Panolibail: ಪಣೋಲಿಬೈಲ್ – 23 ಸಾವಿರ ದಾಟಿದ ಪ್ರತಿದಿನದ ಕೋಲ ಬುಕ್ಕಿಂಗ್‌, ದಿನದ ಕೋಲಗಳಲ್ಲಿ ಹೆಚ್ಚಳ !!

Panolibail: ತುಳುನಾಡು ದೈವ ದೇವರುಗಳ ಆರಾಧನೆಗೆ ಖ್ಯಾತಿ ಪಡೆದಂತಹ ನಾಡು. ಇಲ್ಲಿನ ಸಂಸ್ಕೃತಿಗೆ ತನ್ನದೇ ಆದಂತಹ ಒಂದು ಹಿರಿಮೆ, ಮಹತ್ವವಿದೆ. ತುಳುನಾಡಿನ ಕೆಲವು ಸ್ಥಳಗಳಲ್ಲಿ ಕೆಲವು ಪ್ರಸಿದ್ಧವಾದ ದೈವ ಹಾಗೂ ಕಾರಣಿಕ ಕ್ಷೇತ್ರಗಳನ್ನು ನಾವು ನೋಡಬಹುದು. ಅಂತೆಯೇ ಬಂಟ್ವಾಳ ತಾಲೂಕಿನ ಪಣೋಲಿಬೈಲು (Panolibail) ತನ್ನ ಕೋಲ ಸೇವೆಗಳಿಗಾಗಿ ಭಾರೀ ಗಮನ ಸೆಳೆಯುವ ದೈವಸ್ಥಾನವಾಗಿದೆ. ಇಲ್ಲಿನ ಪ್ರತಿದಿನವೂ ನಡೆಯುತ್ತಿರುವ ಕೋಲ (Kola Seva) ಬುಕ್ಕಿಂಗ್‌ ಇದೀಗ 23 ಸಾವಿರ ದಾಟಿದೆ.

 

ಹೌದು, ಪಣೋಲಿಬೈಲಿನಲ್ಲಿ ಪ್ರತಿದಿನವೂ ನಡೆಯುತ್ತಿರುವ ಕೋಲ ಬುಕ್ಕಿಂಗ್‌ ಇದೀಗ 23 ಸಾವಿರ ದಾಟಿದೆ. ಹೀಗಾಗಿ ದಿನನಿತ್ಯ ನಡೆಯುವ ಕೋಲಗಳ ಸಂಖ್ಯೆ ಹೆಚ್ಚಿಸಲು ಶ್ರೀಕಲ್ಲುರ್ಟಿ ದೈವಸ್ಥಾನ ಸಮಿತಿಯು ನಿರ್ಧರಿಸಿದೆ.

35 ವರ್ಷಕ್ಕಾಗುವಷ್ಟು ಬುಕ್ಕಿಂಗ್!
ಪಣೋಲಿಬೈಲ್ ಕ್ಷೇತ್ರದಲ್ಲಿ 23 ಸಾವಿರಕ್ಕೂ ಅಧಿಕ ಕೋಲ ಸೇವೆಗಳ ಬುಕ್ಕಿಂಗ್ ಇರುವುದರಿಂದ ಭಕ್ತರಿಗೆ ಶೀಘ್ರ ಸೇವೆ ಸಂದಾಯದ ಅವಕಾಶದ ಹಿನ್ನೆಲೆಯಲ್ಲಿ ಪ್ರತೀ ದಿನ ನಡೆಯುತ್ತಿದ್ದ ಕೋಲ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಈವರೆಗೆ ಪ್ರತಿ ದಿನ 4 ಮಂದಿಗೆ ಕೋಲ ಸೇವೆ ಮಾಡಲಾಗುತ್ತಿತ್ತು. ಈಗ ಅದನ್ನು ಬದಲಿಗೆ 8 ಮಂದಿಗೆ ಸೇವೆ ಸಂದಾಯಕ್ಕೆ ಅವಕಾಶ ನೀಡಲಾಗಿದೆ.

ಇಷ್ಟೇ ಅಲ್ಲದೆ ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಹಾಗೂ ಕೋಲ ಸೇವೆಗಳು ವಿಶೇಷವಾಗಿದ್ದು, ವಾರದ 3 ದಿನ ಅಗೇಲು ಹಾಗೂ ವಾರದ 5 ದಿನ ಕೋಲ ಸೇವೆ ಸಂದಾಯವಾಗುತ್ತದೆ. ಆದರೆ ಕೋಲ ಸೇವೆಗಳ ಬುಕ್ಕಿಂಗ್ ಹೆಚ್ಚಿದ್ದು, ಲೆಕ್ಕಾಚಾರ ಹಾಕಿದರೆ ಅದು ಪೂರ್ಣಗೊಳುವುದಕ್ಕೆ ಕನಿಷ್ಠ 35 ವರ್ಷ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.