Bangalore: ಕರ್ನಾಟಕ ಬಿಜೆಪಿಯಲ್ಲಿ ಇಂದು ಮಹತ್ವದ ಸಭೆ; ಕೂತೂಹಲ ಮೂಡಿಸಿದ ಹೈಕಮಾಂಡ್‌

Bangalore: ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಧಾ ಮೋಹನ್‌ ದಾಸ್‌ ಅಗರ್‌ವಾಲ್‌ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಕೋರ್‌ ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬಿಜೆಪಿಯ ಘಟಾನುಘಟಿಗಳು ಭಾಗಿಯಾಗಲಿದ್ದಾರೆ. ಬಿ.ಎಸ್‌.ಯಡಿಯೂರಪ್ಪ. ಬಿ.ವೈ.ವಿಜಯೇಂದ್ರ, ನಳಿನ್‌ ಕುಮಾರ್‌ ಕಟೀಲ್‌, ಸಿ.ಟಿ.ರವಿ, ಆರ್.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥ್‌ನಾರಾಯಣ್‌ ಜೊತೆಗೆ ಕೆಲವು ಹಿರಿಯರು ಬರಲಿದ್ದಾರೆ.

ಈ ಸಭೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ವಿಷಯಗಳು ಪ್ರಮುಖ ಚರ್ಚೆಗೆ ಬರಲಿದೆ. ಇದರ ಜೊತೆಗೆ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಸಂಘಟನೆಯ ಬದಲಾವಣೆ ಚರ್ಚೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಸಂಘಟನೆ ಪುನಾರಚನೆಗೆ ಹೈಕಮಾಂಡ್‌ ನಿರ್ಧಾರ ಮಾಡಿದೆ. ಈ ಕುರಿತು ರಾಜ್ಯ ನಾಯಕರು ಸಲಹೆಯನ್ನು ಪಡೆಯಲಿದ್ದಾರೆ.

ಪಕ್ಷದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಯಿಂದ ಕಾರ್ಯಕರ್ತರು ಗೊಂದಲಕ್ಕೊಳಗಾಗಿದ್ದು, ಈ ಕುರಿತು ಕೂಡಾ ಜೋರಾದ ಚರ್ಚೆ ನಡೆಯಲಿದೆ. ಉಸ್ತುವಾರಿ ಮುಂದೆ ರಾಜ್ಯ ಬಿಜೆಪಿ ನಾಯಕರು ಸಮಸ್ಯೆಗಳ ಕುರಿತು ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.