Putturu : ‘ಬಿಲ್ಲವ ಸಮಾಜದ 1 ಲಕ್ಷ ಹೆಣ್ಣು ಮಕ್ಕಳು ವೇಶ್ಯೆಯರು’ ಎಂದು ಆರೋಪಿಸಿದ ಪ್ರಕರಣ – ಅರಣ್ಯಾಧಿಕಾರಿ ಸಂಜೀವ ಪೂಜಾರಿ ಬಂಧನಕ್ಕೆ ಹಿಂದೂ ಸಂಘಟನೆಗಳ ಪಟ್ಟು!!
Putturu : ಭಜನೆ ಮತ್ತು ಬಿಲ್ಲವ ಸಮುದಾಯದ ಯುವತಿರ ವಿರುದ್ದ ಹೇಳಿಕೆ ನೀಡಿದ್ದ ಅರಣ್ಯ ಇಲಾಖೆ ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ದ ಹಿಂದೂಪರ ಸಂಘಟನೆಗಳು ಪುತ್ತೂರು ಡಿವೈಎಸ್ಪಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿವೆ.
ಅರಣ್ಯ ಇಲಾಖೆ ಉಪ ಅರಣ್ಯಾಧಿಕಾರಿ ಸಂಜೀವ ಪೂಜಾರಿ(Sanjeeva Poojary ) ಹಿಂದೂ ಕಾರ್ಯಕರ್ತನೋರ್ವನೊಂದಿಗೆ ಮಾತನಾಡಿದ ಅಡಿಯೋದಲ್ಲಿ ಬಿಲ್ಲವ ಯುವತಿಯರಿಗೆ ಅವಹೇಳನ ಮಾಡಿದ್ದಾನೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿ ಸಂಜೀವ ಪೂಜಾರಿಯನ್ನು ತಕ್ಷಣ ಬಂಧಿಸುವಂತೆ ಹಿಂದೂ ಪರ ಸಂಘಟೆನೆಗಳು ಪ್ರತಿಭಟನೆ ಆರಂಭಿಸಿದೆ.
ಡಿವೈಎಸ್ಪಿ(DYSP) ಕಛೇರಿ ಮುಂಧೆ ಭಜನೆ ಮಾಡಿ ಧರಣಿ ನಡೆಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಧಿಕಾರಿಯನ್ನು ಬಂಧಿಸುವರೆಗೂ ಡಿವೈಎಸ್ಪಿ ಕಛೇರಿ ಮುಂದೆಯೇ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ. ಹೇಳಿಕೆ ಬೆನ್ನಲೇ ಸಂಜೀವ ಪೂಜಾರಿ ವಿರುದ್ಧ ಈಗಾಗಲೇ ಬೆಳ್ಳಾರೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಆದರೆ ಎಫ್‌ಐಆರ್ ನಲ್ಲಿ ಕ್ಷುಲ್ಲಕ ಸೆಕ್ಷನ್ ಹಾಕಿದ್ದಾರೆಂದು ಹಿಂದೂ ಸಂಘಟನೆಗಳ ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಸರ್ಕಾರಿ ಅಧಿಕಾರಿ ( Government Officer )ಯಾದ ಪಂಜ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಕಾಣಿಯೂರು ಹಿಂದೂ ( Hindu ) ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟದ್ದಾನೆ. ಹಿಂದೂ ಧರ್ಮದ ಒಂದು ಸಮಾಜಕ್ಕೆ ಸೇರಿದ ಒಂದು ಲಕ್ಷ ಹೆಣ್ಣುಮಕ್ಕಳು ವೇಶ್ಯೆಯರಿದ್ದಾರೆ ಎಂದು ಹೇಳಿಕೆ ನೀಡಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತ ಸುರೇಶ್ ಎಂಬುವರ ಜೊತೆ ದೂರವಾಣಿ ಮುಖಾಂತರ ಮಾತನಾಡುವಾಗ ಈ ಸ್ಟೇಟ್ಮೆಂಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಆಡಿಯೋದಲ್ಲಿ ಏನಿದೆ?
ದೂರವಾಣಿಯಲ್ಲಿ ಮಾತನಾಡುವಾಗ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಸಮಾಜಕ್ಕೆ ಸೇರಿದ ಒಂದು ಲಕ್ಷ ಹುಡುಗಿಯರು ವೇಶ್ಯೆಯಾಗಿದ್ದಾರೆ. ಇದಕ್ಕೆ ನನ್ನ ಬಳಿ 10,000 ದಾಖಲೆಗಳಿವೆ. ಹಿಂದುತ್ವದ ಹುಡುಗರು ವೇಶ್ಯೆಯರನ್ನಾಗಿ ಮಾಡಿದ್ದಾರೆ. ಒಂದು ಸಮಾಜದ ಒಂದು ಲಕ್ಷ ಹುಡುಗಿಯರು ವೇಶ್ಯೆಯರಾಗಲು ಹಿಂದೂ ಸಂಘಟನೆಯ ಯುವಕರು ಕಾರಣರಾಗಿದ್ದಾರೆ. ಭಜನೆ ಮಾಡಿದ ಹಿಂದೂ ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದೂ ಹುಡುಗರು” ಎಂದು ಹಿಂದೂ ಹೆಣ್ಣುಮಕ್ಕಳ ಬಗ್ಗೆ ತೀರ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.