H D Kumaraswamy : ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಉಚ್ಛಾಟಿಸಿದ್ದು ಏಕೆ? ಕುಮಾರಸ್ವಾಮಿ ಕೊಟ್ಟ ಕಾರಣ ಹೀಗಿದೆ
H D Kumaraswamy : ರಾಜಕೀಯದಲ್ಲಿ ಪಕ್ಷಾಂತರಗಳು ಸಾಮಾನ್ಯ. ಕೆಲವರು ಪಕ್ಷ ಬಿಟ್ಟು ಬೇರೆ ಪಕ್ಷ ಸೇರುತ್ತಾರೆ, ಕೆಲವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆ, ಕಿತ್ತೊಗೆಯಲಾಗುತ್ತದೆ, ಕೆಲವರು ಯಾವುದೋ ಆಸೆ, ಆಮೀಷಗಳಿಗೆ ಬಲಿಯಾಗಿ ಮತ್ತೊಂದು ಪಕ್ಷವನ್ನು ಸೇರುತ್ತಾರೆ. ಇದು ಹೊಲಸು ರಾಜಕೀಯದ ಒಂದು ಮುಖವಾಡ. ಇನ್ನು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮೂಲತಹ ಕಾಂಗ್ರೆಸ್ನವರಲ್ಲ. ಅವರು ಜೆಡಿಎಸ್ ನಿಂದ ಬಂದು ಕಾಂಗ್ರೆಸ್ ಸೇರ್ಪಡೆಗೊಂಡವರು. ಹಾಗಂತ ಜೆಡಿಎಸ್ ಪಕ್ಷವನ್ನು ಅವರೇ ಬಿಟ್ಟು ಬಂದವರಲ್ಲ. ಪಕ್ಷದಿಂದ ಅವರನ್ನು ಉಚ್ಚಾಟಿಸಿದಾಗ ಜಾಣ ನಡೆ ತೋರಿದ ಕಾಂಗ್ರೆಸ್ ತಕ್ಷಣ ಅವರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿತು.
ಈ ವಿಚಾರವನ್ನು ಸಿದ್ದರಾಮಯ್ಯನವರು(CM Siddaramaiah )ಅಗಾಗ ಹೇಳುವುದನ್ನು ನಾವು ಕೇಳಿದ್ದೇವೆ. ನಮ್ಮಿಂದ ದೇವೇಗೌಡರು ಮುಖ್ಯಮಂತ್ರಿಯಾದರು, ನಾವಿಲ್ಲದಿದ್ದರೆ ಜೆಡಿಎಸ್ ನಲ್ಲಿ ಏನು ಆಗುತ್ತಿರಲಿಲ್ಲ, ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸಿದ್ದು ನಾವು, ಆದರೆ ಕೊನೆಗೊಮ್ಮೆ ಜೆಡಿಎಸ್ ನಿಂದ ನನ್ನನ್ನೇ ಉಚ್ಚಾಟಿಸಲಾಯಿತು ಎಂದು ಅವರು ಸಾರ್ವಜನಿಕ ಸಭೆಗಳಲ್ಲಿ, ಸದನಗಳಲ್ಲಿ ಹೇಳುವುದನ್ನು ನಾವು ಕೇಳಿದ್ದೇವೆ. ಅಂತೆಯೇ ನಿನ್ನೆ ಕೂಡ ಹಾಸನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಅವರು ಈ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ನಾವೇ ಕಟ್ಟಿ ಬೆಳೆಸಿದ ಜೆಡಿಎಸ್ ನಿಂದ ನನ್ನನ್ನು ಹುಚ್ಚಾಟಿಸಿಬಿಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕುಮಾರಸ್ವಾಮಿ(H D Kumarswamy ) ಅವರು ಪ್ರತಿಕ್ರಿಯೆ ನೀಡಿದ್ದು ಸಿದ್ದರಾಮಯ್ಯ ಅವರನ್ನು ಯಾಕೆ ಜೆಡಿಎಸ್ನಿಂದ ಉಚ್ಚಾಟಿಸಲಾಯಿತು ಎಂಬುದಕ್ಕೆ ಕಾರಣ ನೀಡಿದ್ದಾರೆ.
ಹೌದು, ‘ಎಕ್ಸ್’ನಲ್ಲಿ ಪೋಸ್ಟ್ ಹಾಕಿರುವ ಕುಮಾರಸ್ವಾಮಿ ಅವರು, ‘ಅಂದು ಅಹಂನಿಂದ ಪಕ್ಷ ವಿರೋಧಿ ಚಟುವಟಿಕೆ, ಪಿತೂರಿ ನಡೆಸಿದ್ದಕ್ಕೆ ಸಿದ್ದರಾಮಯ್ಯ ಅವರನ್ನು ಉಚ್ಚಾಟಿಸಲಾಯಿತು.ದಲಿತ ಸಮಾಜಕ್ಕೆ ಸೇರಿದವರಿಗೆ ಸಿಗಬೇಕಿದ್ದ ಬದಲಿ ನಿವೇಶನಗಳನ್ನು ಅಕ್ರಮವಾಗಿ ಪಡೆಯಲು ರಾಜಕೀಯ ಅಧಿಕಾರ ದುರ್ಬಳಕೆ ಮಾಡಿಕೊಂಡಾಗ ಅಹಿಂದ ನೆನಪಾಗಲಿಲ್ಲವೇ? ಮುಡಾ ಹಗರಣ ಬುಡಕ್ಕೆ ಬಂದಿರುವಾಗ ರಕ್ಷಾ ಕವಚವಾಗಿ ಅಹಿಂದ ನೆನಪಾಗುತ್ತಿದೆ. ಮೆತ್ತಿಕೊಂಡಿರುವ ಕಪ್ಪುಮಸಿ ಮರೆಮಾಚಲು ಸ್ವರಕ್ಷಣೆಗಾಗಿ ಹಾಸನದಲ್ಲಿ ಸಮಾವೇಶ ಮಾಡಿದ್ದಾರೆ. ಜೆಡಿಎಸ್ನಲ್ಲಿದ್ದಾಗ ಪಕ್ಷದ ವೇದಿಕೆಯಲ್ಲೇ ಅಹಿಂದ ಸಮಾವೇಶ ಮಾಡಿದ್ದರೆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ನಿಮ್ಮನ್ನು ಏಕೆ ಉಚ್ಚಾಟಿಸುತ್ತಿದ್ದರು’ ಎಂದು ಟೀಕಿಸಿದ್ದಾರೆ.