ಎಬಿವಿಪಿ ಸಿದ್ಧಕಟ್ಟೆ ನಗರ ವತಿಯಿಂದ ಸಾಮಾಜಿಕ ಸಾಮರಸ್ಯ ದಿನ ಆಚರಣೆ|

ಬಂಟ್ವಾಳ 6 ಡಿಸೆಂಬರ್ 2024 : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ವತಿಯಿಂದ ತಾಲೂಕಿನ ವಿವಿಧ ನಗರಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುಣ್ಯ ತಿಥಿಯಾದ ಇಂದು ಬಂಟ್ವಾಳ ನಗರದ ವತಿಯಿಂದ ಸಾಮಾಜಿಕ ಸಾಮರಸ್ಯ ದಿನವನ್ನು ಆಚರಿಸಲಾಯಿತು.

ಎಬಿವಿಪಿ ಬಂಟ್ವಾಳ ನಗರ ತಂಡದ ಪ್ರಮುಖರು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಸಿದ್ಧಕಟ್ಟೆ ನಗರ ವತಿಯಿಂದ ಕೂಡ ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಹ ಸಂಚಾಲಕ್ ಮಹೇಶ್ ಮತ್ತು ಬಂಟ್ವಾಳ ನಗರ ಕಾರ್ಯದರ್ಶಿ ಗೌತಮ್ ಮತ್ತು ಸಿದ್ಧಕಟ್ಟೆ ನಗರ ಕಾರ್ಯದರ್ಶಿ ರಂಜಿತ್ ಹಾಗೂ ಶ್ರೇಯಸ್, ಲಿಖಿತ್,ಅಕ್ಷಿತ್, ಗುರುರಾಜ್, ವಿಘ್ನೇಶ್, ಮನೀಶ್, ಹರ್ಷಿತ್, ಆದಿತ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.