಿದ್ದಂತೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಅದಕ್ಕೆ ಕಾರಣವೂ ಕೂಡ ಇದೆ.
ಯಸ್.. ಈ ವಾರ ಗೋಲ್ಡ್ ಸುರೇಶ್(Gold Suresh)ಮನೆಯ ಕ್ಯಾಪ್ಟನ್ ಆಗಿದ್ದರು. ಅಲ್ಲದೇ, ‘ಉತ್ತಮ’ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದರು. ಆದರೆ ಅನಿವಾರ್ಯ ಕಾರಣದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಗಿದೆ. ಯಾಕೆಂದರೆ ಗೋಲ್ಡ್ ಸುರೇಶ್ ಕುಟುಂಬದಲ್ಲಿ ಯಾವುದೋ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಕುಟುಂಬದವರಿಗೆ ಜಾಸ್ತಿ ಇದೆ.
ಈ ಹಿನ್ನಲೆಯಲ್ಲಿ ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬನ್ನಿ’ ಎಂದು ಸೂಚನೆ ನೀಡಲಾಗಿದೆ. ಸಧ್ಯ ಅನಿವಾರ್ಯ ಕಾರಣದಿಂದ ಅವರು ಈ ಶೋಗೆ ವಿದಾಯ ಹೇಳಿದ್ದಾರೆ. ಇನ್ನುಳಿದ ಸದಸ್ಯರು ಸುರೇಶ್ಗೆ ಧೈರ್ಯ ತುಂಬಿದ್ದಾರೆ. ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಗುರುತಿಸಿಕೊಂಡಿದ್ದ ಸುರೇಶ್ ಅವರು ಈಗ ಆತಂಕದಲ್ಲಿ ಹೊರನಡೆದಿದ್ದಾರೆ.