Telangana : 4 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಈತ ಭಾರತದ ಪ್ರಜೆ ಅಲ್ಲ..!! ಇಂಥ ಮಹಾ ತಪ್ಪು ಗೊತ್ತಾದ್ರೂ ಕೋರ್ಟ್ ಈತನಿಗೆ ವಿಧಿಸಿದ ಶಿಕ್ಷೆ ಇಷ್ಟೇ ನೋಡಿ !!
Telangana: ಭಾರತದ ಸಂವಿಧಾನದ ಪ್ರಕಾರ ಚುನಾವಣೆಯಲ್ಲಿ ಭಾರತೀಯ ಪ್ರಜೆಗಳು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಇದರಂತೆ ಇಲ್ಲೊಬ್ಬ ಆಸಾಮಿ 4 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದಾನೆ. ಜನರ ಮನ್ನಣೆಯನ್ನು ಗಳಿಸಿದ್ದಾನೆ. ಆದರೆ ಅಚ್ಚರಿಯೇನೆಂದರೆ ಈತ ಭಾರತದ ಪ್ರಜೆ ಅಲ್ಲ!! ಭಾರತದ ಪ್ರಜೆಯಾಗದೆಯೇ ಈತ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿದ್ದಾನೆ. ಇದು ಅಚ್ಚರಿಯನಿಸಿದರು ಕೂಡ ಸತ್ಯದ ಸಂಗತಿ.
ಹೌದು, ತೆಲಂಗಾಣದಲ್ಲಿ(Telangana) ಇಂತಹ ಒಂದು ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. 3 ಬಾರಿಯ ಮಾಜಿ ಶಾಸಕ ಹಾಗೂ ಬಿಆರ್ ಪಕ್ಷದ ಮಾಜಿ ನಾಯಕ ಚೆನ್ನಮನೆನಿ ರಮೇಶ್ ಜರ್ಮನಿ ಪೌರತ್ವ ಪಡೆದಿದ್ದು, ಭಾರತೀಯ ಪ್ರಜೆ ಎಂದು ನಕಲಿ ಸೃಷ್ಟಿಸಿ ಚುನಾವಣೆಗೆ ಸ್ಪರ್ಧಿಸಿರುವುದು ನ್ಯಾಯಾಲಯದಲ್ಲಿ ದೃಢಪಟ್ಟಿದೆ. ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನಲ್ಲಿ ಚೆನ್ನಮನೆನಿ ರಮೇಶ್ ಭಾರತೀಯ ಎಂಬುದನ್ನು ದೃಢಪಡಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ 30 ಲಕ್ಷ ರೂ. ದಂಡ ವಿಧಿಸಿದೆ.
ಚೆನ್ನಮನೆನಿ ವೆಮುಲಾವಾಡ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದಿಂದ 2009ರಲ್ಲಿ ಮೊದಲ ಬಾರಿ ಶಾಸಕರಾಗಿದ್ದರು. ಒಟ್ಟು ನಾಲ್ಕು ಬಾರಿ ಶಾಸಕರಾಗಿದ್ದ ರಮೇಶ್ 2010ರಿಂದ 2018ರ ಅವಧಿಯಲ್ಲಿ ಪಕ್ಷಾಂತರ ಮಾಡಿದ್ದರಿಂದ ಹಾಗೂ ಉಪ ಚುನಾವಣೆ ಹಿನ್ನೆಲೆಯಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಅವರು ಮಾಡಿರುವ ವಂಚನೆಯ ವಿಚಾರ ಬೆಳಕಿಗೆ ಬಂದಿದೆ.
ನ್ಯಾಯಾಲಯದಲ್ಲಿ ಕಾಂಗ್ರೆಸ್ ಶಾಸಕ ಆದಿ ಶ್ರೀನಿವಾಸ್ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನಲ್ಲಿ ಚೆನ್ನಮನೆನಿ ರಮೇಶ್ ಭಾರತೀಯ ಎಂಬುದನ್ನು ದೃಢಪಡಿಸಲು ವಿಫಲರಾಗಿದ್ದಾರೆ. ಬಳಿಕ ಜರ್ಮನ್ ರಾಜತಾಂತ್ರಿಕ ಕಚೇರಿ ಚೆನ್ನಮನೆನಿ ರಮೇಶ್ ತಮ್ಮ ದೇಶದ ಪೌರತ್ವ ಪಡೆದಿರುವ ಬಗ್ಗೆ ದಾಖಲೆಗಳು ನೀಡಿದೆ. ಹೀಗಾಗಿ ನ್ಯಾಯಾಲಯ 30 ಲಕ್ಷ ರೂ. ದಂಡ ವಿಧಿಸಿದ್ದರೆ, ರಮೇಶ್ 25 ಲಕ್ಷ ರೂ. ದಂಡ ಪಾವತಿಸುವುದಾಗಿ ಮನವಿ ಮಾಡಿದ್ದಾರೆ.
ಮೂರು ಬಾರಿ ಶಾಸಕನಾದರೂ ಕೂಡ ಆತ ಭಾರತೀಯ ಪ್ರಜೆಯಲ್ಲ ಎಂಬುದು ಯಾರಿಗೂ ತಿಳಿಯದೆ ಇರುವುದು ನಿಜವಾಗಿಯೂ ಕೂಡ ವಿಷಾದದ ಸಂಗತಿ. ಎಲ್ಲಾ ದಾಖಲೆಗಳನ್ನು ಬಗೆಬಗೆಯಾಗಿ ಪರಿಶೀಲಿಸುವ ಚುನಾವಣಾ ಆಯೋಗ ಇಲ್ಲಿ ಎಡವಿರುವುದು ದುರಂತ. ಸಂವಿಧಾನಾತ್ಮಕ ಹುದ್ದೆಯಲ್ಲಿ ಇದ್ದುಕೊಂಡು ಈ ರೀತಿಯ ಮಹಾಪಾತಕಗಳನ್ನು ಮಾಡುವ, ವಂಚನೆಗಳನ್ನು ನಡೆಸುವ ಇಂತಹ ಸೋ ಕಾಲೆಡ್ ನಾಯಕರಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಧಿಸಿದರಷ್ಟೇ ನಮ್ಮಲ್ಲಿನ ಭ್ರಷ್ಟರ ವ್ಯವಸ್ಥೆ ಬದಲಾಗುತ್ತದೆ.