Mangalore : ಮಂಗಳೂರು: ಅವುಲು ಬಂಗುಡೆದ ಡಿಮ್ಯಾಂಡ್ ಅಲಕ್ಕ ಪೋಂಡ್! ಮೂಲು ಬೋಟ್ ದಕ್ಲೆಗ್ ಬೂರುಂಡು ಪೆಟ್ಟ್!
Mangaluru: ಮಂಗಳೂರು ಅಂದಾಗ ಭೂತಯಿ ಬಂಗುಡೆ ನೆನಪಾಗುತ್ತೆ. ” ಮೀನು ಸಾರ್ ಡ್ ರಡ್ಡ್ ಉನೊಡು ” ಅಂತಾ ಹೇಳುವವರೇ ಹೆಚ್ಚು. ಆದ್ರೆ ವಿದೇಶದಲ್ಲಿ ಬಂಗುಡೆ ಮೀನಿನ ಡಿಮ್ಯಾಂಡ್ ಕಡಿಮೆಯಾಗಿ, ಮೀನು ಮಾರಾಟ ಕ್ಕೆ ಪೆಟ್ಟು ಬಿದ್ದಿದೆ.
ಹೌದು, ಬಂಗುಡೆ ಮೀನಿಗೆ ವಿದೇಶಗಳಲ್ಲಿ ಬೇಡಿಕೆ ಕಡಿಮೆಯಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಇದಕ್ಕೆ ಮುಖ್ಯ ಕಾರಣ ಆಗಿದೆ. ಕೆಲವು ವಾರಗಳ ಹಿಂದೆ ಕಿಲೋಗೆ 200-250 ರೂ. ಗೆ ಮಾರಾಟ ಆಗುತ್ತಿದ್ದ ಬಂಗುಡೆ ಮೀನು ಈಗ ಬಹಳಷ್ಟು ಅಗ್ಗ ವಾಗಿದ್ದು, 100-150 ರೂ.ಗಳಲ್ಲಿ ದೊರೆಯುತ್ತಿದೆ. ಕೆಲವು ದಿನಗಳ ಹಿಂದೆ ಮಂಗಳೂರಿನ (Mangaluru) ಕೇಂದ್ರ ಮೀನು ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಆಗಿರುವುದೂ ಇದೆ!
ಇದರ ನೇರ ಪರಿಣಾಮ ಬೀಳುವುದು ಮೀನುಗಾರರ ಮೇಲೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಸರಕಾರ ಮೀನುಗಾರರ ನೆರವಿಗೆ ಬರಬೇಕು. ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ ಆಗ್ರಹಿಸಿದ್ದಾರೆ.
ಇನ್ನು ಬಂಗುಡೆ ಬಿಟ್ಟರೆ ಇತರ ಮೀನುಗಳ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬೂತಾಯಿಗೆ 130-160 ರೂ. ದರವಿದ್ದರೆ ಮುರು, ಕಲ್ಲೂರು 200 ರೂ. ವರೆಗೆ; ಅಂಜಲ್ 800 ರೂ., ಮಾಂಜಿ 550 -650 ರೂ. ಇದೆ.
ಆದ್ರೆ ಮಾರುಕಟ್ಟೆಯಲ್ಲಿ ಬಂಗುಡೆ ಮೀನಿನ ದರ ಕಡಿಮೆ ಯಾದರೂ ಹೊಟೇಲ್ ದರದಲ್ಲಿ ಇಳಿಕೆಯಾಗಿಲ್ಲ. ಒಂದು ಬಂಗುಡೆಗೆ 150-200 ರೂ. ದರದಲ್ಲಿಯೇ ಮಾರಾಟ ನಡೆಯುತ್ತಿದೆ. ಇದರಿಂದ ಹೊಟೇಲ್ ಮೀನೂಟ ಮಾಡುವವರಿಗೆ ಕೈ ಬಿಸಿ ಟೆನ್ಷನ್ ಇದ್ದದ್ದೇ.