Gonorrhea: ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ರೆ ಈ ರೋಗದಿಂದ ಬಳಲುತ್ತೀರಿ ಎಚ್ಚರ!

Gonorrhea: ಅಪರಿಚಿತರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ರೆ
ಗೊನೊರಿಯಾ (Gonorrhea) ರೋಗ ನಿಮ್ಮನ್ನು ಆವರಿಸುತ್ತೆ ಎನ್ನುವುದು ನಿಮಗೆ ಗೊತ್ತಾ? ಹೌದು, ಅಪರಿಚಿತ ಜನರೊಂದಿಗೆ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಇದು ಹರಡುತ್ತದೆ. ಗೊನೊರಿಯಾ ರೋಗ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಅವು ಕಂಡು ಬಂದರೂ ಕೂಡ ಸೌಮ್ಯವಾಗಿರಬಹುದು. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಉರಿಯೂತ ಕಂಡು ಬರುತ್ತದೆ. ಹಾಗಾದರೆ ಇದರ ರೋಗಲಕ್ಷಣಗಳೇನು? ಇದು ಹರಡುವುದಕ್ಕೆ ಮುಖ್ಯ ಕಾರಣಗಳೇನು? ಚಿಕಿತ್ಸಾ ವಿಧಾನಗಳು ಹೇಗೆ ಎಂದು ಇಲ್ಲಿ ತಿಳಿಯಿರಿ.

 

ಗೊನೊರಿಯಾ ಇದು ಲೈಂಗಿಕವಾಗಿ ಹರಡುವ ರೋಗವಾಗಿದೆ. ಸಾಮಾನ್ಯವಾಗಿ ಇದು ನಿಸ್ಸೇರಿಯಾ ಗೊನೊರಿಯಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಹಾಗಾಗಿ ಇದಕ್ಕೆ ಗೊನೊರಿಯಾ ಎಂಬ ಹೆಸರು ಬಂದಿದೆ. ಈ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜನರೊಂದಿಗೆ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಾಗ ಇದು ಹರಡುತ್ತದೆ. ಗೊನೊರಿಯಾ ರೋಗ ಇರುವ ವ್ಯಕ್ತಿಗಳಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳು ಕಂಡು ಬರುವುದಿಲ್ಲ. ಅವು ಕಂಡು ಬಂದರೂ ಕೂಡ ಸೌಮ್ಯವಾಗಿರಬಹುದು. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಮತ್ತು ಉರಿಯೂತ ಕಂಡು ಬರುತ್ತದೆ.

ಲೈಂಗಿಕವಾಗಿ ಸಕ್ರಿಯವಾಗಿರುವ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಈ ಕಾಯಿಲೆಗೆ ಒಳಗಾಗಬಹುದು. ಎರಡನೆಯದಾಗಿ, ಇವರ ಜೊತೆಗೆ ಲೈಂಗಿಕತೆಯನ್ನು ಹೊಂದಿರುವ ಪುರುಷರು ಗೊನೊರಿಯಾಕ್ಕೆ ಹೆಚ್ಚು ಒಳಗಾಗುತ್ತಾರೆ. 2018 ರ ಆರಂಭದಲ್ಲಿ, ಸೂಪರ್ ಗೊನೊರಿಯಾ ತಳಿಗಳು (Cultivars) ಅನೇಕ ದೇಶಗಳಲ್ಲಿ ಕಂಡು ಬಂದವು. ಅಲ್ಲಿಂದ ಈ ಭಯಾನಕ ರೋಗ ಜನರನ್ನು ಕಾಡುತ್ತಿದೆ. ಹಾಗಾಗಿ ಈ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಅಲ್ಲದೆ ಈ ಬ್ಯಾಕ್ಟೀರಿಯಾವು ಮುಖ್ಯವಾಗಿ ಶಿಶ್ನದಿಂದ ಹೊರಸೂಸುವಿಕೆ ಮತ್ತು ಯೋನಿ ದ್ರವದಲ್ಲಿ ಕಂಡು ಬರುತ್ತದೆ. ಈ ರೋಗವು ಮೂತ್ರನಾಳ, ಗುದನಾಳ ಮತ್ತು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಇದು ಗರ್ಭಾಶಯ ಅಥವಾ ಗರ್ಭಕಂಠದ ಮೇಲೂ ಪರಿಣಾಮ ಬೀರಬಹುದು.

ಪುರುಷರಲ್ಲಿ ರೋಗಲಕ್ಷಣಗಳು:
ಶಿಶ್ನದಿಂದ ಬಿಳಿ, ಹಳದಿ ಅಥವಾ ಹಸಿರು ವಿಸರ್ಜನೆ
ವೃಷಣಗಳ ನೋವು ಅಥವಾ ಊತ (ಇದು ಅಪರೂಪವಾಗಿ ಕಂಡು ಬರುತ್ತದೆ)

ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳೆಂದರೆ:
ಋತುಚಕ್ರದ ಮಧ್ಯದಲ್ಲಿ ಯೋನಿಯಿಂದ ಅಸಹಜ ರಕ್ತಸ್ರಾವ
ಯೋನಿಯಿಂದ ಅತಿಯಾದ ಸ್ರವಿಸುವಿಕೆ

ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ಸಾಮಾನ್ಯ ರೋಗಲಕ್ಷಣಗಳೆಂದರೆ:
ಹುಣ್ಣುಗಳು
ರಕ್ತಸ್ರಾವ ಅಥವಾ ವಿಸರ್ಜನೆ (ಸ್ರವಿಸುವಿಕೆ)
ಗುದ ತುರಿಕೆ

ಈ ಬ್ಯಾಕ್ಟೀರಿಯಾಗಳು ಸೋಂಕಿತ ಜನರ ವೀರ್ಯದ ಮೊದಲು ಸ್ರವಿಸುವ ದ್ರವಗಳಲ್ಲಿ ಮತ್ತು ಯೋನಿ ದ್ರವಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಇದು ಮುಖ್ಯವಾಗಿ ಅಸುರಕ್ಷಿತ ಯೋನಿ, ಲೈಂಗಿಕತೆಯ ಮೂಲಕ ಹರಡುತ್ತದೆ. ಅಲ್ಲದೆ ಆ ದ್ರವಗಳೊಂದಿಗೆ ಸಂಪರ್ಕದಲ್ಲಿರುವ ಕೈಗಳಿಂದ ಕಣ್ಣುಗಳನ್ನು ಸ್ಪರ್ಶಿಸುವುದು ಸಹ ಕಣ್ಣುಗಳಲ್ಲಿ ಸೋಂಕಿಗೆ ಕಾರಣವಾಗಬಹುದು. ಇದು ಹೆರಿಗೆಯ ಸಮಯದಲ್ಲಿ ಸೋಂಕಿತ ತಾಯಿಯಿಂದ ಮಗುವಿಗೆ ಹರಡುತ್ತದೆ.

ಚಿಕಿತ್ಸಾ ವಿಧಾನಗಳು:
ಡ್ಯುಯಲ್ ಥೆರಪಿ ನಡೆಸಲಾಗುತ್ತದೆ. ಬಳಿಕ ಡೋಸ್ ಗಳಾಗಿ ಔಷಧಗಳನ್ನು ನೀಡಲಾಗುತ್ತದೆ. ಮತ್ತೊಂದು ಡೋಸ್ ಆಗಿ ಇಂಟ್ರಾಮಸ್ಕುಲರ್ ಇಂಜೆಕ್ಷನ್ ನೀಡಲಾಗುತ್ತದೆ. ವೈದ್ಯರು ತಿಳಿಸಿದ ಚಿಕಿತ್ಸೆ ಮುಗಿಯುವವರೆಗೂ ಲೈಂಗಿಕತೆಯಿಂದ ದೂರವಿರಬೇಕಾಗುತ್ತದೆ.

2 Comments
  1. Soğanlık su kaçak tespiti says

    Soğanlık su kaçak tespiti Garantili Çözüm: Yaptıkları iş için garanti vermeleri güvenimi artırdı. https://www.buzzakoo.com/ustaelektrikci

Leave A Reply

Your email address will not be published.