Reduce shaving irritation: ಶೇವಿಂಗ್ ನಂತರ ಕಿರಿಕಿರಿ ಆಗುತ್ತಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
Reduce shaving irritation: ಗಡ್ಡ ಮೀಸೆ ಶೇವ್ ಮಾಡಿದ ನಂತರ ಬಹುತೇಕರಿಗೆ ತುರಿಕೆ, ಕಿರಿಕಿರಿ ಉಂಟಾಗಲು ಶುರುವಾಗುತ್ತೆ. ಕೆಲವು ಪುರುಷರ ಮುಖದ ಚರ್ಮ ಕೆಂಪಾಗಿ ಕಾಣುತ್ತದೆ. ಇನ್ನೂ ಕೆಲವು ಪುರುಷರ ಭುಜದ ಮೇಲೆ ರೇಜರ್ ಕಟ್‌ಗಳು ಕಾಣಿಸಿಕೊಳ್ಳುತ್ತವೆ ಮತ್ತು ಮುಖದಿಂದ ರಕ್ತ ಸೋರಲು ಪ್ರಾರಂಭಿಸುತ್ತದೆ. ಈ ಸಮಸ್ಯೆಗಳು ಪುರುಷರ ಸೂಕ್ಷ್ಮ ಚರ್ಮ ಅಥವಾ ಶೇವಿಂಗ್ ಕ್ರೀಮ್‌ನಿಂದ ಉಂಟಾಗಬಹುದು. ಶೇವಿಂಗ್ ನಂತರ ಇಂತಹ ಕಿರಿಕಿರಿಯನ್ನು ನಿವಾರಿಸುವುದು (Reduce shaving irritation) ಹೇಗೆ ಎಂದು ಇಲ್ಲಿ ತಿಳಿಸಲಾಗಿದೆ.
ನೀವು ಕ್ಷೌರ ಮಾಡಿದ ನಂತರ ನಿಮ್ಮ ಮುಖಕ್ಕೆ Aloe vera ಜೆಲ್ ಅನ್ನು ಹಚ್ಚಿ 10 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಹೀಗೆ ನೀವು ಇದನ್ನು 2-3 ಬಾರಿ ಮುಖಕ್ಕೆ ಹಚ್ಚಿದರೆ ಮುಖ ಕೆಂಪಾಗುವುದು ಮತ್ತು ಕಿರಿಕಿರಿಯಿಂದ ಪರಿಹಾರ ಸಿಗುತ್ತದೆ. Aloe vera ಜೆಲ್ ಅಲರ್ಜಿ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಅಂಶಗಳು ಮುಖದ ಊತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಅಥವಾ ತೆಂಗಿನ ಎಣ್ಣೆಯನ್ನು ಮುಖಕ್ಕೆ ನಿಧಾನವಾಗಿ ಹಚ್ಚಿ ಸ್ವಲ್ಪ ಸಮಯ ಬಿಡಿ. ನಂತರ ನೀರಿನಿಂದ ಮುಖ ತೊಳೆಯಿರಿ. ಇದು ಚರ್ಮವನ್ನು ಮೃದು ಮತ್ತು ತೇವವಾಗಿರಿಸುತ್ತದೆ. ಜೊತೆಗೆ ಕೆಂಪು ಮತ್ತು ಕಿರಿಕಿರಿಯೂ ಕಡಿಮೆಯಾಗುತ್ತದೆ.
ಅಥವಾ ಕ್ಷೌರದ ನಂತರ ಕೆಂಪು ಮತ್ತು ಕಿರಿಕಿರಿಯನ್ನು ನಿವಾರಿಸಲು ಅರಿಶಿನಕ್ಕೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಆ ನೀರಿನಿಂದ ಮುಖ ತೊಳೆಯಿರಿ. ಅರಿಶಿನದಲ್ಲಿರುವ ಗುಣಗಳು ಚರ್ಮದ ಕಿರಿಕಿರಿ ಮತ್ತು ಊತವನ್ನು ಕಡಿಮೆ ಮಾಡುತ್ತದೆ.