Actor Darshan : ಕೊಲೆ ಆರೋಪಿ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು; ದರ್ಶನ್‌ ಭೇಟಿಗೆ ಕೈದಿಗಳಿಂದ ತೀವ್ರ ಒತ್ತಾಯ

Actor Darshan: ದರ್ಶನ್‌ ಭೇಟಿಗೆ ಜೈಲಿನಲ್ಲಿರುವ ಕೈದಿಗಳಿಂದ ದರ್ಶನ್‌ನನ್ನು ನೋಡಬೇಕೆಂದು ಒತ್ತಾಯ ಹೆಚ್ಚಾಗಿದ್ದು, ಜೈಲಾಧಿಕಾರಿಗಳಿಗೆ ತಲೆನೋವಿನ ವಿಷಯ ಉಂಟಾಗಿದೆ. ಜೈಲಾಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ ಕೈದಿಗಳ ಬೇಡಿಕೆ. ಹಾಗೂ ಕೈದಿಗಳಿಂದ ಒತ್ತಡ ಹೆಚ್ಚಾಗಿದೆ. ದರ್ಶನ್‌ ಭೇಟಿಗೆ ಒತ್ತಾಯ ಮಾಡುತ್ತಿರುವ ಕೈದಿಗಳು.

 

ಇಂದು ವೈದ್ಯಕೀಯ ಆಧಾರದ ಮೇಲೆ ದರ್ಶನ್‌ಗೆ ಹೈಕೋರ್ಟ್‌ ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಿದೆ.

ಜೈಲಿನಿಂದ ಬಿಡುಗಡೆ ನಂತರ ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಅನಂತರ ತಮ್ಮ  ಅಮ್ಮನ ಆಶೀರ್ವಾದ ಪಡೆಯಲಿದ್ದಾರೆ ನಟ ದರ್ಶನ್‌. ಅನಂತರ ಡಾಕ್ಟರ್‌ ಸಲಹೆಯಂತೆ ಟ್ರೀಟ್‌ಮೆಂಟ್‌ ಪಡೆಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಕೋರ್ಟ್‌ ಕಂಡೀಷನ್ಸ್‌: ಚಿಕಿತ್ಸೆ ಕುರಿತ ಕಂಪ್ಲೀಟ್‌ ಮಾಹಿತಿಯನ್ನು ಕೋರ್ಟ್‌ಗೆ ನೀಡಬೇಕು.
ಪಾಸ್‌ಪೋರ್ಟ್‌ ನ್ನು ಕೋರ್ಟ್‌ಗೆ ಸರೆಂಡರ್‌ ಮಾಡಬೇಕು. ಎಲ್ಲೂ ವಿದೇಶಕ್ಕೆ ಹೋಗೋ ಹಾಗಿಲ್ಲ
ಬೇರೆ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ಅಂದರೆ ಶೂಟಿಂಗ್‌ಗೆ ಹೋಗುವಂತಿಲ್ಲ.
ಆರೋಪಿ ದರ್ಶನ್‌ ಇಚ್ಛಿಸಿದ ಆಸ್ಪತ್ರೆಗೆ ದಾಖಲಾಗಬಹುದು ಎಂದು ಹೈಕೋರ್ಟ್‌ ಹೇಳಿದೆ. 2.2 ಲಕ್ಷ ರೂಪಾಯಿ ಬಾಂಡ್‌, ಇಬ್ಬರ ಶ್ಯೂರಿಟಿ, ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕಬಾರದು, ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು, ಸಾಕ್ಷಿಗಳ ಸಂಪರ್ಕ ಮಾಡಬಾರದು,ಜಾಮೀನಿನ ದುರಪಯೋಗ ಮಾಡಿಕೊಳ್ಳಬಾರದು.

Leave A Reply

Your email address will not be published.