Mangaluru : ಅಮೆಜಾನ್​ಗೆ 30 ಕೋಟಿಗೂ ಅಧಿಕ ಪಂಗನಾಮ – ಮಂಗಳೂರಿನಲ್ಲಿ ಇಬ್ಬರ ಬಂಧನ

Mangaluru : ಜಾಗತಿಕ ದೈತ್ಯ ಅಮೆಜಾನ್ ಕಂಪನಿಗೆ ಬರೋಬ್ಬರಿ 30 ಕೋಟಿ ಪಂಗನಾಮ ಹಾಕಿದ ಕಿರಾತಕರನ್ನು ಮಂಗಳೂರು ಪೊಲೀಸರು(Mangaluru Police ) ಬಂಧಿಸಿದ್ದಾರೆ.

ಹೌದು, ಅಮೆಜಾನ್‌ಗೆ 30 ಕೋಟಿ ರೂಪಾಯಿಗಳ ವಂಚನೆ ಮಾಡಿದ ಆರೋಪ ಅವರ ಮೇಲೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರು ರಾಜಸ್ಥಾನದಿಂದ ಬಂದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರಾಜಸ್ಥಾನದ ಧೋಪುರ್ ಜಿಲ್ಲೆಯ ನಿವಾಸಿ ರಾಜ್ ಕುಮಾರ್ ಮೀನಾ (23), ಕರೌಲಿ ಜಿಲ್ಲೆಯ ಸುಭಾಸ್ ಗುರ್ಜರ್ (27) ಎಂದು ಗುರುತಿಸಲಾಗಿದೆ. ಇವರು ಐದು ವರ್ಷಗಳಿಂದ ವಂಚನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಂದಹಾಗೆ ಆರೋಪಿಗಳು ಅಮೆಜಾನ್​ನಲ್ಲಿ ವಿವಿಧ ರೀತಿಯ ಬೆಲೆಬಾಳುವ ಸಾಮಗ್ರಿಗಳನ್ನು ಆರ್ಡರ್​​ ಮಾಡುತ್ತಿದ್ದರು. ವಸ್ತುಗಳ ಡಿಲೇವರಿ ಪಡೆಯಲು ಟೈಯರ್ ಟು ಸಿಟಿ ಲೋಕೆಷನ್ ಆಯ್ಕೆ ಮಾಡುತ್ತಿದ್ದರು. ಬುಕ್ ಮಾಡಿದ ವಸ್ತುಗಳನ್ನು ಡೆಲಿವರಿ ಪಡೆಯಲು ಆರೋಪಿಗಳು ವಿಮಾನದಲ್ಲಿ ಹೋಗುತ್ತಿದ್ದರು. ಐಟಂ ಬಾಕ್ಸಿನ ಟ್ರ್ಯಾಕಿಂಗ್ ಐಡಿಯನ್ನು ಅದಲು ಬದಲು ಮಾಡಿ ಅಮೆಜಾನ್ ಸಂಸ್ಥೆಗೆ ವಂಚಿಸುತಿದ್ದರು. ಹೀಗೆ 4-5 ವರ್ಷದಲ್ಲಿ ಇವರು ಅಮೆಜಾನ್​ನಿಂದ ಬರೊಬ್ಬರಿ 30 ಕೋಟಿ ದೋಚಿದ್ದಾರೆ.

ಆರೋಪಿಗಳು ಕಳೆದ‌ ಐದು ವರ್ಷಗಳಿಂದಲೂ ಈ ರೀತಿ ವಂಚನೆ ಮಾಡುತ್ತಿದ್ದಾರೆ. ತಮಿಳುನಾಡು, ಕೇರಳ, ಅಸ್ಸಾಂ, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ನೆಲೆಸಿ ವಂಚನೆ ಮಾಡಿದ್ದಾರೆ. ಆರೋಪಿಗಳು ಈವರೆಗೂ ಲಾಕ್ ಆಗಿರಲಿಲ್ಲ. ಆದರೆ, ಇದೀಗ ಮಂಗಳೂರಿನ(Mangaluru)ಉರ್ವಾ ಪೊಲೀಸರು ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply

Your email address will not be published.