Mangaluru : ಹೂಡಿಕೆ ನೆಪ ಒಡ್ಡಿ ಮಹಿಳೆಯಿಂದ ಆನ್ಲೈನ್ ವಂಚನೆ – 56.64 ಲಕ್ಷ ರೂ. ಕಳಕೊಂಡ ಮಂಗಳೂರು ವ್ಯಕ್ತಿ!!

Mangaluru : ಫೇಸ್‌ಬುಕ್‌ ಮೂಲಕ ಸಂಪರ್ಕಿಸಿದ ಅಪರಿಚಿತ ಮಹಿಳೆಯೋರ್ವರು ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೋರ್ವರಿಂದ 56.64 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

 

ಹೌದು, ಮಂಗಳೂರು(Mangaluru )ಮೂಲದ ಮಹಿಳೆಯ ವಿಶ್ವಾಸ ಗಳಿಸಿದ ವಂಚಕರು ಬಳಿಕ ಹೂಡಿಕೆಯ ಹೆಸರಿನಲ್ಲಿ ಹಣ ದೋಚಿ ಪಂಗನಾಮ ಹಾಕಿದ್ದಾರೆ. ಆನ್‌ಲೈನ್‌ನಲ್ಲಿ ಆಗಿರುವ ಈ ವಂಚನೆಯ ಬಗ್ಗೆ ಮಂಗಳೂರಿನ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಷ್ಟಕ್ಕೂ ಆಗಿದ್ದೇನು?
ಮಹಿಳೆಗೆ ಅದಿತಿ ಕಪೂರ್‌ ಹೆಸರಿನ ಮಹಿಳೆಯೋರ್ವಳಿಂದ ದೂರುದಾರರ ಫೇಸ್‌ಬುಕ್‌ ಖಾತೆಗೆ ಜುಲೈಯಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಇದನ್ನು ಅಕ್ಸೆಪ್ಟ್ ಮಾಡಿದ ಬಳಿಕ ಮಹಿಳೆಗೆ ಮೆಸೆಂಜರ್‌ ಮೇಸೇಜ್ ಬಂದಿತ್ತು. ಇದಾದ ಬಳಿಕ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಕೆಲ ದಿನಗಳ ಬಳಿಕ ಮಹಿಳೆ ಮೆಸೆಂಜರ್‌ನಲ್ಲಿ +1 (623) 273-9277 ನಂಬರ್‌ ಕಳುಹಿಸಿ ಇದು ಪರ್ಸನಲ್‌ ನಂಬರ್‌. ಇದರಲ್ಲಿ ವಾಟ್ಸ್‌ಆಯಪ್‌ ಇದೆ ಎಂದು ತಿಳಿಸಿದ್ದಳು.

ಇದಾದ ಬಳಿಕ ಮಹಿಳೆ ವಾಟ್ಸಪ್‌ನಲ್ಲಿ ಅದಿತಿ ಕಪೂರ್‌ ಎಂಬ ಖಾತೆ ಹೊಂದಿದ್ದ ಆಕೆಯೊಂದಿಗೆ ಚಾಟ್‌ ಮಾಡಿಕೊಂಡಿದ್ದರು. ಕೆಲವು ಸಮಯದ ಅನಂತರ ಮಹಿಳೆ ದೂರುದಾರರಿಗೆ Century Global Gold Capital” ಎಂಬ ಇನ್‌ವೆಸ್ಟ್‌ಮೆಂಟ್‌ ಪ್ಲ್ರಾನ್‌ ಇದೆ. ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ. ಒಳ್ಳೆಯ ರಿಟರ್ನ್ಸ್ ಬರುತ್ತದೆ. ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದಳು. ಅನಂತರ ಲಿಂಕ್‌ ಕಳುಹಿಸಿ ರಿಜಿಸ್ಟ್ರೇಷನ್‌ ಮಾಡಲು ತಿಳಿಸಿದರು. ಅದರಂತೆ ದೂರುದಾರರು ಹೆಚ್ಚು ಲಾಭ ಪಡೆಯುವ ಆಸೆಯಿಂದ ನೋಂದಣಿ ಮಾಡಿಸಿದ್ದರು. ಬಳಿಕ ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಮಹಿಳೆ ತಿಳಿಸಿದ್ದು ಇದನ್ನು ನಂಬಿ ಮಹಿಳೆ ನೀಡಿದ ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 56,64,000 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಬಳಿಕ ವಂಚನೆ ಆಗಿರುವುದು ತಿಳಿದು ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave A Reply

Your email address will not be published.