RBI Penalty: ಈ ಬ್ಯಾಂಕ್‌ಗಳಿಗೆ ದಂಡ ವಿಧಿಸಿದ ಆರ್‌ಬಿಐ; ಗ್ರಾಹಕರ ಮೇಲೂ ಎಫೆಕ್ಟ್!?

RBI Penalty: ಬ್ಯಾಂಕಿಂಗ್ ನಿಯಮಗಳ ಉಲ್ಲಂಘನೆ ಹಿನ್ನೆಲೆ, ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎರಡು ಬ್ಯಾಂಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ದಂಡ (RBI Penalty) ವಿಧಿಸಿದೆ. ದಂಡಕ್ಕೆ ತುತ್ತಾಗಿರುವ ಎರಡೂ ಬ್ಯಾಂಕ್‌ಗಳು ಬೇರೆ ರಾಜ್ಯಗಳಲ್ಲಿ ಲೊಕೇಟ್ ಆಗಿವೆ. ಸದ್ಯ ಎರಡು ಬ್ಯಾಂಕ್‌ಗಳಿಗೆ ದಂಡ ವಿಧಿಸಿರುವ ಮಾಹಿತಿಯನ್ನು ನವೆಂಬರ್‌ 4ರಂದು ಆರ್‌ಬಿಐ ನೀಡಿದೆ.

ಹೌದು, ಮಾಹಾರಾಷ್ಟ್ರದ ಉದಗಿರ್‌ನ ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಮೇಘಾಲಯದ ತುರಾದಲ್ಲಿರುವ ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದ್ದು, ದಂಡದ ಶಿಕ್ಷೆಗೆ ಗುರಿಯಾಗಿವೆ. ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 1.5 ಲಕ್ಷ ರೂಪಾಯಿ ಮತ್ತು ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಬ್ಯಾಂಕಿಂಗ್‌ ರೆಗ್ಯೂಲೇಷನ್ ಆಕ್ಟ್ 1949ರ ಸೆಕ್ಷನ್ 46 (4) (i), 56 and 47 A (1) (C) ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಂಡ ಹಾಕಿದೆ.

ಠೇವಣಿದಾರರ ಮೊತ್ತ ಮತ್ತು ಅವೇರ್‌ನೆಸ್ ಫಂಡ್ ಬಗ್ಗೆ ಮಾಹಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ನಿಗದಿತ ಸಮಯದೊಳಗೆ ತಲುಪಿಸುವಲ್ಲಿ ಸಹಯೋಗ ಅರ್ಬನ್ ಕೊ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವಿಫಲವಾಗಿತ್ತು. ಜೊತೆಗೆ ಇನ್ನು ತುರಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ SAF ಅಡಿಯಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಲಿಲ್ಲ. RBI ಯ ಪೂರ್ವಾನುಮತಿ ಇಲ್ಲದೆ ವಾರ್ಷಿಕ 25,000 ಕ್ಕಿಂತ ಹೆಚ್ಚು ಬಂಡವಾಳ ವೆಚ್ಚವನ್ನು ಮಾಡಿತ್ತು. SAF ಅಡಿಯಲ್ಲಿ ಸೂಚಿಸಲಾಗಿರುವ ಗರಿಷ್ಠ ಮಿತಿಗಿಂತ ಹೆಚ್ಚಿನ ಹೊಸ ಸಾಲಗಳನ್ನು ಮಂಜೂರು ಮಾಡಲಾಗಿದೆ. ಈ 2 ನಿಯಮಗಳ ಉಲ್ಲಂಘನೆ ಹಿನ್ನೆಲೆ ತುರಾ ಬ್ಯಾಂಕ್ ದಂಡಕ್ಕೆ ತುತ್ತಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಆರ್‌ಬಿಐ ನಡೆಸಿದ ತಪಾಸಣೆ ವೇಳೆ ನಿಯಮ ಉಲ್ಲಂಘನೆ ಮಾಡಿರೋದು ತಿಳಿದು ಕೂಡಲೇ ಎರಡು ಬ್ಯಾಂಕ್‌ಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು. ನೋಟಿಸ್‌ಗೆ ನೀಡಿದ ಉತ್ತರ ಮತ್ತು ವಿಚಾರಣೆಯಲ್ಲಿ ಬ್ಯಾಂಕ್ ನೀಡಿದ ಮೌಖಿಕ ಪ್ರತಿಕ್ರಿಯೆಯನ್ನು ಪರಿಗಣಿಸಿ ಎರಡೂ ಬ್ಯಾಂಕ್‌ಗಳಿಗೆ ವಿತ್ತೀಯ ದಂಡವನ್ನು ವಿಧಿಸಲು ಆರ್‌ಬಿಐ ನಿರ್ಧರಿಸಿದೆ. ಇನ್ನು ದಂಡಕ್ಕೆ ತುತ್ತಾಗಿರುವ ಬ್ಯಾಂಕ್‌ಗಳ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ರಾಹಕರು ಮತ್ತು ಬ್ಯಾಂಕ್‌ಗಳ ಜೊತೆ ಮಾಡಿಕೊಂಡಿರುವ ಒಪ್ಪಂದಗಳ ಮೇಲೆಯೂ ಯಾವುದೇ ಪರಿಣಾಮ ಬೀರಲ್ಲ.

Leave A Reply

Your email address will not be published.