Siddaramaiah: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ: ಸಿಎಂ ಸಿದ್ದರಾಮಯ್ಯ ಯಾಕೆ ಹೀಗಂದ್ರು?!
Siddaramaiah: ನಾನು ರಾಜಕೀಯ ಕೊನೆಗಾಲದಲ್ಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಹೌದು, ಸತ್ತೇಗಾಲ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿಕೆ ನೀಡಿದ್ದಾರೆ.
ನಾನು ಏನಿಲ್ಲ ಅಂದ್ರು 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಂಡಿಲ್ಲ. ಬದಲಿಗೆ ಸಿಎಂ ಖುರ್ಚಿ ಗಟ್ಟಿಯಾಗಿದೆ. ನಾನು ಈಗ ರಾಜಕೀಯ ಕೊನೆಗಾಲದಲ್ಲಿದ್ದೇನೆ. ಜನರ ಪ್ರೀತಿ ಅಭಿಮಾನ ಗಳಿಸದೆ ಇದ್ರೆ ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ ಎಂದು ಹೇಳಿದರು.
ಈ ಬಿಜೆಪಿಯವ್ರು ನಾವು ಕೊಡೊ ಗೃಹಲಕ್ಷ್ಮಿ ಯೋಜನೆಯಿಂದ ಅತ್ತೆ-ಸೊಸೆಗೆ ಜಗಳ ತಂದಿಟ್ರು ಎಂದು ಅಪಪ್ರಚಾರ ಮಾಡಿದ್ರು. ಹಾಗಿದ್ರೆ ಬಿಜೆಪಿಯವರಿಗೆ ಬರಿ ಇದೆ ಕೆಲಸ. ನಿಮಗೆ ಉಚಿತವಾಗಿ ಅಕ್ಕಿ ಕೊಡ್ತಾಯಿರೋರು ಯಾರು? ನಾನು ಮೊದಲು ಬಾರಿ ಸಿಎಂ ಆದಾಗ 5 ಕೆಜಿ ಉಚಿತವಾಗಿ ಕೊಟ್ಟೆ. ಈಗ 10 ಕೆಜಿ ನೀಡುತ್ತೇವೆ ಅಂದ್ರೆ ಕೇಂದ್ರದವರು ಅಡ್ಡಗಾಲು ಹಾಕಿದ್ದಾರೆ. ಫ್ರೀಯಾಗಿ ಏನನ್ನೂ ಕೊಡ್ಬೇಡಿ ಮೋದಿಯವರೇ, ಒಂದು ಕೆಜಿಗೆ 34 ರೂಪಾಯಿ ಕೊಡುತ್ತೇವೆ ಎಂದು ತಿಳಿಸಿದರು.
ನನ್ನ ಬಾಲ್ಯದಲ್ಲಿ ನಾನು ಬರಿಗಾಲಲ್ಲಿ ಶಾಲೆಗೆ ಹೋಗಬೇಕಿತ್ತು. ಅದಕ್ಕೆ ಕಳೆದ ಬಾರಿ ಸಿಎಂ ಆಗಿದ್ದಾಗ ಪ್ರತಿ ವಿದ್ಯಾರ್ಥಿಯು ಶೂ ಹಾಕೊಳ್ಳೇಬೇಕು ಸಾಕ್ಸ್ ಹಾಕೊಳ್ಳೇಬೇಕು ತಾರತಮ್ಯ ಇರಬಾರದು ಅಂತ ಶೂ ಭಾಗ್ಯ ಜಾರಿಗೆ ತಂದೆ. ಪ್ರತಿಯೊಬ್ಬರೂ ಕೂಡ ಓದಬೇಕು. ನಾನು ಓದದೆ ಇದ್ದರೆ ಸಿಎಂ ಆಗೋಕೆ ಆಗ್ತಿತ್ತಾ? ನಿಮ್ಮ ಮುಂದೆ ನಿಂತುಕೊಂಡು ಭಾಷಣ ಮಾಡೋಕೆ ಆಗ್ತಿತ್ತಾ ಎಂದು ಕೇಳಿದರು.