Fixed deposit: FD ಹಣ ಇಟ್ಟಿದ್ದೀರಾ? ಬಂದಿದೆ ಹೊಸ ನಿಯಮ, ಇನ್ನು ಇಷ್ಟು ಹಣಕ್ಕಿಂತ ಹೆಚ್ಚು ಇಟ್ರೆ ಈ ನಿಯಮ ಪಾಲನೆ ಕಡ್ಡಾಯ

Fixed Deposit: ಸಾಮಾನ್ಯವಾಗಿ ಬ್ಯಾಂಕ್ ನ ಕೆಲವು ನಿಯಮಗಳ ಬಗ್ಗೆ ಜನರಿಗೆ ಅರಿವಿಲ್ಲ. ಹಾಗಾಗಿ ನಿಶ್ಚಿತ ಠೇವಣಿಗಳಿಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ನೀವು ಒಂದು ವೇಳೆ ನಿಮ್ಮಲ್ಲಿರುವ ಹಣವನ್ನು FD ಇಡುವುದಾದಲ್ಲಿ ಮೊದಲು ಈ ನಿಯಮ ತಿಳಿಯಿರಿ.

FD ಅಂದರೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಎಂದೂ ಸಹ ಕರೆಯಲ್ಪಡುತ್ತದೆ. ಇದು ಭಾರತದಲ್ಲಿ ಹೂಡಿಕೆದಾರರಿಗೆ ಸ್ಥಿರ ಆದಾಯದ ಯೋಜನೆಯಾಗಿದೆ. ಆರ್‌ಬಿಐ ಇತ್ತೀಚೆಗೆ ಎಫ್‌ಡಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರದಿಂದ ಹಿರಿಯ ನಾಗರಿಕರಿಗೆ ತುಂಬಾ ಅನುಕೂಲವಾಗಲಿದೆ ಎನ್ನುತ್ತಾರೆ ತಜ್ಞರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ‘ಒಟ್ಟು ಠೇವಣಿ’ ಅನ್ನು ರೂ.3 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವರ್ಗಾವಣೆ ಎನ್ನಲಾಗುತ್ತಿತ್ತು. ಪ್ರಸ್ತುತ ಇದು ರೂ 2 ಕೋಟಿಗಿಂತ ಹೆಚ್ಚಿನ ಬ್ಯಾಂಕ್ ಎಫ್‌ಡಿಗಳನ್ನು ಒಟ್ಟು ಸ್ಥಿರ ಠೇವಣಿ ಎಂದು ಪರಿಗಣಿಸಲಾಗುತ್ತದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಈ ಕುರಿತು ಹೇಳಿಕೆ ನೀಡಿದ್ದಾರೆ.
ಬ್ಯಾಂಕ್‌ಗಳು ಸಾಮಾನ್ಯ ಠೇವಣಿಗಳಿಗಿಂತ ಹೆಚ್ಚಿನ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಆದ್ರೆ ಈಗ ಮಿತಿ ಹೆಚ್ಚಳದೊಂದಿಗೆ, ಬ್ಯಾಂಕ್‌ಗಳು ಹೊಸ ಮಿತಿಯ ಸುತ್ತ ತಮ್ಮ ಬಡ್ಡಿ ದರಗಳು ಮತ್ತು ಠೇವಣಿ ಮೊತ್ತವನ್ನು ಬದಲಾಯಿಸಬಹುದು. ಇದು ಎಫ್‌ಡಿ ಹೊಂದಿರುವವರ ಮೇಲೂ ಪರಿಣಾಮ ಬೀರುತ್ತದೆ.
ಇನ್ನು ಆರ್‌ಬಿಐನ ಇತ್ತೀಚಿನ ‘ಗ್ರಾಸ್ ಠೇವಣಿ’ ನಿರ್ಧಾರದ ನಂತರ ಬ್ಯಾಂಕ್‌ಗಳಲ್ಲಿ ಒಂದೇ ಬಾರಿಗೆ 2 ಕೋಟಿಯಿಂದ 3 ಕೋಟಿ ಠೇವಣಿ ಇಡುವವರಿಗೆ 3 ಕೋಟಿಗಿಂತ ಹೆಚ್ಚು ಠೇವಣಿ ಇಡುವವರಿಗೆ ಕಡಿಮೆ ಬಡ್ಡಿ ಸಿಗಲಿದೆ. ಗರಿಷ್ಠ ಮಿತಿಯನ್ನು ಹೆಚ್ಚಿಸುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದೊಡ್ಡ ಹೂಡಿಕೆಯನ್ನು ಉತ್ತೇಜಿಸುವುದು ಆರ್‌ಬಿಐ ಉದ್ದೇಶವಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಈ ಕುರಿತು ಹೇಳಿಕೆ ನೀಡಿದ್ದಾರೆ.