Mangaluru: ಹಲ್ಲೆ, ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳ ಪಾಸ್‌ಪೋರ್ಟ್‌ಗೆ ಸಿಕ್ತು ಪೊಲೀಸ್‌ ಕ್ಲಿಯರೆನ್ಸ್‌

Share the Article

Mangalore: ಹಲ್ಲೆ, ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಗಳಿಗೆ ಪೊಲೀಸರು ಕ್ಲಿಯರೆನ್ಸ್‌ ನೀಡಿರುವ ವಿಚಾರದ ಕುರಿತು ವರದಿಯಾಗಿದೆ.

ಕುಲಶೇಖರದ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಮಹಿಳೆ ಮತ್ತು ಆಕೆಯ ಸಂಬಂಧಿಕರೊಬ್ಬರಿಗೆ ಅವಾಚ್ಯವಾಗಿ ನಿಂದನೆ ಮಾಡಿ, ಕೆನ್ನೆಗೆ ಹೊಡೆದು, ತಲೆಯ ಜುಟ್ಟನ್ನು ಎಳೆದು, ಬುರ್ಖಾ ಹರಿದು ಹಾಕಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾವೂದ್‌ ಹಾಗೂ ಇತರ ನಾಲ್ವರ ವಿರುದ್ಧ 2023 ರ ಮೇ 13 ರಲ್ಲಿ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯದಲ್ಲಿ ಎವಿಡೆನ್ಸ್‌ ಹಂತದಲ್ಲಿ ಇರುವಾಗಲೇ ಸಿದ್ದಿಕ್‌ ಮತ್ತು ಇನ್ನೋರ್ವ ಆರೋಪಿ ಪಾಸ್‌ಪೋರ್ಟ್‌ಗೆಂದು ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಪೊಲೀಸ್‌ ಪರಿಶೀಲನೆಗೆಂದು ಬಂದಾಗ ಅರ್ಜಿದಾರರ ಮೇಲೆ ಯಾವುದೇ ಪ್ರಕರಣಗಳು ಇಲ್ಲ ಎಂದು ಕ್ಲಿಯರೆನ್ಸ್‌ ನೀಡಿದ್ದರು. ನಂತರ ಅವರಿಗೆ ಪಾಸ್‌ಪೋರ್ಟ್‌ ಕಚೇರಿಯಿಂದ ಪಾಸ್‌ಪೋರ್ಟ್‌ ನೀಡಲಾಗಿತ್ತು. ಈ ಕುರಿತು ಆಕ್ಷೇಪ ವ್ಯಕ್ತವಾದ ನಂತರ, ಪೊಲೀಸರು ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.

ಅರ್ಜಿದಾರರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾದ ಮಾಹಿತಿ ಕುರಿತು ಅಪ್‌ಡೇಟ್‌ ಆಗಿರಲಿಲ್ಲ. ಹಾಗಾಗಿ ನಿರಕ್ಷೇಪಣ ಪತ್ರ ನೀಡುವಾಗ ಕ್ರಿಮಿನಲ್‌ ಕೇಸ್‌ನ ಮಾಹಿತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದು, ನಂತರ ಕ್ರಿಮಿನಲ್‌ ಪ್ರಕರಣ ಇರುವ ಕುರಿತು ಮಾಹಿತಿ ಲಭ್ಯವಾಗಿದೆ, ಈ ಕುರಿತು ಪಾಸ್‌ಪೋರ್ಟ್‌ ಸೇವಾ ಕೇಂದ್ರಕ್ಕೆ ದಾಖಲೆ ಸಹಿತ ಮಾಹಿತಿ ನೀಡಲಾಗಿರುವ ಕುರಿತು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Leave A Reply