Actor Darshan: ಮಧ್ಯಂತರ ಜಾಮೀನು ಸಿಕ್ಕಿದ್ದಂತೆಯೇ ದರ್ಶನ್‌ ಮುಖದಲ್ಲಿ ಸಂತಸ!

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್‌ 11 ರಂದು ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್‌ ಅವರು ಬರೋಬ್ಬರಿ 131 ದಿನಗಳ ಬಳಿಕ ಮಧ್ಯಂತರ ಜಾಮೀನಿನ ಮೂಲಕ ಹೊರಗೆ ಬರುತ್ತಿದ್ದಾರೆ. ಹೀಗಾಗಿ ಕೊನೆಗೂ ದೀಪಾವಳಿಯ ಸಿಹಿ ಸುದ್ದಿ ದರ್ಶನ್‌ಗೆ ಲಭಿಸಿದೆ. ಕರ್ನಾಟಕ ರಾಜ್ಯ ಹೈಕೋರ್ಟ್‌ ದರ್ಶನ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

 

ಹೀಗಾಗಿ ದಾಸನ ಮುಖದಲ್ಲಿ ನಗು ಮೂಡಿದ್ದು, ಜೈಲಿನ ಸಿಬ್ಬಂದಿಗಳಲ್ಲಿ ತಮ್ಮ ಖುಷಿ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆಯಿಂದಲೇ ದರ್ಶನ್‌ ಅವರು ಜೈಲಿನಲ್ಲಿ ಎಲ್ಲರ ಜೊತೆ ಬಹಳ ಖುಷಿಯಿಂದಲೇ ಮಾತನಾಡುತ್ತಿದ್ದರು ಎನ್ನಲಾಗಿದೆ.

ಮಾನ್ಯ ನ್ಯಾಯಾಲಯವು ದರ್ಶನ್‌ ಅವರ ಆರೋಗ್ಯ ಸಮಸ್ಯೆಯನ್ನು ಪರಿಗಣನಗೆ ತೆಗೆದುಕೊಂಡಿದ್ದು, ಆರು ವಾರಗಳ ಅವಧಿಯ ಮಧ್ಯಂತರ ಜಾಮೀನು ನೀಡಲಾಗಿದೆ. ಮಧ್ಯಂತರ ಜಾಮೀನಿಗೆ ಹೈಕೋರ್ಟ್‌ ಸಾಕಷ್ಟು ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

Leave A Reply

Your email address will not be published.