Waqf Property: ವಕ್ಫ್‌ ಆಸ್ತಿ ವಿವಾದ: ರಾಜ್ಯಾದಲ್ಲಿ ಕೇಸರಿ ಪಡೆಯ ಪ್ರತಿಭಟನೆ : ಎಲ್ಲೆಲ್ಲಿ?!

Waqf Property: ಸೋಮವಾರ ಅಂದರೆ ಇಂದು ವಕ್ಫ್ ಆಸ್ತಿ ವಿವಾದಕ್ಕೆ (Waqf Property Controversy) ಸಂಬಂಧಿಸಿದಂತೆ ಪ್ರತಿಪಕ್ಷ ಬಿಜೆಪಿಯು ರಾಜ್ಯಾದಾದ್ಯಂತ ಪ್ರತಿಭಟನೆ (BJP Protest) ನಡೆಸುತ್ತಿದೆ. ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆ ಕುರಿತು ಸಿಬಿಐ ತನಿಖೆ ನಡೆಸಬೇಕು ಮತ್ತು ವಿವಾದಕ್ಕೆ ಕಾರಣವಾದ ಸಚಿವ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಎಲ್ಲೆಡೆ ಪ್ರತಿಭಟನೆಗಿಳಿದಿದ್ದಾರೆ.

ಅಂತೆಯೇ ಬೆಂಗಳೂರಿನಲ್ಲೂ (Bengaluru) ಕೆ.ಆರ್ ಪುರಂ ಬಿಬಿಎಂಪಿ ಕಚೇರಿ ಎದುರು ವಿಪಕ್ಷ ನಾಯಕ ಆರ್‌. ಅಶೋಕ್‌ (R Ashoka) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಮಾಜಿ ಸಚಿವರಾದ ಬೈರತಿ ಬಸವರಾಜು, ಸಪ್ತಗಿರಿ ಗೌಡ, ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಸರ್ಕಾರದ (Congress Govt) ವಿರುದ್ಧ ಧಿಕ್ಕಾರ ಕೂಗಿದ್ದಾರೆ.

ಇದೇ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆರ್.ಅಶೋಕ್‌, ಲವ್ ಜಿಹಾದ್ ಮಾಡಿ ಹಿಂದೂ ಹೆಣ್ಮಕ್ಕಳನ್ನ ಮತಾಂತರ ಮಾಡಿಯಾಯ್ತು. ಈಗ ಲ್ಯಾಂಡ್‌ ಜಿಹಾದ್‌ ಮೂಲಕ ರೈತರ ಜಮೀನನ್ನು ಕನ್ವರ್ಷನ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.

ಇದೀಗ ಜಮೀರ್ ರೈತರ ಜಮೀನು ಕಬಳಿಕೆಗೆ ಮುಂದಾಗಿದ್ದಾರೆ. ರೈತರ ಜಮೀನು ಕಬಳಿಸಲು ಹೊಸ ಉಪಾಯವಾಗಿದೆ. 1974 ರಲ್ಲಿ ಆವತ್ತಿನ ಕಾಂಗ್ರೆಸ್ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ, ಇದು ರದ್ದಾಗಬೇಕು. ಈ ನೋಟಿಫಿಕೇಷನ್ ಮುಸಲ್ಮಾನರ ಪರವಾಗಿ ಮಾಡಲಾಗಿದೆ. ಇದು ವಕ್ಫ್ ಬೋರ್ಡ್ ಆಗಿ ಉಳಿದಿಲ್ಲ. ಮೊಹಮದ್ ಘೋರಿ, ಆದಿಲ್ ಷಾಹಿ ಬೋರ್ಡ್ ಆಗಿದೆ. ಎಲ್ಲೆಲ್ಲೂ ರೈತರ ಜಮೀನಿಗೆ ನೊಟೀಸ್ ಕೊಟ್ಟಿದ್ದಾರೆ. ರೈತರ ಭೂಮಿ, ಶಾಲೆ, ದೇವಸ್ಥಾನ, ಮಠಗಳನ್ನು ವಕ್ಫ್ ಜಾಗ ಅಂತ ಮಾಡಿದ್ದಾರೆ. ಇದು ತುಘಲಕ್ ಸರ್ಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಕಿಡಿ ಕಾರಿದ್ದಾರೆ.

Leave A Reply

Your email address will not be published.