Dr Manjunath: ಕೋವಿಡ್ ಹಗರಣ ಆರೋಪ -ಸಂಸದ ಡಾ. ಮಂಜುನಾಥ್‌ ಕೊಟ್ಟ ಸ್ಪಷ್ಟನೆ ಹೀಗಿದೆ!!

Dr Manjunath: ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣವನ್ನು ತನಿಖೆ ಮಾಡುವುದಕ್ಕೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇದರ ಬೆನ್ನಲ್ಲಿಯೇ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಶ್ರೀರಾಮುಲು ಅವರ ಜೊತೆಗೆ ಕೋವಿಡ್ ಟಾಸ್ಕ್‌ ಫೋರ್ಸ್ ಸಮಿತಿ ಮುಖ್ಯಸ್ಥರಾಗಿದ್ದ ಡಾ.ಸಿ.ಎನ್. ಮಂಜುನಾಥ್ ಅವರಿಗೂ ಸಂಕಷ್ಟ ಎದುರಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ

ಹೌದು, ರಾಜ್ಯದಲ್ಲಿ ಕೋವಿಡ್ ಹಗರಣ ಕಾಲದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರು ಟಾಸ್ಕ್ ಫೋರ್ಸ್ ಕಮಿಟಿ ಮುಖ್ಯಸ್ಥರಾಗಿದ್ದರು. ಟಾಸ್ಕ್ ಫೋರ್ಸ್ ನಿರ್ಣಯದಂತೆ ರಾಜ್ಯ ಸರ್ಕಾರದಿಂದ ಹಲವು ವಸ್ತುಗಳನ್ನು ಖರೀದಿ ಮಾಡಿ ಉಪಯೋಗಿಸಿದೆ. ಈ ಹಿನ್ನೆಲೆಯಲ್ಲಿ ಟಾಸ್ಕ್ ಫೋರ್ಸ್ ಬಗ್ಗೆಯೂ ಕುನ್ಹಾ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಆದ್ದರಿಂದ, ಸಂಸದ ಡಾ.ಮಂಜುನಾಥ್ ವಿರುದ್ದವೂ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದ್ದು, ಅವರಿಗೂ ಸಂಕಷ್ಟ ಬರಲಿದೆಯೇ ಪ್ರಶ್ನೆ ಶುರುವಾಗಿದೆ. ಈ ಬೆನ್ನಲ್ಲೇ ತಮ್ಮ ವಿರುದ್ಧ ಬಂದಿರುವ ಗಂಭೀರ ಆರೋಪದ ಬಗ್ಗೆ ಸ್ಪಷ್ಟನೆ ನೀಡಲು ಡಾಕ್ಟರ್ ಮಂಜುನಾಥ್ ಮುಂದಾಗಿದ್ದಾರೆ.

ಡಾ. ಮಂಜುನಾಥ್ ಅವರ ಸ್ಪಷ್ಟನೆ:

ಡಾ. ಮಂಜುನಾಥ್ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕುತ್ತಾ, ಕೋವಿಡ್ ಸಂದರ್ಭದಲ್ಲಿ ನಾನು ಟಾಸ್ಕ್‌ಫೋರ್ಸ್‌ನ ಅಧ್ಯಕ್ಷನಾಗಿರಲಿಲ್ಲ, ನಾನು ಕೇವಲ ಸರ್ಕಾರದ ಸಲಹಾ ಸಮಿತಿಯ ಭಾಗವಾಗಿದ್ದೆ, ಎಂದು ಹೇಳಿದ್ದಾರೆ. ಅವರು ಸಲಹಾ ಸಮಿತಿಯ ಪ್ರಾಥಮಿಕ ಜವಾಬ್ದಾರಿಯ ಬಗ್ಗೆ ವಿವರಣೆಯನ್ನು ‌ನೀಡಿದ್ದು, ಅವು ಹೀಗಿದೆ:

1. ಸಲಹಾ ಸಮಿತಿಯು ಸಂಪೂರ್ಣವಾಗಿ ತಜ್ಞರ ಸಲಹೆಗಳನ್ನು ನೀಡಲು ಮಾತ್ರ ಉದ್ಧೇಶಿತವಾಗಿದೆ.
2. ಸಮಿತಿಯ ಯಾವುದೇ ಸದಸ್ಯರು, ಡಾ. ಮಂಜುನಾಥ್ ಸೇರಿದಂತೆ, ಸರ್ಕಾರದ ಕಾರ್ಯಚಟುವಟಿಕೆಗಳಲ್ಲಿ ಅಥವಾ ನಿರ್ವಹಣಾ ನಿರ್ಧಾರಗಳಲ್ಲಿ ನೇರವಾಗಿ ಭಾಗವಹಿಸಿಲ್ಲ
3. ಕೋವಿಡ್ ಸಮಯದಲ್ಲಿ ಆರೋಗ್ಯ ಸೇವೆಗಳ ಕುರಿತಂತೆ ತಂತ್ರಜ್ಞಾನ, ವೈದ್ಯಕೀಯ ಮೂಲಸೌಕರ್ಯಗಳ ಸುಧಾರಣೆ, ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಸಲಹೆಗಳನ್ನು ಮಾತ್ರ ನೀಡಲು ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಗಿತ್ತು.

ತಮಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇಲ್ಲದ ಕಾರಣ, ತನ್ನ ವಿರುದ್ಧದ ಆರೋಪಗಳು ಅರ್ಥವಿಲ್ಲದೆಂದು ಅವರು ಹೇಳಿದ್ದಾರೆ. ಇದಲ್ಲದೆ, ನಾನು ಸಮಿತಿಯಲ್ಲಿದ್ದ ಸಾಮಾನ್ಯ ಸದಸ್ಯರಂತೆಯೇ, ಸಮಯೋಚಿತ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದೇನೆ. ಆದರೆ ಆಡಳಿತವು ಅವುಗಳನ್ನು ಹೇಗೆ ಬಳಸಿತು ಎಂಬುದರಲ್ಲಿ ನನ್ನ ಅಧಿಕಾರ ಇರಲಿಲ್ಲ, ಎಂದು ಹೇಳುವ ಮೂಲಕ, ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

Leave A Reply

Your email address will not be published.