Lawyer Jagadish : ದರ್ಶನ್ ಪತ್ನಿ ವಿಜಯಲಕ್ಷ್ಮಿ ಗೆ ಖಡಕ್ ವಾರ್ನಿಂಗ್ ಕೊಟ್ಟ ಲಾಯರ್ ಜಗದೀಶ್ – ಯಾಕಾಗಿ ಗೊತ್ತಾ?

Share the Article

Lawyer Jagadish: ನಟ ದರ್ಶನ್ ಅವರು ಜೈಲಿನಲ್ಲಿದ್ದ ಸಂದರ್ಭದಲ್ಲಿ ನಾನು ದರ್ಶನ್ ಪರವಾದ ಮಾಡುತ್ತೇನೆ ಎಂದು ಹೇಳುತ್ತಿದ್ದ ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್(Lawyer Jagadish)ಅವರು ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ನಟ ದರ್ಶನ್ ವಿರುದ್ಧವೇ ದೂರು ದಾಖಲಿಸಿ ಸುದ್ದಿಯಾಗಿದ್ದಾರೆ.

ಹೌದು, ನಟ ದರ್ಶನ್ s/o ಶ್ರೀನಿವಾಸ್ ತೂಗುದೀಪ ಹಾಗೂ ಆತನ ಅಭಿಮಾನಿಗಳಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ. ನಾನು ದರ್ಶನ್ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದೇನೆಂದು ದರ್ಶನ್ ಅಭಿಮಾನಿಗಳು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 2 ದಿನಗಳಲ್ಲಿ ಬರೋಬ್ಬರಿ 1,000ಕ್ಕೂ ಅಧಿಕ ಬಾರಿ ಕರೆ ಮಾಡಿದ್ದಾರೆ. ಅಲ್ಲದೆ ದರ್ಶನ್ ಅಭಿಮಾನಿಗಳು ನಮ್ಮ ಬಾಸ್ ಬಗ್ಗೆ ಏಕವಚನದಲ್ಲಿ ಮಾತಾಡ್ತೀಯಾ ಎಂದು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಇದೆಲ್ಲವನ್ನು ಸ್ವತಃ ನಟ ದರ್ಶನ್ ಬೇಕಂತೆಲೇ ಮಾಡಿಸುತ್ತಿದ್ದಾನೆ. ಇನ್ನು ದರ್ಶನ್‌ ಕೊಲೆ ಆರೋಪಿ ಆಗಿರುವುದರಿಂದ ಆತನ ನೆಟ್‌ವರ್ಕ್ ಕೂಡ ಹಾಗೆಯೇ ಇದೆ. ಹೀಗಾಗಿ, ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಅದರಲ್ಲಿಯೂ ದರ್ಶನ್ ಅಭಿಮಾನಿ ರಿಷಿ ಎನ್ನುವ ವ್ಯಕ್ತಿಯೇ ನನಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ನಟ ದರ್ಶನ್ ಹಾಗೂ ರಿಷಿ ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಿವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೇ ಜಗದೀಶ್ ಅವರು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ(Vijayalakshmi) ಖಡಕ್ ವಾರ್ನಿಂಗ್ ನೀಡಿದ್ದಾರೆ.

https://www.facebook.com/share/r/18V63qSAw8/

ಯಸ್, ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿರುವ ಲಾಯರ್‌ ಜಗದೀಶ್‌ ಅವರು ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಇದು ವಿಜಯಲಕ್ಷ್ಮಿ ಅವರಿಗೆ ಕ್ಷಮೆ ಕೋರಿರುವ ವಿಡಿಯೋ ಎಂದೆನಿಸಿದರೂ, ಅದರಲ್ಲಿ ಕ್ಷಮೆ ಎಂಬ ಮಾತೆಲ್ಲಾ ಜಗದೀಶ್‌ ಅವರು ಆಡಿಲ್ಲ. ಬದಲಿಗೆ ತಮ್ಮ ಮತ್ತು ಪತ್ನಿ-ಮಕ್ಕಳ ವಿಷಯಕ್ಕೆ ದರ್ಶನ್‌ ಅವರು ಬಂದ್ರೆ ಸುಮ್ಮನಿರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ದರ್ಶನ್‌ ಅವರನ್ನು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಜಗದೀಶ್‌ ಅವರು, ತಮ್ಮನ್ನು ಪ್ರೀತಿಸಿದವರ ವಿಷಯಕ್ಕೆ ದರ್ಶನ್‌ ಬಂದರೆ ನಾನು ಬಾಹುಬಲಿ ಆಗಬೇಕಾಗುತ್ತದೆ ಎಂದಿದ್ದಾರೆ.

ಅಲ್ಲದೆ ನೋಡಮ್ಮಾ ವಿಜಯಲಕ್ಷ್ಮಿ… ಯಾರೋ ಶಿಷ್ಯಂದಿರಿಗೆ ಹೇಳಿ ವಿಡಿಯೋ ಮಾಡಿಸಿ ಹಾಕಿದ್ದಾನೆ ನಿನ್ನ ಗಂಡ ದರ್ಶನ್‌. ನಿನ್ನ ಬಗ್ಗೆ ನಾವು ಇಷ್ಟೆಲ್ಲಾ ಒಳ್ಳೆಯದು ಮಾತನಾಡಬೇಕಾದರೆ, ನನ್ನ ಹೆಂಡ್ತಿ- ಮಕ್ಕಳ ಬಗ್ಗೆ ನಿನ್ನ ಗಂಡ ಅವನ ಶಿಷ್ಯಂದಿರು ನೇಣು ಹಾಕ್ತೇನೆ, ಪಾಯ್ಸನ್‌ಹಾಕ್ತೇನೆ ಎಂದರೆ ಹೇಗೆ? ಆ ವಾಯ್ಸ್‌ಕೇಳಿದ್ರೇನೇ ಜಗದೀಶ್‌ಒಬ್ಬ ಬಾಹುಬಲಿ ಆಗಿ ಬಿಡ್ತಾನೆ. ಕಾರಣ ಯಾಕೆ ಅಂದ್ರೆ, ನನ್ನನ್ನು ಮುಟ್ಟಿದ್ರೂ ಪರವಾಗಿಲ್ಲ, ನಾನು ಪ್ರೀತಿ ಮಾಡೋರನ್ನು ಮುಟ್ಟಿದ್ರೆ ನಾನು ಜಗದೀಶ ಆಗಲ್ಲ, ಬಾಹುಬಲಿ ಆಗ್ತೇನೆ. ನಾನು ಪ್ರೀತಿ ಮಾಡುವ ವಿಚಾರ ಬಂದರೆ ನಾನು ಯಾರನ್ನೂ ಕೇರ್‌ಮಾಡಲ್ಲ, ಅದು ಮೇಲಿರುವ ಶಕ್ತಿಯಾದರೂ ಕೂಡ ನಾನು ನನ್ನ ಬಾಹುಬಲಿ ಶಕ್ತಿಯನ್ನು ತೋರಿಸಿಯೇ ತೋರಿಸ್ತೇನೆ ಎಂದು ಹೇಳಿದ್ದಾರೆ.

ಕನ್ನಡ ಇಂಡಸ್ಟ್ರಿ ಬಾಸ್ ದರ್ಶನ್ ಅಂತೆ. ಮೆಡಿಕಲ್ ಬೇಲ್​ ಮೇಲೆ ಹೊರಗೆ ಇದ್ದಾನೆ ಅವನ ಹೆಸರು ಹೇಳಿಕೊಂಡು ನನಗೆ ಧಮ್ಕಿ ಹಾಕ್ತಿದ್ದಾರೆ. ದರ್ಶನ್​ ಬಗ್ಗೆ ಯಾಕ್​ ಏಕವಚನದಲ್ಲಿ ಮಾತಾಡ್ತೀಯಾ, ಮರ್ಡರ್ ಆಗ್ತೀಯಾ ಎಂದೆಲ್ಲಾ ಮೆಸೇಜ್​ಗಳು ಬರ್ತಿವೆ ಎಂದು ಲಾಯರ್ ಜಗದೀಶ್ ಇದಾಗಲೇ ಆರೋಪಿಸಿದ್ದಾರೆ. ನನಗೆ ನಿತ್ಯ ಸಾವಿರಾರು ಫೋನ್​ಗಳು ಬರ್ತಿವೆ. ದರ್ಶನ್ ಹಾಗೂ ರಚಿತಾ ರಾಮ್​ ಬಗ್ಗೆ ಮಾತಾಡ್ತೀಯಾ, ಕನ್ನಡ ಸಿನಿಮಾ ಇಂಡಸ್ಟ್ರಿಗೆ ಹೇಗೆ ಕಾಲಿಡ್ತೀಯಾ ನೋಡೋಣ ಅಂತೆಲ್ಲಾ ಬೆದರಿಕೆ ಹಾಕ್ತಿದ್ದಾರೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Leave A Reply

Your email address will not be published.