Mangaluru : ಮಂಗಳೂರಲ್ಲಿ ಭೀಕರ ರಸ್ತೆ ಅಪಘಾತ – ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ದುರ್ಮರಣ !!
Mangaluru : ಮಂಗಳೂರಿನಲ್ಲಿ ದಿನೇ ದಿನೇ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತೆಯೇ ಇಂದೂ ಕೂಡ ನಗರದಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು ವೇಗವಾಗಿ ಹೋಗುತ್ತಿದ್ದ ಬೈಕೊಂಡು ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ಹಿಂದೆಯಿಂದ ಬಂದ ಲಾರಿ ಒಂದು ಬೈಕ್ ಸವಾರನ ಮೇಲೆ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ
ಹೌದು, ಮಂಗಳೂರಿನ(Mangaluru) ಕಾವೂರು ಜಂಕ್ಷನ್ ಬಳಿ ಭೀಕರವಾದಂತಹ ರಸ್ತೆ ಅಪಘಾತವಾಗಿದೆ. ವೇಗವಾಗಿ ಹೋಗುತ್ತಿದ್ದ ಬೈಕ್ ಒಂದು ಸ್ಕಿಡ್ ಆಗಿ ಬಿದ್ದಿದೆ. ಈ ವೇಳೆ ಹಿಂದಿನಿಂದ ಬಂದಂತಹ ಲಾರಿ ಬೈಕ್ ಸವಾರ ಮೇಲೆ ಹರಿದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಬೈಕ್ ಸವಾರನನ್ನು ಪ್ರಕಾಶ್ ಅಂಚನ್ ಎಂದು ಗುರುತಿಸಲಾಗಿದೆ.
ಪ್ರಕಾಶ್ ಬೈಕ್ ಮೇಲೆ ಮರಕಡ ಕಡೆಯಿಂದ ಕಾವೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಹಿಂದಿನಿಂದ ವೇಗವಾಗಿ ಬಂದಂತಹ ಲಾರಿ ಅವರ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಅಪಘಾತದ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.