Udupi: ಉಡುಪಿಯಲ್ಲಿ ʼಸುಲ್ತಾನ್‌ಪುರʼ ಹೆಸರು; ದಿಶಾಂಕ್ ಆಪ್ ಎಡವಟ್ಟು- ಜಿಲ್ಲಾಧಿಕಾರಿಯಿಂದ ಸ್ಪಷ್ಟನೆ
Udupi: ಉಡುಪಿ ನಗರದಲ್ಲಿ ಕಾಣಿಸಿಕೊಂಡು ಸುಲ್ತಾನ್ ಪುರ ಹೆಸರು ದಿಶಾಂಕ್ ಆಪ್‌ನಲ್ಲಿ ಇತ್ತು. ಈ ಬಗ್ಗೆ ಜಾಲತಾಣದಲ್ಲಿ ವೈರಲ್ ಆಗಿತ್ತು. ವಕ್ಫ್ ವಿವಾದದಿಂದ ಜನರು ತಮ್ಮ ತಮ್ಮ ಭೂಮಿಯ ದಾಖಲೆಗಳನ್ನು ಪರಿಶೀಲನೆ ಮಾಡುವ ಸಂದರ್ಭದಲ್ಲಿ ʼಸುಲ್ತಾನ್‌ಪುರʼ ಹೆಸರು ಶಿವಳ್ಳಿ ಗ್ರಾಮದ ಪಕ್ಕದಲ್ಲಿ ಕಂಡು ಬಂದಿದೆ.
ಇದೀಗ ಉಡುಪಿ ಜಿಲ್ಲಾಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. Dishank App ನಲ್ಲಿ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಸರ್ವೆ ನಂಬರ್ 120 ಮತ್ತು 85 ರಲ್ಲಿ SULTANAPURA ಎಂದು ದಾಖಲಾಗಿದ್ದು, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಕಂಡು ಬಂದಿದ್ದು, ಶಿವಳ್ಳಿ ಗ್ರಾಮದ ಸರ್ವೆ ನಂಬರ್ 12&85ರ ಗ್ರಾಮ ನಕಾಶೆಯನ್ನು ಲಗತ್ತಿಸಲಾಗಿದೆ. ಹಾಗೂ ಅಂತಹ ಹೆಸರು ಕಂದಾಯ ದಾಖಲೆಗಳಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕರು ಸದರಿ ಗ್ರಾಮದ ಪೂರ್ಣ ಗ್ರಾಮ ನಕಾಶೆಯನ್ನು www.landrecords.karnataka.gov.in ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. SULTANAPUR ಎಂದು ಗ್ರಾಮ ನಕಾಶೆಯಲ್ಲಿ ದಾಖಲಾಗಿಲ್ಲ. ಸರ್ವೆ ನಂಬರು 120 ರ ಆರ್‌ಟಿಸಿ ಯಲ್ಲಿ ಕೂಡಾ ಯಾವುದೇ ಉಲ್ಲೇಖ ಇಲ್ಲ. ಹಾಗಾಗಿ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.