Venuru: ವೇಣೂರು: ಪಾಲ್ಗುಣಿ ನದಿಗೆ ಸ್ನಾನ ಮಾಡಲು ಬಂದ ಮೂರು ಯುವಕರು ಮೃತ್ಯು

Share the Article

Venuru: ವೇಣೂರಿನ (Venuru) ನಿಟ್ಟಾಡೆ ಗ್ರಾಮದ ನರ್ತಿಕಲ್ಲು ಪಾಲ್ಗುಣಿ ನದಿಯ ಡ್ಯಾಮ್‌ನಲ್ಲಿ ಸ್ನಾನ ಮಾಡಲು ಬಂದ ಮೂವರು ಯುವಕರು
ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದ ಘಟನೆ ನ.27 ಸಂಜೆ ನಡೆದಿದೆ.

ನರ್ತಿಕಲ್ಲು ಮನೆಯ ವಾಲ್ಟಿ ಎಂಬುವರ ಮನೆಯಲ್ಲಿ ಹಬ್ಬಕ್ಕೆ ಬಂದಿದ್ದ ಐದು ಜನ ಯುವಕರು ಸ್ಥಳೀಯ ಬರ್ಕೆಜೆ ಡ್ಯಾಮ್ ನೋಡಿ ಬರುತ್ತೇವೆ ಎಂದು ಹೋಗಿ ಯುವಕರು ಸ್ನಾನ ಮಾಡಲು ನದಿಗೆ ಇಳಿದು ಅಕಸ್ಮಿಕವಾಗಿ ಸುಳಿಗೆ ಸಿಲುಕಿ ಸೂರಾಜ್,ಜೈಸನ್,ಲಾರೆನ್ಸ್ ಮೂರು ಜನ ಮೆಡಿಕಲ್ ವಿದ್ಯಾರ್ಥಿಗಳು ಮರಣ ಹೊಂದಿದ್ದಾರೆ. ಇನ್ನು ಇಬ್ಬರು ಯುವಕರು ಪ್ರಾಣಪಾಯದಿಂದ ಪಾರಯಾಗಿದ್ದಾರೆ.

ಮೃತರನ್ನು ಎಡಪದವು, ವಗ್ಗ ,ಮಡಂತ್ಯಾರು ಇಲ್ಲಿನ ನಿವಾಸಿಗಳು ಎಂದು ಗುರುತಿಸಲಾಗಿದೆ. ಘಟನೆ ಸ್ಥಳಕ್ಕೆ ವೇಣೂರು ಪೊಲೀಸ್‌ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave A Reply