Job offer: ಡಿಗ್ರಿ ಇಲ್ಲದೇ ಇದ್ರೂ ವಿದೇಶದಲ್ಲಿ ಭಾರತೀಯರಿಗೆ ಉದ್ಯೋಗವಕಾಶ: ಭರ್ಜರಿ ಸ್ಯಾಲರಿ!
Job offer: ಯುರೋಪಿನ ಅತಿದೊಡ್ಡ ಆರ್ಥವ್ಯವಸ್ಥೆ ಹೊಂದಿರುವ ಜರ್ಮನಿಗೆ ವಿದೇಶಿ ಕೆಲಸಗಾರರ ಅವಶ್ಯಕತೆಯಿದೆ. ಅಂದರೆ ಮುಖ್ಯವಾಗಿ ಭಾರತೀಯ ಪ್ರೊಫೆಷನಲ್‌ಗಳನ್ನು, ವಿಶೇಷವಾಗಿ ಎಂಜಿನಿಯರ್‌ಗಳನ್ನು ಆಕರ್ಷಿಸಲು, ಜರ್ಮನಿ ತನ್ನ ಬ್ಲೂ ಕಾರ್ಡ್ ಪಾಲಿಸಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆ ವೀಸಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದಲ್ಲದೆ, ಹೆಚ್ಚಿನ ಭಾರತೀಯರಿಗೆ ಉದ್ಯೋಗಾವಕಾಶಗಳನ್ನು (Job offer) ಸೃಷ್ಟಿಸುತ್ತದೆ.
ಮುಖ್ಯವಾಗಿ ಹೊಸ ಬ್ಲೂ ಕಾರ್ಡ್ ಪಾಲಿಸಿಯು ನುರಿತ ಕೆಲಸಗಾರರಿಗೆ ಜರ್ಮನಿಯಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಸಹಾಯ ಆಗಲಿದೆ. ಸದ್ಯದಲ್ಲೇ ಅಂದರೆ 2025 ರಿಂದ ಹೊಸ ನೀತಿ ಜಾರಿಗೆ ಬರಲಿದೆ. ಇದರಿಂದ ಭಾರತೀಯರು ಹೆಚ್ಚಿನ ಲಾಭ ಪಡೆಯಲಿದ್ದಾರೆ.
ಇನ್ನು ಬ್ಲೂ ಕಾರ್ಡ್ ಎಂದರೆ ವಿದೇಶಿ ಕೆಲಸಗಾರರು ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡಲು ಮತ್ತು ವಾಸಿಸಲು ಅನುಮತಿಸುವ ಒಂದು ಪರ್ಮಿಟ್. ಇದು ಯುರೋಪಿಯನ್ ಒಕ್ಕೂಟದ 27 ರಾಷ್ಟ್ರಗಳಲ್ಲಿ 25 ರಾಷ್ಟ್ರಗಳಿಂದ ಅಂಗೀಕರಿಸಲ್ಪಟ್ಟಿದೆ. ಇದು ಅಮೆರಿಕದ ಗ್ರೀನ್ ಕಾರ್ಡ್‌ನಂತೆಯೇ ಇದೆ.
ಹೊಸ ನೀತಿಯಲ್ಲಿ, ಬ್ಲೂ ಕಾರ್ಡ್ ಪಡೆಯಲು ಕನಿಷ್ಠ ವೇತನ ಮಿತಿಯನ್ನು ಬದಲಾಯಿಸಲಾಗಿದೆ. ಇದರಿಂದ ವರ್ಷಕ್ಕೆ 45,300 ಯೂರೋಗಳಷ್ಟು ಸಂಬಳ ಪಡೆಯುವ ಪ್ರೊಫೆಷನಲ್‌ಗಳು ಸಹ ಬ್ಲೂ ಕಾರ್ಡ್ ಪಡೆಯಬಹುದು.
ಇದು ಜರ್ಮನಿಯ ಸರಾಸರಿ ವೇತನಕ್ಕಿಂತ 1.5 ಪಟ್ಟು ಹೆಚ್ಚು. ಐಟಿ, ಹೆಲ್ತ್‌ಕೇರ್ ಮತ್ತು ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳಿಗೆ ಕನಿಷ್ಠ ವೇತನ 41,041.80 ಯೂರೋಗಳು ಮಾತ್ರ. ಈ ಬದಲಾವಣೆಯು ಭಾರತೀಯ ಟೆಕ್ ಪ್ರೊಫೆಷನಲ್‌ಗಳು ಬ್ಲೂ ಕಾರ್ಡ್ ಪಡೆಯುವುದನ್ನು ಸುಲಭಗೊಳಿಸುತ್ತದೆ.
ಜರ್ಮನಿ ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಆರೋಗ್ಯ, ಮಾಹಿತಿ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ನುರಿತ ಉದ್ಯೋಗಿಗಳನ್ನು ಹುಡುಕುತ್ತಿದೆ. ಬ್ಲೂ ಕಾರ್ಡ್ ಪಡೆಯಲು ಅಗತ್ಯವಿರುವ ವೃತ್ತಿಗಳ ಪಟ್ಟಿಗೆ ಹೊಸದಾಗಿ ಹಲವಾರು ವೃತ್ತಿಗಳನ್ನು ಸೇರಿಸಿದೆ. ಇದರಿಂದ ಯುರೋಪಿನಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರಿಗೆ ಹೆಚ್ಚಿನ ಅವಕಾಶಗಳಿವೆ.
ಇನ್ನು ಕಳೆದ ಮೂರು ವರ್ಷಗಳಲ್ಲಿ ಪದವಿ ಮುಗಿಸಿದ್ದರೆ, 41,041.80 ಯೂರೋ ಕನಿಷ್ಠ ವೇತನದಲ್ಲಿ ಯಾವುದೇ ಕ್ಷೇತ್ರದಲ್ಲಿ ಬ್ಲೂ ಕಾರ್ಡ್ ಪಡೆಯಬಹುದು. ಪದವೀಧರ ಭಾರತೀಯ ಯುವಕರಿಗೆ ವಿದೇಶದಲ್ಲಿ ಕೆಲಸ ಮಾಡಲು ಇದು ಒಂದು ಉತ್ತಮ ಅವಕಾಶ.
ಜರ್ಮನಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಅಂದರೆ ಕಡಿಮೆ ದಾಖಲೆಗಳನ್ನು ಪಡೆದು, ತ್ವರಿತ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದೆ. ಇದು ಜರ್ಮನಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವವರಿಗೆ ಅವಕಾಶವನ್ನು ಸೃಷ್ಟಿಸುತ್ತದೆ.