DK Shivkumar: ‘ನನ್ನ ಹತ್ರ ತಗ್ಗಿ-ಬಗ್ಗಿ ನಡೆಯಬೇಕು ಗೊತ್ತಾಯ್ತಾ?’ ತೇಜಸ್ವಿ ಸೂರ್ಯಗೆ ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್

DK Shivkumar : ಅನುದಾನ ಬಿಡುಗಡೆಯ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ(Tejaswi Surya)ಅವರು ಡಿಕೆ ಶಿವಕುಮಾರ್(DK Shivkumar) ಜೊತೆ ಚರ್ಚೆ ನಡೆಸಿದ್ದು, ನೀವೇ ಹೇಳಿ ಡಿಕೆಶಿ ಅವರು ನನ್ನ ಹತ್ತಿರ ತಗ್ಗಿ ಬಗ್ಗಿ ನಡೆಯಬೇಕು ಗೊತ್ತಾಯ್ತಾ ಎಂದು ತೇಜಸ್ವಿ ಸೂರ್ಯಗೆ ಕಡಕ್ ವಾರ್ನಿಂಗ್ ಮಾಡಿದ್ದಾರೆ
ಹೌದು,ಬಿಬಿಎಂಪಿ(BBMP) ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ. ಅನುದಾನ ಮಂಜೂರು ಮಾಡಿ ಬಿಜೆಪಿ ಶಾಸಕರಿರುವ ಜಯನಗರವನ್ನು ಮಾತ್ರ ಕಡೆಗಣಿಸಿದ್ದು ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಿಚಾರವನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಪ್ರಸ್ತಾಪಿಸಿದ್ದಾರೆ. ಡಿಕೆ ಶಿವಕುಮಾರ್, ನನ್ನ ಬಳಿ ತಗ್ಗಿ ಬಗ್ಗಿ ನಡೆಯಬೇಕು, ಎಲ್ಲರ ಜೊತೆ ಇದ್ದ ಹಾಗೆ ನನ್ನ ಜೊತೆ ಇದ್ದರೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಕ್ಕಪಕ್ಕದಲ್ಲಿಯೇ ಕೂತು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈ ವೇಳೆ ಇತ್ತೀಚೆಗೆ ಬೆಂಗಳೂರು ಜಯನಗರ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆ ಮಾಡದೇ ಇರುವ ಕುರಿತು ತೇಜಸ್ವಿ ಸೂರ್ಯ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳಿಗೂ ಅನುದಾನ ನೀಡಿದ್ದೀರಿ. ಆದರೆ ಜಯನಗರ ಕ್ಷೇತ್ರಕ್ಕೆ ಮಾತ್ರ ಕೊಟ್ಟಿಲ್ಲ ಎಂದು ತೇಜಸ್ವಿ ಸೂರ್ಯ ಡಿಸಿಎಂ ಡಿಕೆ ಶಿವಕುಮಾರ್ ಬಳಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಡಿಕೆಶಿ, ಜಯನಗರ ಶಾಸಕ ಸಿಕೆ ರಾಮಮೂರ್ತಿ ವಿರುದ್ಧ ತೇಜಸ್ವಿ ಸೂರ್ಯ ಮುಂದೆ ಕೆಂಡ ಕಾರಿದ್ದಾರೆ.
ತೇಜಸ್ವಿ ಸೂರ್ಯ ಮಾತಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಜಯನಗರ ಶಾಸಕ ಸಿಕೆ ರಾಮಮೂರ್ತಿಯ ಮಾತು ಹೆಚ್ಚಾಯಿತು. ಆಸ್ಪತ್ರೆಯನ್ನು ಕಿತ್ತುಹಾಕಿಸಿದ್ದೇನೆ, ನನ್ನ ಬಳಿ ತಗ್ಗಿ ಬಗ್ಗಿ ಇರಬೇಕು. ಬೇರೆಯವರ ರೀತಿ ಇದ್ದಹಾಗೆ ನನ್ನ ಹತ್ತಿರ ಇದ್ದರೆ ಆಗುವುದಿಲ್ಲ. ನಾನು ಅಧಿಕಾರಕ್ಕೆ ಬಂದಮೇಲೆ ಬೆಂಗಳೂರು ಅಧೋಗತಿ ತಲುಪಿದೆ ಎಂದಿದ್ದ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಅನುದಾನ ನೀಡದೇ ಇರುವ ನಿರ್ಧಾರವನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ರಾಮಮೂರ್ತಿ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಅದನ್ನು ಸಾಬೀತುಪಡಿಸಲಿ, ಆಮೇಲೆ ಅನುದಾನದ ಬಗ್ಗೆ ನೋಡೋಣ ಎಂದಿದ್ದಾರೆ.