Vomiting while Travelling: ಪ್ರಯಾಣ ಮಾಡುವಾಗ ವಾಂತಿ ಬರುತ್ತದೆಯೇ? ಹಾಗಿದ್ರೆ ಈ ಸಿಂಪಿಲ್​​ ಟಿಪ್ಸ್​ ಫಾಲೋ ಮಾಡಿ !

Vomiting while Travelling: ಕೆಲ ಜನರು ಕಾರು, ಬಸ್​ ಇತರೆ ಯಾವುದೇ ವಾಹನಗಳಲ್ಲಿ ಸಂಚರಿಸುವಾಗ ವಾಂತಿ, ವಾಕರಿಕೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಾರೆ. ಅದರಲ್ಲೂ ಕಳಪೆ ಜೀರ್ಣಕ್ರಿಯೆ, ಆಹಾರ ವಿಷ ಹಾಗೂ ವಾಹನದಲ್ಲಿರುವ ಕಳಪೆ ಗಾಳಿ ಇತ್ಯಾದಿ ಸಮಸ್ಯೆಗಳಿಂದಾಗಿ ಪ್ರಯಾಣಿಸುವಾಗ ವಾಂತಿ (Omiting while Travelling) ಉಂಟಾಗುತ್ತದೆ.

 

ಒಂದು ವೇಳೆ ನೀವು ಕೂಡ ಈ ಪಟ್ಟಿಗೆ ಸೇರಿದ್ದೀರಾ? ಹಾಗಿದ್ರೆ ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು, ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಪ್ರಯಾಣವನ್ನು ನಿರಾಳವಾಗಿ ಮುಗಿಸಬಹುದು.

ಏಲಕ್ಕಿಯು ಉತ್ತಮ ಮೌತ್ ಫ್ರೆಶ್ನರ್ ಆಗಿಯೂ ಕೆಲಸ ಮಾಡುತ್ತದೆ. ಅಂತೆಯೇ ಪ್ರಯಾಣದ ಸಮಯದಲ್ಲಿ ಒಂದೇ ಒಂದು ಏಲಕ್ಕಿಯನ್ನು ಜಗಿಯುತ್ತಿದ್ದರೆ ಸಾಕು ವಾಂತಿ, ವಾಕರಿಕೆಯಂತಹ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ.

ಇನ್ನು ನಿಂಬೆ ಸಹ ವಾಂತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕೆ ಕಾರಣ ನಿಂಬೆಯಲ್ಲಿರುವ ವಿಟಮಿನ್ ಸಿ. ನೀವು ನೇರವಾಗಿ ನಿಂಬೆಹಣ್ಣಿನ ರುಚಿ ಅಥವಾ ರಸವನ್ನು ಸೇವಿಸಿದರೆ, ಪ್ರಯಾಣದ ಸಮಯದಲ್ಲಿ ವಾಂತಿಯನ್ನು ನಿಯಂತ್ರಿಸಬಹುದು.

ಸೋಂಪು ಕಾಳುಗಳು ಇದು ವಾಂತಿ ನಿಲ್ಲಿಸಲು ಸಹ ಸಹಾಯ ಮಾಡುತ್ತದೆ. ಪ್ರಯಾಣ ಮಾಡುವಾಗ ಸೋಂಪು ಕಾಳನ್ನು ಆಗಾಗ ಸ್ವಲ್ಪ ಬಾಯಿಗೆ ಹಾಕಿಕೊಂಡು ಜಗಿಯಿರಿ. ಹೀಗೆ ಮಾಡುವುದರಿಂದ ವಾಂತಿ, ವಾಕರಿಕೆ ಮುಂತಾದ ಸಮಸ್ಯೆಗಳು ಬರುವುದಿಲ್ಲ.

ಪ್ರಯಾಣದ ಸಮಯದಲ್ಲಿ ವಾಂತಿಯನ್ನು ನಿಲ್ಲಿಸಲು ಲವಂಗವು ಕೂಡ ಉತ್ತಮವಾಗಿದೆ. ವಾಂತಿ ಬರುತ್ತಿದೆ ಎಂದು ಅನಿಸಿದರೆ, ತಕ್ಷಣವೇ ನಿಮ್ಮ ಬಾಯಿಯಲ್ಲಿ ಒಂದು ಅಥವಾ ಎರಡು ಲವಂಗವನ್ನು ಇರಿಸಿ. ಇದರಿಂದ ವಾಂತಿ ಬರುವುದಿಲ್ಲ. ಈ ಮೇಲಿನ ಸಲಹೆಗಳಲ್ಲಿ ಯಾವುದಾದರೂ ಒಂದನ್ನು ಅನುಸರಿಸುವ ಮೂಲಕ ವಾಂತಿಯನ್ನು ತಡೆಗಟ್ಟಿ, ಖುಷಿಯಾಗಿ ಪ್ರಯಾಣವನ್ನು ಮಾಡಬಹುದು.

Leave A Reply

Your email address will not be published.