Putturu : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ನಾಯಕ ಕೆ.ಕೆ.ಕುಂಞಿ ಅಹ್ಮದ್ ನಿಧನ!!

Putturu: ಹಿರಿಯ ಸಾಮಾಜಿಕ ಧುರೀಣ, ಮಾಡನ್ನೂರು ಗ್ರಾಮದ ಅಮ್ಚಿನಡ್ಕ ನಿವಾಸಿ ಮಾಡನ್ನೂರು ಕೊಚ್ಚಿ ಮರ್ಹೂಂ ಅಬ್ದುಲ್ ಖಾದರ್ ಹಾಜಿಯವರ ಪುತ್ರ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ನಾಯಕ ಕೆ.ಕೆ.ಕುಂಞಿ ಅಹ್ಮದ್( KK Kunhi Ahmed)ಹಾಜಿ ನಿಧನರಾಗಿದ್ದಾರೆ.

 

ಹೌದು, ಬಿಜೆಪಿ(BJP)ಯಲ್ಲಿ ಸಕ್ರಿಯರಾಗಿದ್ದು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮಟ್ಟದ ನಾಯಕರಾಗಿದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕೆ.ಕೆ.ಕುಂಞಿ ಅಹ್ಮದ್ ಹಾಜಿ ಇಂದು ಶನಿವಾರ(ನಂ. 30)ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಅವರಿಗೆ 87 ವರ್ಷ ವಯಸ್ಸಾಗಿತ್ತು.

ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮಟ್ಟದ ನಾಯಕರಾಗಿದ್ದರು. ದ.ಕ. ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿದ್ದರು. ಮಾಡನ್ನೂರು ಜುಮಾ ಮಸೀದಿಯ ಮತ್ತು ಅಮ್ಚಿನಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ, ಕಾವು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

Leave A Reply

Your email address will not be published.