of your HTML document.

BBK11: ಬಿಗ್‌ಬಾಸ್‌ ಮನೆಯಲ್ಲಿ ಮಣ್ಣಿನ ಗೊಂಬೆ, ಕೀಲಿಗೊಂಬೆಗಳಿಗೆ ಸವಾಲು ಹಾಕಿದ ತ್ರಿವಿಕ್ರಮ್‌

BBK 11: ಬಿಗ್‌ಬಾಸ್‌ ಸೀಸನ್‌ 11 ಇಂದಿನ ಸಂಡೇ ಎಪಿಸೋಡ್‌ ಮೆಗಾ ಟ್ವಿಸ್ಟ್‌ಗೆ ಕಾರಣವಾಗಲಿದೆ. ಇದರಲ್ಲಿ ಎಲಿಮಿನೇಷನ್‌ ಸೇರಿದಂತೆ ಬಿಗ್‌ಬಾಸ್‌ ಮನೆಯ ಮಹಿಳಾ ಮಣಿಗಳು ತ್ರಿವಿಕ್ರಮ್‌ ಜೊತೆ ತಿರುಗಿಬಿದ್ದಿದ್ದಾರೆ. ಮಾತು ಚೂಪಾದ ಬಾಣದ ರೀತಿಯಲ್ಲಿ ಚುಚ್ಚುತ್ತಾ ಹೋಗಿದೆ.

ಸ್ಪೆಷಲ್‌ ಟಾಸ್ಕ್‌ವೊಂದನ್ನು ಇಂದಿನ ಎಪಿಸೋಡ್‌ನಲ್ಲಿ ನೀಡಲಾಗಿದ್ದು, ಗಾದೆ ಮಾತುಗಳು ಬಿಗ್‌ಬಾಸ್‌ ಮನೆಯಲ್ಲಿ ಯಾರಿಗೂ ಸೂಟ್‌ ಆಗುತ್ತೆ ಎಂದು ಅವರ ಕುತ್ತಿಗೆಗೆ ಹಾಕಬೇಕು ಅನ್ನೋ ಆಟದಲ್ಲಿ ಮನದ ಕಿಚ್ಚು ಹೊರಗೆ ಬಂದಿದೆ.

ಗಾದೆ ಮಾತುಗಳ ಈ ಆಟದಲ್ಲಿ ಬಿಗ್‌ಬಾಸ್‌ ಮನೆಯ ಕೆಲವು ಮಹಿಳಾ ಸದಸ್ಯರು ತ್ರಿವಿಕ್ರಮ್‌ ಅವರನ್ನೇ ಟಾರ್ಗೆಟ್‌ ಮಾಡಿದ್ದಾರೆ. ಚೈತ್ರಾ ಕುಂದಾಪುರ, ತ್ರಿವಿಕ್ರಮ್‌ಗೆ ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ, ಹಾವನ್ನ ಹೂ ಎಂದು ಒಪ್ಪಿಸುತ್ತಾರೆ, ಅನಾಚಾರಗಳು ಮುಂದಿನ ದಿನಗಳಲ್ಲಿ ಹೊರಗೆ ಬರ್ತಾವೆ ಸರ್‌ ಎಂದು ಸವಾಲು ರೀತಿಯಲ್ಲಿ ತ್ರಿವಿಕ್ರಮ್‌ಗೆ ಹಾಕಿದ್ದಾರೆ.

ಈ ವಾರ ಒಂದೇ ಟೀಮ್‌ನಲ್ಲಿ ಇದ್ದು ಆಡಿದ ಮೋಕ್ಷಿತಾ ಕೂಡಾ ತ್ರಿವಿಕ್ರಮ್ ಗೆ ನರಿ ಬಣ್ಣ ಬದಲಾದರೂ ಬುದ್ಧಿ ಮಾತ್ರ ಬದಲಾಗಲ್ಲ ಗಾದೆ ಮಾತಿನ ಟ್ಯಾಗನ್ನು ಹಾಕಿದ್ದಾರೆ. ಶೋಭಾ ಶೆಟ್ಟಿ ಕೂಡಾ ಹೈಲೈಟ್‌ ಆಗಲು ಯಾರನ್ನ ಹೇಗೆ ಬೇಕಾದರೂ ಬಳಸಿಕೊಳ್ಳುವ ಮಾತ್ರನ್ನು ಆಡಿದ್ದಾರೆ.

ಈ ಎಲ್ಲಾ ಗಾದೆ ಮಾತಿನ ಟ್ಯಾಗ್‌ಗಳಿಗೆ ತಿರುಗೇಟು ಕೊಟ್ಟ ತ್ರಿವಿಕ್ರಮ್‌ ಅವರು ಬಿಗ್‌ಬಾಸ್‌ ಮನೆಯಲ್ಲಿ ಮಣ್ಣಿನ ಗೊಂಬೆ, ಕೀಲಿ ಗೊಂಬೆಗಳು ತುಂಬಾ ಇದೆ. ಇಷ್ಟು ದಿನ ಅವರು ಏನ್‌ ಮಾಡ್ತಾರೋ ಒಕೆ ಎಂದುಕೊಂಡು ಸುಮ್ಮನಿದ್ದೆ. ಇನ್ನು ಆಗಲ್ಲ ಸಾರ್‌ ಎಂದು ಕಿಚ್ಚ ಸುದೀಪ್‌ ಅವರಲ್ಲಿ ಹೇಳಿದ್ದಾರೆ.

ಬಿಗ್‌ ಬಾಸ್‌ ಮನೆಯ ಮಹಿಳಾ ಮಣಿಗಳು ನೀಡಿದ ಗಾದೆಯ ಕೆಣಕೋ ಟ್ಯಾಗ್‌ ತ್ರಿವಿಕ್ರಮ್‌ ಅವರನ್ನು ಕೆರಳಿಸಿದ್ದು, ಇಷ್ಟು ದಿನ ನಡೆದಿರುವುದು ಒಂದು ಆಟವಾದರೆ, ಇನ್ನು ಮುಂದೆ ನಡೆಯೋ ಆಟ ಬೇರೆ ರೀತಿಯಲ್ಲಿಯೇ ತ್ರಿವಿಕ್ರಮ್‌ ತೋರಿಸಲಿದ್ದಾರೆಯೇ? ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Leave A Reply

Your email address will not be published.