BJP: ಬಿಜೆಪಿಯಿಂದ ಬಸವನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ? ಈ ಬಗ್ಗೆ ಯತ್ನಾಳ್ ಹೇಳಿದ್ದಿಷ್ಟು

BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಣ ಬಡಿದಾಟ ತೀವ್ರ ತಾರಕಕ್ಕೆ ಏರಿದೆ. ಈ ಬೆನ್ನಲ್ಲೇ ಬಸವನಗೌಡ ಪಾಟೀಲ್ ಯತ್ನಾಳ್(Basavanagouda Patil Yatnal)ಅವರನ್ನು ಪಕ್ಷದಿಂದ ಹುಚ್ಚಾಟಿಸಲು ತಯಾರಿ ನಡೆದಿದೆ ಎನ್ನಲಾಗಿದೆ.

 

ಹೌದು, ಇಂದು ಮಾಜಿ ಶಾಸಕರು, ಬೆಳ್ಳಂ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ಯಡಿಯೂರಪ್ಪ(B S Yadiyurappa ) ಮನೆಗೆ ಭೇಟಿ ನೀಡಿದ್ದಾರೆ. ಮಾಜಿ ಶಾಸಕರುಗಳಾದಂತಹ ಎಂಪಿ ರೇಣುಕಾಚಾರ್ಯ, ಬಿಸಿ ಪಾಟೀಲ್ ಮಾಡಾಳ್ ವಿರೂಪಾಕ್ಷಪ್ಪ ಹಲವರು ಯಡಿಯೂರಪ್ಪ ಅವರೊಂದಿಗೆ ಯತ್ನಾಳ್ ಹುಚ್ಚಾಟನೆಯ ಬಗ್ಗೆ ಚರ್ಚಿಸಿದ್ದಾರೆ. ಕಾರ್ಯಕರ್ತರು ಕೂಡ ಈ ರೀತಿಯ ಅಭಿಪ್ರಾಯವನ್ನು ಹೊರ ಹಾಕುತ್ತಿರುವುದನ್ನು ಅವರ ಗಮನಕ್ಕೆ ತಂದಿದ್ದಾರೆ.

ಇನ್ನು ಈ ಬಗ್ಗೆ ಯತ್ನಾಳ್ ಅವರು ಪ್ರತಿಕ್ರಿಯಿಸಿದ್ದು ‘ಉಗ್ರ ಕ್ರಮ ಕೈಗೊಳ್ಳುವುದಕ್ಕೆ ನನ್ನದೇನು ತಕರಾರು ಇಲ್ಲ. ಬೇಕಾದುದ್ದನ್ನು ಮಾಡಲಿ ನಾನು ಅದನ್ನು ಸ್ವಾಗತ ಮಾಡುತ್ತೇನೆ. ನಾವು ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ಯಡಿಯೂರಪ್ಪನವರ ಪೋಕ್ಸೋ ಬಗ್ಗೆ ಮಾತನಾಡಿಲ್ಲ. ನಮ್ಮ ವಕ್ಫ್ ಹೋರಾಟಕ್ಕೆ ದೆಹಲಿಯಿಂದ ತಡೆ ಹಿಡಿದಿಲ್ಲ. ಇದರ ಅರ್ಥ ನಮಗೆ ಅವರ ಆಶೀರ್ವಾದ ಇದೆ ಅಂತ ಅಂದುಕೊಳ್ಳುತ್ತೇವೆ. ಯಾರ ಬಗ್ಗೆ ಮಾತನಾಡಬೇಡಿ ಎಂದು ನಮಗೆ ಹೇಳಿದ್ದಾರೆ’ ಎಂದು ತಿಳಿಸಿದರು.

Leave A Reply

Your email address will not be published.