Ayodhya : ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ! ಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಿಸುವ ಚಾಲೆಂಜ್ ಹಾಕಿದ್ದಾದ್ರು ಯಾರು?
Ayodhya: ಅಯೋಧ್ಯೆಯಲ್ಲಿರುವ (Ayodhya) ಶ್ರೀರಾಮ ಜನ್ಮಭೂಮಿ ದೇವಸ್ಥಾನವನ್ನು ಆರ್‌ಡಿಎಕ್ಸ್‌ನೊಂದಿಗೆ ಸ್ಫೋಟಿಸಿ ಅದೇ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸುವ ಬೆದರಿಕೆಗಳು ಬಂದಿವೆ ಎಂದು ಟ್ರಸ್ಟ್‌ನ ಸಿಎ ಚಂದನ್ ಕುಮಾರ್ ರೈ ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ಪ್ರಕಾರ, 2024ರ ಆಗಸ್ಟ್ 22 ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಹೆಲ್ಪ್ ಡೆಸ್ಕ್ ವಾಟ್ಸಾಪ್‌ಗೆ ಈ ಸಂದೇಶ ಬಂದಿದೆ. ಉರ್ದು ಭಾಷೆಯಲ್ಲಿ ಬರೆದ ಸಂದೇಶದಲ್ಲಿ ರಾಮಜನ್ಮಭೂಮಿ ದೇವಸ್ಥಾನವನ್ನು ನಾಲ್ಕು ಸಾವಿರ ಕಿಲೋ ಆರ್‌ಡಿಎಕ್ಸ್‌ನಿಂದ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಪ್ರಕರಣದ ತನಿಖೆಯ ವೇಳೆ ಬಿಹಾರ ಪ್ರಾಂತ್ಯದ ಭಾಗಲ್ಪುರ ಜಿಲ್ಲೆಯ ಬಾಬರ್ ಗಂಜ್ ನಿವಾಸಿ ಮೊಹಮ್ಮದ್ ಅಮನ್ ಹೆಸರು ಬೆಳಕಿಗೆ ಬಂದಿದೆ.
ಪ್ರಕರಣ ಬೆನ್ನಲ್ಲೆ ಈ ಹಿನ್ನೆಲೆ ಪ್ರಕರಣದ ತನಿಖೆ ನಡೆಸುತ್ತಿರುವ ಇನ್‌ಸ್ಪೆಕ್ಟರ್ ರಜನೀಶ್ ಕುಮಾರ್ ಪಾಂಡೆ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಈಗಾಗಲೇ ಜೈಲಿನಲ್ಲಿ ಬಂಧಿತರಾಗಿರುವ ಆರೋಪಿ ಮೊಹಮ್ಮದ್ ಅಮಾನ್ ಜಾಮೀನು ಅರ್ಜಿ ವಿಚಾರಣೆಯ ವೇಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ III ಅಶೋಕ್ ಕುಮಾರ್ ದುಬೆ ಈ ಆದೇಶ ನೀಡಿದ್ದಾರೆ.