Banana Phobia: ಸ್ವೀಡನ್ ದೇಶದ ಈ ಸಚಿವೆ ಬಾಳೆಹಣ್ಣು ಕಂಡ್ರೆ ಸಾಕು ಬೆಚ್ಚಿ ಬೀಳ್ತಾರೆ – ಕಾರಣ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ!!
Banana Phobia: ಬಾಳೆಹಣ್ಣು ಹೆಚ್ಚಿನ ಪ್ರೋಟೀನ್ ಹೊಂದಿರುವ ಹಣ್ಣುಗಳಲ್ಲಿ ಒಂದು. ವರ್ಷವಿಡೀ ಲಭ್ಯವಾಗೋ ಈ ಹಣ್ಣನ್ನು ಡಯಟ್ ಫುಡ್ ಆಗಿಯೂ ಬಳಸುತ್ತಾರೆ. ಅಲ್ಲದೆ ಊಟವಾದ ಮೇಲೆ ಒಂದು ಬಾಳೆ ಹಣ್ಣು(protection of Banana) ತಿಂದರೇನೇ ಅದು ಪೂರ್ತಿ ಅನಿಸುತ್ತದೆ ಎಂಬ ಮಾತೂ ಇದೆ. ಹೀಗಾಗಿ ಹೆಚ್ಚಿನವರಿಗೆ ಬಾಳೆಹಣ್ಣು ಎಂದರೆ ತುಂಬಾ ಇಷ್ಟ. ಆದರೆ ಸ್ವೀಡನ್ ದೇಶದ ಈ ಸಚಿವೆಗೆ ಬಾಳೆಹಣ್ಣು ಕಂಡ್ರೆ ಆಗುವುದಿಲ್ಲಂತೆ. ಕಾರಣ ಗೊತ್ತಾದ್ರೆ ನೀವು ಕೂಡ ಹುಬ್ಬೇರಿಸುತ್ತೀರಾ.
ಯಸ್, ಬಾಳೆಹಣ್ಣಿಗೆ ಯಾರಾದ್ರೂ ಭಯಪಡುತ್ತಾರಾ ಎಂದು ನೀವು ನಂಬದೇ ಇರಬಹುದು. ಆದರೆ, ನಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಬಾಳೆಹಣ್ಣಿಗೆ ಹೆದರುವ ಆ ಮಹಿಳೆ ಬೇರೆ ಯಾರೂ ಅಲ್ಲ ಅವರೇ ಸ್ವೀಡನ್ನ ಸಚಿವೆ ಫೌಲಿನಾ ಬ್ರಾಂಡ್ ಬರ್ಗ್. ಇವರು ಸ್ವೀಡನ್ ಸರ್ಕಾರದಲ್ಲಿ ಲಿಂಗ ಸಮಾನತೆಯ ಸಚಿವೆಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಗೆ ಬಾಳೆಹಣ್ಣಿನ ಭಯ ( Banana Phobia ) ಇದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಿಂದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಇತ್ತೀಚೆಗಷ್ಟೇ, ಅವರು ಒಂದು ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಹೀಗಾಗಿ ಅವರ ಸಚಿವಾಲಯದ ಸಿಬ್ಬಂದಿ ಬಾಳೆಹಣ್ಣು ಇಡದಂತೆ ಇ-ಮೇಲ್ ಕಳುಹಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಅಂದಹಾಗೆ ಈ ಸಚಿವೆಗೆ ಫೋಬಿಯಾ ಇರುವ ಕಾರಣ ಬಾಳೆಹಣ್ಣು ಅಂದರೆ ದೂರ. ದೂರ ಬಿಡಿ ಆಗುವುದೇ ಇಲ್ಲ. ಇದನ್ನು ಸ್ವತಹ ಈ ಸಚಿವೆಯ ಬಹಿರಂಗಪಡಿಸಿದ್ದರು. ತನಗೆ ಅಪರೂಪದ ಫೋಬಿಯಾ ಇದೆ ಎಂದು ಸ್ವತಃ ಫೌಲಿನಾ ಬ್ರಾಂಡ್ ಬರ್ಗ್ ಅವರೇ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು. ಹೀಗಾಗಿ ಸಚಿವೆ ಬ್ರಾಂಡ್ ಬರ್ಗ್ ಅವರು ಬಾಲ್ಯದಿಂದಲೂ ಬಾಳೆಹಣ್ಣುಗಳನ್ನು ಇಷ್ಟಪಡುವುದಿಲ್ಲ. ಬಾಳೆಹಣ್ಣು ಕಂಡರೆ ಹೆದರುತ್ತಾರೆ.
ಈ ಕಾರಣದಿಂದ ಆಕೆಗಾಗಿ ವ್ಯವಸ್ಥೆ ಮಾಡುವ ಕೊಠಡಿಗಳಲ್ಲಿ ಹಾಗೂ ವೇದಿಕೆಗಳಲ್ಲಿ ಬಾಳೆಹಣ್ಣುಗಳು ಕಾಣಿಸಿಕೊಳ್ಳದಂತೆ ಆಕೆಯ ಇಲಾಖೆಯ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಬ್ರಾಂಡ್ ಬರ್ಗ್ ಅವರು ಎಲ್ಲಿಗಾದರೂ ಹೋದಾಗ, ಊಟದ ವೇಳೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವರ ಮುಂದೆ ಬಾಳೆಹಣ್ಣು ಇಡದಂತೆ ಅವರ ಸಿಬ್ಬಂದಿ ಮೊದಲೇ ಮಾಹಿತಿ ನೀಡುತ್ತಾರಂತೆ.
xj5vog