Chitradurga: ಡಿ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ ವೇಳೆ ರೇಣುಕಾ ಸ್ವಾಮಿ ಮನೆಯಲ್ಲಿ ರಂಭಾಪುರಿ ಜಗದ್ಗುರುಗಳ ವಿಶೇಷ ಪೂಜೆ!!

Chitradurga: ಡಿ ಗ್ಯಾಂಗ್ ಹಂತಕರಿಂದ ಕೊಲೆಯಾದ ಚಿತ್ರದುರ್ಗದ(Chitradugra) ರೇಣುಕಾಸ್ವಾಮಿ ಮನೆಗೆ ರಂಭಾಪುರಿ ಜಗದ್ಗುರುಗಳು ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ.

ರೇಣುಕಾಸ್ವಾಮಿ(Renukaswamy) ಕೊಲೆ ಆರೋಪದಲ್ಲಿ ಬಂದನವಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 8 ಜನರ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಮಯದಲ್ಲಿಯೇ ಮೃತ ರೇಣುಕಾಸ್ವಾಮಿ ಮನೆಗೆ ರಂಭಾಪುರಿ ಜಗದ್ಗುರುಗಳ(Rambapuri Jagadguru)ಭೇಟಿ ನೀಡಿದ್ದು, ಕಳೆದ ಎರಡು ದಿನಗಳ ಹಿಂದೆ ಜಗದ್ಗುರುಗಳು ವಿಶೇಷ ಶಿವಪೂಜೆ ಮಾಡಿದ್ದಾರೆ.

ಹೌದು, ರೇಣುಕಾಸ್ವಾಮಿಗೆ ಗಂಡು ಮಗು ಜನನವಾದ ಹಿನ್ನಲೆ ಚಿತ್ರದುರ್ಗ ನಗರದ ವಿಆರ್ ಎಸ್ ಬಡಾವಣೆಯಲ್ಲಿರುವ ಅವರ ಮನೆಯಲ್ಲಿ ರಂಭಾಪುರಿ ಶ್ರೀ ಅಮೃತ ಹಸ್ತದಿಂದ ಪೂಜೆ ನೆರವೇರಿಸಲಾಗಿದ್ದು, ಕುಟುಂಬದಲ್ಲಿ ಶಾಂತಿ, ಮಗುವಿನ ಆರೋಗ್ಯಕ್ಕಾಗಿ ಪೂಜಾ ಕೈಂಕರ್ಯಕ್ಕಾಗಿ ಪೂಜೆ ಮಾಡಲಾಗುತ್ತಿದೆ ಎನ್ನಲಾಗಿದೆ.

Leave A Reply

Your email address will not be published.