APL ration card: APL ರೇಷನ್‌ ಕಾರ್ಡ್‌ ರದ್ದು ಮಾಡಿದ ಆಹಾರ ಇಲಾಖೆ!

APL ration card: ರೇಷನ್ ಕಾರ್ಡ್‌ಗೆ e-kyc ಮಾಡದ ಕಾರಣಕ್ಕೆ APL ಕಾರ್ಡ್ ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಅಲ್ಲದೇ ಎಪಿಎಲ್‌ ಕಾರ್ಡ್‌ದಾರರಿಗೆ ನೀಡುತ್ತಿದ್ದ ರೇಷನ್‌ ಅನ್ನೂ ಸಹಿತ ಸ್ಥಗಿತ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಎಪಿಎಲ್‌ ಕಾರ್ಡ್‌ದಾರರಿಗೆ (APL ration card) ಶಾಕ್‌ ನೀಡಿದೆ.

ಇದೀಗ APL ಕಾರ್ಡ್ ರದ್ದು ಮಾಡಿದ ಕಾರಣ ಸರ್ಕಾರ ಹಾಗೂ ಆಹಾರ ಇಲಾಖೆ ವಿರುದ್ಧ APL ಕಾರ್ಡ್‌ದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದಲ್ಲಿ 25,62,562 APL ಕಾರ್ಡ್‌ಗಳಿವೆ. ನಕಲಿ ರೇಷನ್ ಕಾರ್ಡ್ ತಡೆಯುವ ನಿಟ್ಟಿನಲ್ಲಿ e-KYCಅನ್ನು ಇಲಾಖೆ ಕಡ್ಡಾಯ ಮಾಡಿತ್ತು.
ಈ ವೇಳೆ ಫಲಾನುಭವಿಗಳು ಶೇಕಡಾ 100ರಷ್ಟು ಆಧಾರ್ ಜೋಡಣೆ ಮಾಡಿದ್ದರು. ಈ ಹಂತದಲ್ಲಿ ಲಕ್ಷಾಂತರ ಬೋಗಸ್ ಕಾರ್ಡ್ ಗಳು ಪತ್ತೆಯಾಗಿತ್ತು. 2019-2022ರ ವರೆಗೆ ರೇಷನ್ ಕಾರ್ಡ್ ಗೆ ಮತ್ತೆ e-KYC ಪ್ರಕ್ರಿಯೆ ಮಾಡಿಸುವಂತೆ ಇಲಾಖೆ ನಿಯಮ ಜಾರಿ ಮಾಡಿತ್ತು. ಈ ಸಂಧರ್ಭದಲ್ಲಿ ಶೇ. 80ರಷ್ಟು APL ಫಲಾನುಭವಿಗಳು e-KYC ಮಾಡಿಕೊಂಡಿದ್ದರು. ಇನ್ನುಳಿದ ಶೇ. 20 ರಷ್ಟು ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ e-KYC ಮಾಡಿಕೊಂಡಿರಲಿಲ್ಲ. ಅಂತವರ ಕಾರ್ಡ್ ಗಳು ರದ್ದಾಗಿವೆ.

ಇದೀಗ APL ರದ್ದತಿಯಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಪಡೆಯುತ್ತಿರುವ ಹಣ ಸ್ಥಗಿತವಾಗಿದೆ, ಕುಟುಂಬದಡಿ ಐಡಿ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲ್ಲ. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಆಗಲ್ಲ. ವಿವಿಧ ಸರಕಾರಿ ಸೌಲಭ್ಯಗಳು ಸಿಗಲ್ಲ. ಆಯುಷ್ಮಾನ್ ಭಾರತ ಯೋಜನೆ ಲಾಭ ಪಡೆಯಲು ಸಾಧ್ಯವಾಗಲ್ಲ. ರಿಯಾಯಿತಿ ದರದಲ್ಲಿ ಅಕ್ಕಿ ಸಿಗಲ್ಲ. ಅಲ್ಲದೆ ಕೇಂದ್ರ ಸರ್ಕಾರದಿಂದ ನೀಡುವ ಮೀಸಲಾತಿ ದೊರೆಯಲ್ಲ.

Leave A Reply

Your email address will not be published.