Rose: ಮನೆಯ ಗುಲಾಬಿ ಗಿಡ ಹೂ ಬಿಡುತ್ತಿಲ್ಲವೇ?! ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ, ಗಿಡದ ತುಂಬಾ ಹೂ ಅರಳಿಸಿ!!

Rose: ಹೂವುಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮನೆ ಮುಂದೆ ಬಣ್ಣ ಬಣ್ಣದ ಹೂವುಗಳು ಅರಳಿ ನಲಿಯುವುದನ್ನು ನೋಡುವುದೇ ಚೆಂದ. ಅದರಲ್ಲೂ ಬಣ್ಣ ಬಣ್ಣದ ಗುಲಾಬಿ ಹೂವುಗಳು ಗಿಡದ ತುಂಬಾ ನಗುತ್ತಿದ್ದರೆ ಮನೆ ಮುಂದೆ ಬೇರೆ ರಂಗೋಲಿಯೇ ಬೇಡ. ಮನೆ ಮುಂದೆ ಹೂವಿನ ತೋಟ ನಿರ್ಮಿಸುವುದು ಬಹುತೇಕರ ಹವ್ಯಾಸವಾಗಿರುತ್ತದೆ. ಗುಲಾಬಿ ಅನೇಕ ಪ್ರಭೇದಗಳನ್ನು ಹೊಂದಿರುವ ಕಾರಣ ತೋಟಗಾರರು ಮೊದಲು ಕೈಹಾಕುವುದೇ ಗುಲಾಬಿ(Rose) ಸಸ್ಯಗಳಿಗೆ. ಹಾಗೆ ಶ್ರಮಪಟ್ಟು, ಬಹಳ ಆಸೆಯಿಂದ ನೆಟ್ಟ ಗಿಡಗಳಲ್ಲಿ ಹೂವುಗಳು ಅರಳದೇ ಹೋದರೆ ಬೇಸರವಾಗುವುದು ಖಂಡಿತ. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ನೋಡಿ. ನಿಮ್ಮ ಮನೆಯ ಗಿಡದ ತುಂಬಾ ಹೂವು ಬಿಡೋದು ಪಕ್ಕಾ!!

ಈ ರೀತಿ ಮಾಡಿ :
ನಾಲ್ಕು ಬಾಳೆಹಣ್ಣಿನ ಸಿಪ್ಪೆ ತೆಗೆದುಕೊಂಡು ಇದನ್ನು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಗೆ 2 ಗ್ಲಾಸ್ ನೀರು ಹಾಕಿ ಅದು ಚೆನ್ನಾಗಿ ಕುದಿಯಲಿ. ನಂತರ ಅದಕ್ಕೆ ಈ ಬಾಳೆಹಣ್ಣಿನ ಸಿಪ್ಪೆ ಹಾಕಿ. ಅದೇ ನೀರಿಗೆ 2 ಚಮಚದಷ್ಟು ಕಾಫಿ ಪುಡಿ ಹಾಕಿ. ನಂತರ ಅದಕ್ಕೆ 5 ಚಮಚದಷ್ಟು ಟೀ ಮಾಡಿದ ನಂತರ ಸೋಸಿಕೊಂಡು ಉಳಿದ ಟೀ ಪುಡಿಯನ್ನು ಹಾಕಿ. ¼ ಕಪ್ ನಷ್ಟು ಹಾಲು ಸೇರಿಸಿ ಗ್ಯಾಸ್ ಆಫ್ ಮಾಡಿ ಒಂದು ಪ್ಲೇಟ್ ಅನ್ನು ಮುಚ್ಚಿ. ರಾತ್ರಿಯಿಡೀ ಇದು ಹಾಗೆಯೇ ಇರಲಿ. ನಂತರ ಹೂವಿನ ಗಿಡದ ಬುಡಕ್ಕೆ ಈ ನೀರನ್ನು ಹಾಕಿ. ಇದರಿಂದ ಗುಲಾಬಿ ಗಿಡದಲ್ಲಿ ಚೆನ್ನಾಗಿ ಹೂ ಬಿಡುತ್ತದೆ.

ಅಕ್ಕಿ ತೊಳೆದ ನೀರು ಉಪಯೋಗಿಸಿ:
ಪ್ರತಿ ಮನೆಯಲ್ಲೂ ದಿನನಿತ್ಯ ಬಳಸುವ ಅಕ್ಕಿ ತೊಳೆದ ನೀರನ್ನು ಏನು ಮಾಡುತ್ತೇವೆ? ಯಾವುದೇ ಯೋಚನೆ ಮಾಡದೆಯೇ ಚೆಲ್ಲುತ್ತೇವೆ. ಈ ಅಕ್ಕಿ ತೊಳೆದ ನೀರನ್ನು ಸಂಗ್ರಹಿಸಿ ತೋಟಕ್ಕೆ ಬಳಸಿದರೆ, ಹೂವಿನ ಗಿಡಗಳಲ್ಲಿ ಬದಲಾವಣೆ ಕಾಣಬಹುದು. ನೀವೂ ಕೂಡ ಹೂಗಳು ಅರಳಿ, ಮನಸ್ಸು ಮತ್ತು ಕಣ್ಣುಗಳಿಗೆ ಉಲ್ಲಾಸ ನೀಡುವ ಉದ್ಯಾನಗಳನ್ನು ಸಿದ್ಧಪಡಿಸಬಹುದು.

ಇದೊಂದು ವಸ್ತುವನ್ನು ಬಳಸಿ :
ಗುಲಾಬಿ ಸಸ್ಯಗಳು ಹೂವುಗಳನ್ನು ಉತ್ಪಾದಿಸದಿದ್ದರೆ, ಇದಕ್ಕಾಗಿ ನೀವು ಸಾಸಿವೆ ಕೇಕ್ ಅನ್ನು ಬಳಸಬಹುದು. ಇದು ನಿಮಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಮೊದಲನೆಯದಾಗಿ, ಅದನ್ನು 3 ರಿಂದ 4 ದಿನಗಳವರೆಗೆ ನೀರಿನಲ್ಲಿ ನೆನೆಸಿಡಿ. ನಂತರ ಇದನ್ನು 1: 1 ಅನುಪಾತದಲ್ಲಿ ನೀರಿನಲ್ಲಿ ಬೆರೆಸಿ ಮತ್ತು ಪ್ರತಿ ಮೂರನೇ ದಿನ ಗುಲಾಬಿ ಸಸ್ಯಗಳ ಬೇರುಗಳಿಗೆ ಸುರಿಯಿರಿ. ಇದನ್ನು 15 ದಿನ ನಿರಂತರವಾಗಿ ಮಾಡಿದ ನಂತರ ಒಂದು ವಾರದವರೆಗೆ ಬಳಸಬೇಡಿ. ಗಿಡದ ಬೆಳವಣಿಗೆ ಮತ್ತು ಹೂವುಗಳ ಉತ್ಪಾದನೆಯನ್ನು ಹೆಚ್ಚಿಸಲು ಇದು ತುಂಬಾ ಸಹಾಯಕವಾಗಿದೆ.

Leave A Reply

Your email address will not be published.