Dead body: 6 ತಿಂಗಳ ಹಿಂದೆ ಮಣ್ಣಲ್ಲಿ ಹೂತಿದ್ದ ಶವದ ಅಸಲಿ ವಿಚಾರ ಬಯಲು!

Share the Article

Dead body: ಕೆಲವೊಂದು ಸತ್ಯ ವಿಚಾರವನ್ನು ಸಮಯವೇ ಬಯಲಿಗೆ ತರುತ್ತೆ ಅನ್ನೋದಕ್ಕೆ ಇದೇ ಒಂದು ಉತ್ತಮ ಉದಾಹರಣೆ. ಯಾಕೆಂದರೆ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ ಕಳೆದ ಮೇ 12 ರಂದು ಸಾಪ್ರೀನ್‌ ವಂಟಿ ಎನ್ನುವ 10 ವರ್ಷದ ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ತಮ್ಮದೆ ಜಮೀನಿನಲ್ಲಿ ಶವವನ್ನ (Dead body) ಹೂತು ಅಂತ್ಯಕ್ರಿಯೆ ನೆರವೇರಿಸಿದ್ದರು. ಆದ್ರೆ ಇದಾಗ 6 ತಿಂಗಳ ಬಳಿಕ ಬಾಲಕಿಯ ಸಾವಿನ ಅಸಲಿ ಕಾರಣ ಈಗ ಬಯಲಾಗಿದೆ.

ಹೌದು, ಬಾಲಕಿ ಹಾವು ಕಚ್ಚಿ ಸಾವನ್ನಪ್ಪಿದ್ದಲ್ಲ ಬದಲಿಗೆ ಇದೊಂದು ವ್ಯವಸ್ಥಿಯ ಕೊಲೆ ಎನ್ನುವ ಆರೋಪ ಬಾಲಕಿ ತಂದೆ ಸಲೀಂ ವಂಟಿ ಹಾಗೂ ತಾಯಿ ಶಬಾನಾರ ಗಂಭೀರ ಆರೋಪವಾಗಿದೆ. 6 ತಿಂಗಳ ಹಿಂದೆ ತಮ್ಮ ಮಗಳನ್ನ ಕರೆಂಟ್‌ ನೀಡಿ ಸಂಬಂಧಿಕರೆ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮಾಹಿತಿ ಪ್ರಕಾರ ಮೇ 12 ರಂದು ಬಾಲಕಿ ಸಾಪ್ರೀನ್‌ ಸಾವನ್ನಪ್ಪಿದ್ದಳು. ಆದ್ರೆ ಹಾವು ಕಚ್ಚಿದೆ ಎಂದು ಭಾವಿಸಿ ಕುಟುಂಬಸ್ಥರು ಮಣ್ಣು ಮಾಡಿದ್ದರು. ಆದ್ರೆ 2 ತಿಂಗಳ ಬಳಿಕ ಅಂದ್ರೆ ಜುಲೈ 7 ರಂದು ಬಾಲಕಿಯ ತಾಯಿ ಶಾಬಾನಾಗೆ ಸಹೋದರ ಸಂಬಂಧಿಗಳಿಂದ ವಿಷ ಉಣಿಸಲು ಯತ್ನ ನಡೆದಿತ್ತು . ಈ ವೇಳೆ ವಿಷ ಹಾಕುತ್ತಿದ್ದ ಸಹೋದರ ಸಂಬಂಧಿಕ ಮಹಮ್ಮದ್‌ ವಂಟಿ ಹಾಗೂ ಆತನ ತಾಯಿ ರಜಾಕ್‌ಮಾ ನಿನ್ನ ಮಗಳಿಗೆ ಕರೆಂಟ್‌ ಕೊಟ್ಟು ಸಾಯಿಸಿದ್ದೇವೆ. ಅವತ್ತೇ ನಿನ್ನನ್ನು ಮುಗಿಸಿ ಬಿಡುತ್ತಿದ್ದೆವು, ಎಂದು ಹೇಳುತ್ತಲೆ ಬಾಟಲಿಯಲ್ಲಿದ್ದ ವಿಷ ಉಣಿಸಿದ್ದಾರಂತೆ. ಬಳಿಕ ಬಾಗಿಲು ಹಾಕಿಕೊಂಡು ಹೋಗಿದ್ದಾರೆ.

ಆದ್ರೆ ಅದೃಷ್ಟವಶಾತ್‌ ಅಲ್ಲಿಂದ ತಪ್ಪಿಸಿದ ಶಾಬಾನಾ ನಡೆದ ಘಟನೆ ವಿವರಿಸಿದ್ದಳು. ಇನ್ನು ಶಾಬಾನ ವಿಷ ಪ್ರಾಶನವಾದ ಸಮಯ ಮಾತನಾಡಿದ ವಿಡಿಯೋ ದೃಶ್ಯಗಳನ್ನ ಪತಿ ಸಲೀಂ ಮೊಬೈಲ್‌ ನಲ್ಲಿ ಸೆರೆ ಹಿಡಿದಿದ್ದ. ನಂತರ ಬಾಲಕಿ ಸಾಪ್ರೀನ್‌ ಸಾವು ಅಸಹಜ ಎನ್ನವ ವಿಚಾರವಾಗಿ ಸಂಬಂಧಿಕರ ವಿರುದ್ಧ ದೂರು ನೀಡಲು ಚಡಚಣ ಠಾಣೆಗೆ ತಂದೆ ಸಲೀಂ ತಾಯಿ ಶಾಬಾನಾ ಬೆಂಗಳೂರು ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸ್‌ ಮಹಾನಿರ್ದೇಶಕರು ಸಾಪ್ರೀನ್‌ ಶವ ಪರೀಕ್ಷೆಗೆ ಆದೇಶ ನೀಡಿದ್ದರು.

ನಂತರ ಬಾಲಕಿಯ ಶವವನ್ನ ಹೊರ ತೆಗೆದು ಶವಪರೀಕ್ಷೆ ಪಡೆಸಲಾಗಿದೆ. ವಿಜಯಪುರ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ್‌ ಮಾರಿಹಾಳ, ಇಂಡಿ ಉಪವಿಭಾಗಾಧಿಕಾರಿ ಹಬೀದ್‌ ಗದ್ಯಾಳ ನೇತೃತ್ವದಲ್ಲಿ ಬಾಲಕಿಯ ಶವ ಪರೀಕ್ಷೆ ನಡೆಸಲಾಯಿತು. ಸದ್ಯ ಶವ ಪರೀಕ್ಷೆಯ ವರದಿ ಬಂದ ಮೇಲೆ ಅಸಲಿ ವಿಚಾರ ಬಯಲಿಗೆ ಬರಲಿದೆ.

Leave A Reply