Chandrashekara Swamiji : ‘ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಮದುವೆಗಳಿಗೆ ಹೋಗ್ತಿನಿ’ – FIR ಬೆನ್ನಲ್ಲೇ ಉಲ್ಟಾ ಹೊಡೆದ ಚಂದ್ರಶೇಖರ ಸ್ವಾಮೀಜಿ’

Chandrashekar Swamji : ಕಾರ್ಯಕ್ರಮ ಒಂದರಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ(Chandrashekara Swamji )ಅವರು ಮುಸ್ಲಿಮರಿಂದ ಮತದಾನ ಹಕ್ಕನ್ನು ಕಸಿಯಬೇಕು ಎಂದು ಹೇಳುವ ಮೂಲಕ ಸಂವಿಧಾನದ ಆಶಯಗಳ ವಿರುದ್ದ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಭಾಷಣ ಮಾಡಿದ್ದು, ಅವರ ವಿರುದ್ಧ FIR ದಾಖಲಾಗಿದೆ. ಈ ಬೆನ್ನಲ್ಲೇ ಸ್ವಾಮೀಜಿಯವರು ಉಲ್ಟಾ ಹೊಡೆದಿದ್ದಾರೆ.

 

ಹೌದು, ಭಾರತ ಸರ್ವಧರ್ಮಗಳ ದೇಶ. ನಮ್ಮ ಮಠಕ್ಕೂ ಮುಸ್ಲಿಂ ಭಕ್ತರಿದ್ದಾರೆ, ನಾನೂ ಮುಸ್ಲಿಂ ಸಮುದಾಯದ ಮದುವೆಗಳಿಗೆ ಹೋಗ್ತಿನಿ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ (Chandrashekar Swamiji) ಯೂಟರ್ನ್‌ ಹೊಡೆದಿದ್ದಾರೆ.

ಅಂದಹಾಗೆ ಮುಸ್ಲಿಮರಿಗೆ (Muslims) ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ಕರೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ ಸ್ವಾಮೀಜಿಗೆ ಉಪ್ಪಾರಪೇಟೆ ಪೊಲೀಸರಿಂದ ನೊಟೀಸ್ ಹೊರಡಿಸಿದ್ದಾರೆ. ಡಿಸೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಗೊಳಿಸಿದ್ದಾರೆ. ಈ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಸ್ವಾಮೀಜಿಯವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ಜೈಲಿಗೆ ಹಾಕ್ತರಾ? ಹಾಕ್ಲಿ ಬಿಡಿ, ಅಲ್ಲೇ ಇರ್ತಿನಿ. ದೇವರ ಮೇಲೆ ಬಾರ ಹಾಕಿದ್ದೀನಿ, ರೈತರ ಪರ ಹೋರಾಟದಲ್ಲಿ ಭಾಗಿಯಾಗಿದ್ದೆ. ರೈತರು ಭೂಮಿ ಕಳೆದುಕೊಳ್ಳದಕ್ಕೆ ವಿರೋಧಿಸಿ ಮಾತಾನಾಡಿದ್ದೆ. ಮಾತಿನ ಭರಾಟೆಯಲ್ಲಿ ಮುಸ್ಲಿಮರ ಮತದಾನದ ಬಗ್ಗೆ ಹೇಳಿದ್ದೆ. ಅದು ಉದ್ದೇಶ ಪೂರ್ವಕವಾಗಿ ಹೇಳಿದ ಮಾತಲ್ಲ. ಅದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಸ್ವಾಮೀಜಿ ಹೇಳಿದ್ದಾರೆ.

Leave A Reply

Your email address will not be published.