Chattisgarh: ಹುಡುಗಿಯರ ಹಾಸ್ಟೆಲ್‍ಗೆ ನುಗ್ಗಿ ಒಳ ಉಡುಪು ಕದ್ದ ಕಾಮುಕ – ಮುಂದೇನಾಯ್ತೆಂದು ನೀವೇ ನೋಡಿ !!

Chattisgarh : ಯುವಕನೊಬ್ಬ ಬಾಲಕಿಯರ ಹಾಸ್ಟೆಲ್‍ಗೆ ಪ್ರವೇಶಿಸಿ ಅಲ್ಲಿದ್ದ ವಿದ್ಯಾರ್ಥಿನಿಗಳೊಂದಿಗೆ ಕೆಟ್ಟದಾಗಿ (Physical Abuse)ವರ್ತಿಸಿ, ಅವರ ಒಳಉಡುಪುಗಳನ್ನು ಕದಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಛತ್ತೀಸ್‍ಗಢದ( Chhattisgarh)ಕೊಂಡಗಾಂವ್‍ನಲ್ಲಿರುವ ಸರ್ಕಾರಿ ಜಿಎನ್‌ಎಂ ನರ್ಸಿಂಗ್ ಇನ್ಸ್ಟಿಟ್ಯೂಟ್‍ನ ಹಾಸ್ಟೆಲ್‍ನಲ್ಲಿ ಇತ್ತೀಚೆಗೆ ಈ ಘಟನೆ ಬೆಳಕಿಗೆ ಬಂದಿದೆ. ಕಾಮುಕನನ್ನು ಹುಡುಗಿಯರೆಲ್ಲ ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಯುವಕನನ್ನು ರಾಹುಲ್ ನೇತಮ್ (19) ಎಂಬುದಾಗಿ ತಿಳಿದುಬಂದಿದೆ. ತಾನು ತಪ್ಪಾಗಿ ಹಾಸ್ಟೆಲ್ ಪ್ರವೇಶಿಸಿದ್ದಾನೆ ಎಂದು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾನೆ ಎಂದು ಕೊಂಡಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಸೌರಭ್ ಉಪಾಧ್ಯಾಯ ತಿಳಿಸಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿನಿಯರ ಪ್ರಕಾರ, ರಾತ್ರಿ ಯುವಕ ಹಾಸ್ಟೆಲ್ ಆವರಣಕ್ಕೆ ಬಂದು ಅವರ ಕೋಣೆಯ ಮುಂದೆ ಹೋಗಿ ಬಾಗಿಲು ಬಡಿಯಲು ಶುರುಮಾಡಿದ್ದನಂತೆ. ಆರಂಭದಲ್ಲಿ, ವಿದ್ಯಾರ್ಥಿನಿಯರು ಭಯಭೀತರಾಗಿದ್ದಾರೆ. ಆದರೆ ಯುವಕ ನಿರಂತರವಾಗಿ ಬಾಗಿಲು ಬಡಿದಾಗ, ಅವರು ಧೈರ್ಯವನ್ನು ತೋರಿಸಿ ಹೊರಗೆ ಬಂದು ಆತನನ್ನು ಎದುರಿಸಿದ್ದಾರೆ. ಇದರ ನಂತರ, ಯುವಕ ಅವರೊಂದಿಗೆ ಕೆಟ್ಟದಾಗಿ ವರ್ತಿಸಲು ಶುರುಮಾಡಿದ್ದಾನೆ. ವಿದ್ಯಾರ್ಥಿನಿಯರು ತಕ್ಷಣ ಹಾಸ್ಟೆಲ್ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಯುವಕನನ್ನು ಹಿಡಿದು ಒಪ್ಪಿಸಿದ್ದಾರೆ. ನಂತರ ಹಾಸ್ಟೆಲ್ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.